ರಾಜ್ಯದಲ್ಲಿ ಮತ್ತೆ ವೀಕೆಂಡ್ ಕರ್ಫ್ಯೂ ಜಾರಿ : ನೈಟ್​ ಕರ್ಫ್ಯೂ ಮುಂದುವರಿಕೆ- ಆರ್.ಅಶೋಕ್​​

Team Newsnap
2 Min Read

ಕೊರೊನಾ-ಒಮಿಕ್ರಾನ್ ನಿಯಂತ್ರಣಕ್ಕೆ ಮಂಗಳವಾರ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಿತು.

ತಜ್ಞರೊಂದಿಗೆ ಸಭೆ ನಡೆದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಕಂದಾಯ ಸಚಿವ ಆರ್ ಅಶೋಕ್​ ಮುಖ್ಯಾಂಶಗಳನ್ನು ವಿವರಿಸಿದರು.

ಬೆಂಗಳೂರಿನಲ್ಲಿ 9ನೇ ತರಗತಿವರೆಗೂ ಆಪ್​​ಲೈನ್​ ಕ್ಲಾಸ್​.. 10 ಮತ್ತು 12 ತರಗತಿ ಹೊರತು ಪಡಿಸಿ ಎಲ್ಲಾ ತರಗತಿಗಳು ಆಫ್​ ಲೈನ್​ ಕ್ಲಾಸ್​​ಗೆ ಮಾತ್ರ ಅವಕಾಶ ನೀಡಲಾಗಿದೆ. ನಾಳೆ10 ಗಂಟೆಯಿಂದ ನಿಯಮಗಳು ಜಾರಿ ಆಗಲಿದೆ ಎಂದರು

ಬೆಂಗಳೂರಿನಲ್ಲಿ ಈಗ 3048 ಸೋಂಕಿತರು 147 ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗಿದೆ.

ಕೊರೊನಾ ಪ್ರಕರಣಗಳ ಸಂಖ್ಯೆ ಎರಡು ಮೂರು ದಿನಗಳಲ್ಲಿ ಡಬಲ್​ ಆಗುತ್ತಿದೆ. ಮಹಾರಾಷ್ಟ್ರದಲ್ಲಿ 10 ಸಾವಿರ ಕೇಸ್​ ಆಗಿದೆ. ಆದ್ದರಿಂದ ರಾಜ್ಯದಲ್ಲಿ, ಅದರಲ್ಲೂ ಬೆಂಗಳೂರಿನಲ್ಲಿ ನಿಯಮಗಳನ್ನು ಜಾರಿ ಮಾಡುವ ಅಗತ್ಯ ಇದೆ. ಆದ್ದರಿಂದ ಸಭೆಯಲ್ಲಿ ಚರ್ಚೆ ನಡೆಸಿ ಕೆಲವು ನಿರ್ಧಾರ ಮಾಡಿದ್ದೇವೆ ಎಂದು ಅಶೋಕ್ ತಿಳಿಸಿದರು.

1) ಬೆಂಗಳೂರಿಗೆ ಪ್ರತ್ಯೇಕ, ರಾಜ್ಯಕ್ಕೆ ಪ್ರತ್ಯೇಕ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗುವುದು

2) ಬೆಂಗಳೂರಿನಲ್ಲಿ 9ನೇ ತರಗತಿವರೆಗೂ ಆಪ್​​ಲೈನ್​ ಕ್ಲಾಸ್​.. 10 ಮತ್ತು 12 ತರಗತಿ ಹೊರತು ಪಡಿಸಿ ಎಲ್ಲಾ ತರಗತಿಗಳು ಆಫ್​ ಲೈನ್​ ಕ್ಲಾಸ್​​ಗೆ ಮಾತ್ರ ಅವಕಾಶ ನೀಡಲಾಗಿದೆ. ನಾಳೆ 10 ಗಂಟೆಯಿಂದ ನಿಯಮಗಳು ಜಾರಿ ಆಗಲಿದೆ.

3) ಮುಂದಿನ ಎರಡು ವಾರ ಶಾಲೆಗಳು ಕ್ಲೋಸ್.. ಬೆಂಗಳೂರಿನಲ್ಲಿ 10 ಮತ್ತು 12 ತರಗತಿ ಮಾತ್ರ ಓಪನ್..

4) ರಾಜ್ಯದಲ್ಲಿ ಮುಂದಿನ ಎರಡು ವಾರ ಅಂದರೇ ಜನವರಿ 6ರ ಶುಕ್ರವಾರ ಸಂಜೆಯಿಂದ ವೀಕೆಂಡ್​​ ಕರ್ಫ್ಯೂ ಜಾರಿ ಆಗಲಿದೆ.. ಎರಡು ವಾರ ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂ ಜಾರಿ ಆಗಲಿದೆ.

5) ಚಿತ್ರ ಮಂದಿರ, ಬಾರ್, ಮಾಲ್​, ಪಬ್​ಗಳಲ್ಲಿ 50:50 ಜನರಿಗೆ ಅಷ್ಟೇ ಅವಕಾಶ

6) ಮದುವೆ ಕಾರ್ಯಕ್ರಮದಲ್ಲಿ ಹೊರಾಂಗಣದಲ್ಲಿ 200 ಜನರಿಗೆ, ಒಳಾಂಗಣದಲ್ಲಿ 100 ಜನರಿಗೆ ಮಾತ್ರ ಅವಕಾಶ

7) ಬಸ್​, ಮೆಟ್ರೋದಲ್ಲಿ ನಿಂತು ಪ್ರಯಾಣ ಮಾಡುವಂತಿಲ್ಲ.. ಬಿಎಂಟಿಸಿ, ಮೆಟ್ರೋ ಪ್ರತ್ಯೇಕ ಮಾರ್ಗಸೂಚಿ ನೀಡುತ್ತೇವೆ.

8) ರಾಜ್ಯದಲ್ಲಿ ಪ್ರತಿಭಟನೆ ಹಾಗೂ ಜಾತ್ರೆ, ಮೆರವಣಿಗೆ, ಜನಜಂಗುಳಿ ಮಾಡುವಂತಿಲ್ಲ..

9) ಅತಿ ಹೆಚ್ಚು ಸೋಂಕಿತರು ಬಂದರೇ ಆಸ್ಪತ್ರೆಗಳ ಮೇಲೆ ಒತ್ತಡ ಆಗಲಿದೆ.. ಆದ್ದರಿಂದಲೇ ಸರ್ಕಾರ ಮುಂದಾಲೋಚನೆ ಮಾಡಿ ತೀರ್ಮಾನಗಳನ್ನು ಕೈಗೊಂಡಿದೆ ಎಂದು ಸ್ಪಷ್ಟಪಡಿಸಿದರು.

Share This Article
Leave a comment