December 24, 2024

Newsnap Kannada

The World at your finger tips!

saltorabauribjp 1620018060

ಪಶ್ಚಿಮ ಬಂಗಾಳ ಚುನಾವಣೆ ವಿಶೇಷ:ಕೋಟ್ಯಾಧಿಪತಿ ಸೋಲಿಸಿದ ಮನೆ ಕೆಲಸದಾಕೆ

Spread the love

ಪಶ್ಚಿಮ ಬಂಗಾಳದ ಸಲ್ತೋರಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಮನೆಗೆಲಸ ಮಾಡಿಕೊಂಡಿದ್ದ ಚಂದನಾ ಬೌರಿ ಕೋಟ್ಯಾಧಿಪತಿ ಎದುರಾಳಿಯನ್ನು ಸೋಲಿಸಿ ಅಚ್ಚರಿ ಮೂಡಿಸಿದ್ದಾರೆ.

ಚಂದನಾ ಬೌರಿ ಒಟ್ಟು 91,648 ಮತಗಳನ್ನು ಪಡೆದು 87,503 ಮತ ಪಡೆದ ಟಿಎಂಸಿ ಅಭ್ಯರ್ಥಿ ಸಂತೋಷ್ ಕುಮಾರ್ ಮೊಂಡಾಲ್ ವಿರುದ್ಧ 4, 145 ಮತಗಳ ಅಂತರದಲ್ಲಿ ಗೆದ್ದಿದ್ದಾರೆ.

ಬಾಂಕೂರಾ ಜಿಲ್ಲೆಯ ಸಾಲ್ ತೋರಾ ಎಸ್‍ಸಿ ಮೀಸಲು ವಿಧಾನಸಭಾ ಕ್ಷೇತ್ರಕ್ಕೆ ಚಂದನಾ ಬೌರಿ ಬಿಜೆಪಿ ಕಣಕ್ಕಿಳಿಸಿತ್ತು.

ಚಂದನಾ ಆಸ್ತಿ‌ ಎಷ್ಟುಗೊತ್ತಾ?

ಚಂದನಾ ಬೌರಿ 10ನೇ ತರಗತಿ ಪಾಸ್.‌ ಅವರ ದಿನದ ಆದಾಯ ಕೇವಲ 400 ರು. . ಅವರ ಬ್ಯಾಂಕ್ ಖಾತೆಯಲ್ಲಿ 31, 985 ರೂಪಾಯಿ ಹಣವಿದೆ. ಮೂರು ಮೇಕೆ ತಂದೆಯಿಂದ ಬಳುವಳಿಯಾಗಿ ಬಂದ 3 ಹಸು ಹಾಗೂ ಒಂದು ಮಣ್ಣಿನ ಮನೆ ಇದೆ.

ಟಿಎಂಸಿ ಅಭ್ಯರ್ಥಿ ಸಂತೋಷ್ ಕುಮಾರ್ ಮೊಂಡಾಲ್ ಒಟ್ಟು ಆಸ್ತಿ ವಿವರ 2.7 ಕೋಟಿ ಎಂದು ಘೋಷಿಸಿದ್ದಾರೆ. ಸಂತೋಷ್ ಕುಮಾರ್ ಸ್ವಂತ ಕ್ರಷರ್ ಹೊಂದಿದ್ದಾರೆ. ದಿನಗೂಲಿ ಕಾರ್ಮಿಕ ವ್ಯಕ್ತಿ ಪತ್ನಿ , ಈ ಕೋಟ್ಯಾಧಿಪತಿಯ ವಿರುದ್ಧ ಗೆಲವು ಸಾಧಿಸಿರುವುದು ಅಚ್ಚರಿಯನ್ನುಂಟು ಮಾಡಿದೆ.

Copyright © All rights reserved Newsnap | Newsever by AF themes.
error: Content is protected !!