February 21, 2026

Newsnap Kannada

The World at your finger tips!

punith

ಪವರ್ ಸ್ಟಾರ್‌ಗೆ ಅಪ್ಪುಗೆ ಕಲ್ಯಾಣ ಕರ್ನಾಟಕ ಕಲಬುರಗಿಯಲ್ಲಿ ಅದ್ದೂರಿ ಸ್ವಾಗತ

Spread the love

ಕಲ್ಯಾಣ ಕರ್ನಾಟಕ ನಾಮಕರಣದ ನಂತರ ಇದೇ ಮೊದಲ ಬಾರಿಗೆ
ಕಲಬುರಗಿಗೆ ಸ್ಯಾಂಡಲ್‍ವುಡ್ ನಟ ಪವರ್ ಸ್ಟಾರ್ ಅಪ್ಪು (ಪುನೀತ್ ರಾಜ್ ಕುಮಾರ್) ಭಾನುವಾರ ಆಗಮಿಸಿದಾಗ ಅದ್ದೂರಿಯಾಗಿ ಸ್ವಾಗತಿಸಲಾಯಿತು.‌

ಕನ್ನಡದ ಬಹುನಿರೀಕ್ಷಿತ ಚಿತ್ರ ‘ಯುವರತ್ನ’ ಸಿನಿಮಾದ ಪ್ರಚಾರಕ್ಕಾಗಿ ತಮ್ಮ ಚಿತ್ರತಂಡದೊಂದಿಗೆ ನಟ ಅಪ್ಪು ಕಲಬುರಗಿಗೆ ಆಗಮಿಸಿದ್ದಾರೆ.

ಪುನೀತ್ ಜೊತೆಯಲ್ಲಿ ಧನಂಜಯ್, ರವಿಶಂಕರ್ ಹಾಗೂ ಚಿತ್ರದ ನಿರ್ದೇಶಕ ಸಂತೋಷ್ ಆನಂದರಾಮ್ ಜೊತೆ ಪ್ರಸಿದ್ಧ ಶರಣಬಸವೇಶ್ವರ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದರು.

ನಟ ದೇವಸ್ಥಾನದ ಆವರಣಕ್ಕೆ ಎಂಟ್ರಿಯಾಗುತ್ತಿದ್ದಂತೆಯೇ ಅವರಿಗೆ ಭರ್ಜರಿ ಸ್ವಾಗತ ನೀಡಲಾಯಿತು.

ನೆಚ್ಚಿನ ನಟ ಪುನೀತ್ ಅವರಿಗೆ ಜೆಸಿಬಿ ಮೂಲಕ ಪುಷ್ಪವೃಷ್ಟಿ ಮಾಡಿ ತಮ್ಮ ನೆಚ್ಚಿನ ನಟನನ್ನು ನಗರದ ಜನತೆ ಬರಮಾಡಿಕೊಂಡಿದ್ದಾರೆ.
ಈ ವೇಳೆ ಅಭಿಮಾನಿಗಳು ಅಪ್ಪು ಅಪ್ಪು ಎಂದು ಜೋರಾಗಿ ಕೂಗುತ್ತಾ ಜೈಕಾರ ಕೂಗಿ ಖುಷಿ ಪಟ್ಟರು.

error: Content is protected !!