ಎಲ್ಲವೂ ಸರಿಯಿದ್ದಿದ್ದರೆ ಕೆಜಿಎಫ್-2 ಸಿನಿಮಾ ಇಷ್ಟೊತ್ತಿಗೆ ಚಿತ್ರಮಂದಿರಕ್ಕೆ ಬರುವ ತಯಾರಿಯಲ್ಲಿರುತ್ತಿತ್ತು. ಕೊರೊನಾ ವೈರಸ್ ಬಂದು ಎಲ್ಲವನ್ನು ಉಲ್ಟಾಪಲ್ಟ ಮಾಡಿದೆ. ಈ ನಿರಾಸೆಯ ನಡುವೆಯೂ ಕೆಜಿಎಫ್-2 ಕುರಿತಾದ ಕುತೂಹಲ ಸ್ವಲ್ಪವೂ ಕಡಿಮೆಯಾಗಿಲ್ಲ.
ಅಂದುಕೊಂಡಿದ್ದ ದಿನಾಂಕಕ್ಕೆ ಸಿನಿಮಾ ಅಂತೂ ಬಂದಿಲ್ಲ. ಟೀಸರ್ ಅಥವಾ ಪೋಸ್ಟರ್ ಆದರೂ ಬಿಡುಗಡೆ ಮಾಡಿ ಅಂತ ಅಭಿಮಾನಿಗಳು ಬೇಡಿಕೆಯಿಡುತ್ತಿದ್ದಾರೆ. ದಸರಾ ಹಬ್ಬದ ಪ್ರಯುಕ್ತ ಕೆಜಿಎಫ್ ಟೀಸರ್ ಬೇಕು ಎಂದು ಅಭಿಯಾನ ಸಹ ನಡೆಯುತ್ತಿದೆ.
ಎಲ್ಲವೂ ಸರಿಯಾಗಿ ಇದ್ದಿದ್ದರೆ ಅಕ್ಟೋಬರ್ 23ಕ್ಕೆ ಕೆಜಿಎಫ್-2 ಸಿನಿಮಾ ನೋಡುತ್ತಿದ್ವಿ ಎಂಬ ಬೇಸರವನ್ನು ಅಭಿಮಾನಿಗಳು ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಮೇಮ್ಸ್, ಟ್ರೋಲ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ದಸರಾ ಹಬ್ಬದ ಪ್ರಯುಕ್ತ ಬೇರೆ ನಟರ ಚಿತ್ರಗಳು ಪೋಸ್ಟರ್ ಬಿಡುಗಡೆ ಮಾಡುತ್ತಿದೆ. ಆದರೆ, ಯಶ್ ಅಭಿಮಾನಿಗಳಿಗಾಗಿ ಟೀಸರ್ ಆದರೂ ರಿಲೀಸ್ ಮಾಡಿ ಎಂದು ಫ್ಯಾನ್ಸ್ ಒತ್ತಾಯಿಸುತ್ತಿದ್ದಾರೆ.
ಸೆಪ್ಟೆಂಬರ್ ತಿಂಗಳಿಂದ ಕೆಜಿಎಫ್-2 ಚಿತ್ರೀಕರಣ ಆರಂಭವಾಗಿದೆ. ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಸದ್ಯಕ್ಕೆ ಶೂಟಿಂಗ್ ನಡೆದಿದೆ. ನವೆಂಬರ್‌ನಲ್ಲಿ ಸಂಜಯ್ ದತ್ ಚಿತ್ರೀಕರಣಕ್ಕೆ ಪಾಲ್ಗೊಳ್ಳಲಿದ್ದಾರೆ. ಸಂಜಯ್ ದತ್ ಭಾಗದ ಶೂಟಿಂಗ್ ಮುಗಿದರೇ ಬಹುತೇಕ ಸಿನಿಮಾ ಮುಗಿದಂತೆ. ಹೇಗೆ ಲೆಕ್ಕಾಚಾರ ಹಾಕಿದ್ರೂ 2021ರ ಬೇಸಿಗೆಯೊಳಗೆ ಕೆಜಿಎಫ್-2 ಬರಬಹುದು.
- SBIನಲ್ಲಿ 600 ಪ್ರೊಬೇಷನರಿ ಆಫೀಸರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
- ನಾಳೆಗಾಗಿ ಬಾಳಬೇಕು ಕೇಳು ನೊಂದ ಜೀವವೇ..!
- ತುಪ್ಪ ಎಂಬ ಮಹಾ ಔಷಧಿ
- ಸಂಸತ್ ಕಟ್ಟಡದ ಬಳಿ ಬೆಂಕಿ ಹಚ್ಚಿಕೊಂಡ ಯುವಕ ಚಿಕಿತ್ಸೆ ಫಲಕಾರಿಯಾಗದೆ ಸಾವು
- ಕರ್ತವ್ಯದ ವೇಳೆ ಬ್ರೈನ್ಸ್ಟ್ರೋಕ್ಗೆ ಬಲಿಯಾದ ಅರಣ್ಯ ಇಲಾಖೆ ನೌಕರ
More Stories
SBIನಲ್ಲಿ 600 ಪ್ರೊಬೇಷನರಿ ಆಫೀಸರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
ನಾಳೆಗಾಗಿ ಬಾಳಬೇಕು ಕೇಳು ನೊಂದ ಜೀವವೇ..!
ತುಪ್ಪ ಎಂಬ ಮಹಾ ಔಷಧಿ