November 15, 2024

Newsnap Kannada

The World at your finger tips!

cows

ಗೋ ಹತ್ಯೆ ನಿಷೇಧ‌ ಮಸೂದೆಯ ಪ್ರಮುಖ ಅಂಶಗಳು ಯಾವವು?

Spread the love

ರಾಜ್ಯ ಬಿಜೆಪಿ ಸರ್ಕಾರ ಇಂದು ವಿಧಾನಸಭಾ ಅಧಿವೇಶನದಲ್ಲಿ ಮಂಡಿಸಿ ಅಂಗೀಕಾರ ಮಾಡಿದ ಗೋಹತ್ಯೆ ತಡೆ ಮಸೂದೆಯ ಇರುವ ಪ್ರಮುಖ‌ ಅಂಶಗಳು ಹೀಗಿವೆ

1) ಹಸು, ಕರು, ದನ, ಎತ್ತು, ಕೋಣ, ಎಮ್ಮೆಗಳ ಹತ್ಯೆ ನಿಷೇಧ

2) ಗೋ ಹತ್ಯೆ, ಗೋ ಸಾಗಣೆ ಪೂರ್ಣ ನಿರ್ಬಂಧ

3) ಗೋ ಹತ್ಯೆಗೆ 50,000ದಿಂದ 5 ಲಕ್ಷವರೆಗೆ ದಂಡ

4) ಗೋ ಹತ್ಯೆಗೆ 3ರಿಂದ 7 ವರ್ಷವರೆಗೆ ಜೈಲು ಶಿಕ್ಷೆ

5) ಇದೇ ಕೇಸಲ್ಲಿ 2ನೇ ಸಲ ಸಿಕ್ಕಿಬಿದ್ದರೆ 10 ಲಕ್ಷ ದಂಡ

6) 13 ವರ್ಷ ಮೇಲ್ಪಟ್ಟ ಎಮ್ಮೆಗಳ ಹತ್ಯೆಗೆ ಸಮ್ಮತಿ

ಗುಜರಾತ್, ಉತ್ತರ ಪ್ರದೇಶ ಮಾದರಿಯಲ್ಲಿ ಕಾಯಿದೆ ಮಾಡಿರುವ ಸರ್ಕಾರ.

  • ಕೃಷಿ ಹಾಗೂ ಪಶುಸಂಗೋಪನೆ ಉದ್ದೇಶಕ್ಕಾಗಿ ಗೋ ಸಾಟಕ್ಕೆ ಅಧಿಕಾರಿಗಳ ಅನುಮತಿ ಅಗತ್ಯ
    ಕೇಂದ್ರ ಸರ್ಕಾರದ ನಿಯಮಗಳ ಪ್ರಕಾರ ಸಾಗಾಟ ಮಾಡಬೇಕು.
  • ನಿಯಮ ಉಲ್ಲಂಘನೆ ಮಾಡಿದರೆ ಮೂರು ವರ್ಷದಿಂದ ಐದು ವರ್ಷದ ವರೆಗೆ ಜೈಲು ಶಿಕ್ಷೆ ಹಾಗೂ ಐವತ್ತು ಸಾವಿರ ದಂಡ.
  • ಎಸ್ ಐ ಶ್ರೇಣಿ ಹಾಗೂ ಅದಕ್ಕಿಂತ ಮೇಲ್ಪಟ್ಟ ಅಧಿಕಾರಿಗಳು ತಪಾಸಣೆ ಹಾಗೂ ಮುಟ್ಟುಗೋಲು ಮಾಡಲು ಕಾಯ್ದೆಯಲ್ಲಿ ಅಧಿಕಾರ.
  • ಮುಟ್ಟುಗೋಲು ಹಾಕಿದ ಕೂಡಲೇ ಸಂಬಂಧಿತ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಗೆ ವರದಿ ಮಾಡಬೇಕು.
    ಗೋ ಹತ್ಯೆಗೆ ಸಂಬಂಧಿಸಿದಂತೆ ಸಾಗಾಟ ಮಾಡಿದ ವಾಹನಗಳು ಹಾಗೂ ಇತರ ಸಲಕರಣೆಗಳನ್ನು ಆರೋಪಿಗೆ ಹಿಂದುರಿಗಿಸಲು ಬ್ಯಾಂಕ್ ಗ್ಯಾರಂಟಿ ನೀಡಬೇಕು.
  • ಗೋ ಹತ್ಯೆ ಪ್ರಕರಣಗಳ ವಿಚಾರಣೆಗಾಗಿ ವಿಶೇಷ ನ್ಯಾಯಾಲಯ ರಚನೆಗೆ ಅಧಿಕಾರ ಕಾಯ್ದೆಯಿಂದ ವಿನಾಯಿತಿ.
  • ಸಂಶೋಧನಾ ಉದ್ದೇಶಕ್ಕಾಗಿ ಬಳಸುವ ಗೋವುಗಳಿಗೆ ವಿನಾಯಿತಿ.
  • ಪಶು ವೈಧ್ಯಾಧಿಕಾರಿ ದೃಢೀಕರಿಸಿದ ಗೋ ಹತ್ಯೆ ಮಾಡಲು ಅವಕಾಶ.
    ಯಾವುದೇ ರೋಗಗಳಿಂದ ಬಳಲುತ್ತಿರುವ ಗೋವುಳ ಹತ್ಯೆಗೆ ಅವಕಾಶ. !
Copyright © All rights reserved Newsnap | Newsever by AF themes.
error: Content is protected !!