December 22, 2024

Newsnap Kannada

The World at your finger tips!

monalisa

ಪಶ್ಚಿಮ ಬಂಗಾಲ Scam: ಇನ್ನೊಬ್ಬ ಸುಂದರಿ ಹೆಸರಲ್ಲಿ 10 ಫ್ಲಾಟ್‌-ED ಕಣ್ಣು ಈಗ ಮೊನಾಲಿಸಾಳ ಮೇಲೆ

Spread the love

ಪಾರ್ಥ ಚಟರ್ಜಿಯ ಮತ್ತೊಬ್ಬಳು ಮಹಿಳಾ ನಿಕಟವರ್ತಿ ಬಗ್ಗೆ ರಹಸ್ಯ ಬಯಲಾಗಿದೆ. ಈ ಸುಂದರಿ 10 ಫ್ಲ್ಯಾಟ್​ಗಳ ಒಡತಿಯಾಗಿದ್ದಾಳೆ.

ಇಡಿಗೆ ಈ ಬಗ್ಗೆ ಸುಳಿವು ಸಿಕ್ಕಿದೆ. ಈಕೆ ಬಳಿ ಇರೋದು ಪಾಥ್ ಚಟರ್ಜಿಯವರ ಅಕ್ರಮ ಸಂಪತ್ತು ಎಂಬ ಬಗ್ಗೆಯೂ ಜಾರಿ ನಿರ್ದೇಶನಾಲಯಕ್ಕೆ ಅನುಮಾನ ಬಂದು , ಆ ದೃಷ್ಠಿಕೋನದಲ್ಲಿ ತನಿಖೆ ನಡೆದಿದೆ.

ಮಿನಿಸ್ಟರ್​ ಚಟರ್ಜಿಯ ಮತ್ತೊಬ್ಬ ಆಪ್ತೆ ಬ್ಯೂಟಿ ಪ್ರೊಫೆಸರ್​ ಮೊನಾಲಿಸಾ ದಾಸ್​ ಆಸ್ತಿ ಮೇಲೆ ಕಣ್ಣಿಟ್ಟ ED ಅಧಿಕಾರಿಗಳು ನಟಿ ಅರ್ಪಿತಾ ಮುಖರ್ಜಿ ಮನೆಯಲ್ಲಿ 21 ಕೋಟಿ ಹಣದ ರಾಶಿ ಸಿಕ್ಕ ನಂತರ ಅರ್ಪಿತಾ ತನಿಖೆ ವೇಳೆ ಬಾಯಿ ಬಿಟ್ಟ ಹೆಸರು ಎಂದರೆ ಮತ್ತೊಬ್ಬ ಸುಂದರಿ ಮೊನಾಲಿಸಾ ದಾಸ್.

ಪಶ್ಚಿಮ ಬಂಗಾಳದಲ್ಲಿ ಶಿಕ್ಷಕರಣ ನೇಮಕಾತಿ ಹಗರಣದಲ್ಲಿ ಮೊನಾಲಿಸಾ ದಾಸ್​ ಹೆಸರು ಕೇಳಿ ಬಂದಿದೆ. ಮೊನಾಲಿಸಾ ದಾಸ್​ ಕಾಜಿ ನಜ್ರುಲ್ ವಿವಿಯ ಬಂಗಾಳಿ ವಿಭಾಗದ ಮುಖ್ಯಸ್ಥರಾಗಿ ಕೆಲಸ ಮಾಡ್ತಿದ್ದಾರೆ. 2013ರಲ್ಲಿ ಬಂಗಾಳಿ ವಿಭಾಗದ ಮುಖ್ಯಸ್ಥರನ್ನಾಗಿ ಇವರು ನೇಮಕವಾದರು ಸಹಾಯಕ ಪ್ರಾಧ್ಯಾಪಕರಿಂದ ನೇರ ಸಹ ಪ್ರಾಧ್ಯಾಪಕರ ಶ್ರೇಣಿಗೆ ಬಡ್ತಿ ಪಡಿದ್ದಾರೆ. ಬೆಂಗಳೂರಿನಲ್ಲಿ ಲಷ್ಕರ್ ಉಗ್ರನ ಬಂಧನ – ಫುಡ್ ಡೆಲವರಿ ಬಾಯ್ ಆಗಿದ್ದ ಉಗ್ರ

ಸಚಿವ ಪಾರ್ಥ ಚಟರ್ಜಿಯ ನಿಕಟ ಒಡನಾಟದಿಂದಲೇ ಈ ಹುದ್ದೆ ಸಿಕ್ಕಿದೆ ಎನ್ನುವ ಆರೋಪವೂ ಇದೆ. ಬೀರ್ಭೂಮ್‌ನ ಶಾಂತಿನಿಕೇತನದಲ್ಲಿರುವ ಐಷಾರಾಮಿ ಅಪಾರ್ಟ್​ಮೆಂಟ್​ಗಳಲ್ಲಿ 10 ಫ್ಲಾಟ್‌ಗಳು ಇವರ ಒಡೆತನದಲ್ಲಿವೆ.ಇಷ್ಟೊಂದು ಆಸ್ತಿ ಹೊಂದಲು ಮೊನಾಲಿಸಾ ಹಣದ ಮೂಲ ಯಾವುದು ಎಂಬುದನ್ನು ಪತ್ತೆ ಮಾಡುತ್ತಿದ್ದಾರೆ

ಬಂಧನದಲ್ಲಿರುವ ಸಚಿವ ಈಗ ಐಸಿಯುನಲ್ಲಿ :

ಇನ್ನು ಶಿಕ್ಷಕರ ನೇಮಕಾತಿ ಹಗರಣದಲ್ಲಿ ಇಡಿ ವಶದಲ್ಲಿರುವ ಸಚಿವ ಪಾರ್ಥ ಚಟರ್ಜಿಯ ಆರೋಗ್ಯದಲ್ಲಿ ಏರುಪೇರಾಗಿದೆ. ಅವರನ್ನು ಎಸ್‌ಎಸ್‌ಕೆಎಂ ಆಸ್ಪತ್ರೆಯ ಐಸಿಯುನಿಂದ ಹೃದ್ರೋಗ ವಿಭಾಗಕ್ಕೆ ಸ್ಥಳಾಂತರಿಸಲಾಗಿದೆ ಎಂದು ತಿಳಿದು ಬಂದಿದೆ.

ಜಾರಿ ನಿರ್ದೇಶನಾಲಯದ ವಶಕ್ಕೆ ಒಪ್ಪಿಸಿದ್ದ ಸಚಿವನನ್ನು ಬ್ಯಾಂಕ್‌ಶಾಲ್ ನ್ಯಾಯಾಲಯ, ಚಟರ್ಜಿಯನ್ನು ಆಸ್ಪತ್ರೆಗೆ ದಾಖಲಿಸುವಂತೆ ಆದೇಶಿಸತ್ತು. ಈ ಆದೇಶವನ್ನು ಪ್ರಶ್ನಿಸಿ, ಇಡಿ ಕೋಲ್ಕತ್ತಾ ಹೈಕೋರ್ಟ್​ ಮೆಟ್ಟಿಲೇರಿದೆ.

Copyright © All rights reserved Newsnap | Newsever by AF themes.
error: Content is protected !!