January 11, 2025

Newsnap Kannada

The World at your finger tips!

someshwara

ಒಕ್ಕಲಿಗರಿಗೆ ಪ್ರತ್ಯೇಕ ರಾಜ್ಯದ ಧ್ವನಿಮೊಳಗಿಸುತ್ತೇವೆ-ಸೋಮೇಶ್ವರನಾಥ ಸ್ವಾಮೀಜಿ ಎಚ್ಚರಿಕೆ

Spread the love

ಒಕ್ಕಲಿಗ ಸಮುದಾಯವನ್ನು ತುಳಿಯುವುದು ಮುಂದುವರೆದರೆ, ನಮ್ಮ ಹಕ್ಕಿನ ಮೀಸಲಾತಿ ನಿರಾಕರಿಸಿ ನಾವು ಪ್ರತ್ಯೇಕ ರಾಜ್ಯದ ಹೋರಾಟಕ್ಕೂ ಸೈ ಎಂದು ಆದಿಚುಂಚನಗಿರಿ ಮೈಸೂರು ಶಾಖಾಮಠದ ಸೋಮೇಶ್ವರನಾಥ ಸ್ವಾಮೀಜಿ ಪರೋಕ್ಷವಾಗಿ ಎಚ್ಚರಿಕೆ ನೀಡಿದರು. ‌

ಒಕ್ಕಲಿಗರನ್ನು ತುಳಿಯುವುದು ಮುಂದುವರಿಸಿದರೆ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿರುವ ಜಿಲ್ಲೆಗಳನ್ನು ಸೇರಿಸಿ ಪ್ರತ್ಯೇಕ ರಾಜ್ಯವನ್ನು ಕೇಳಬೇಕಾದೀತು ಎಂದರು.

ಮೈಸೂರಿನ ಬೋಗಾದಿಯ ಆದಿಚುಂಚನಗಿರಿ ಶಾಖಾಮಠದಲ್ಲಿ ಭಾನುವಾರ ನಡೆದ ಸಭೆಯಲ್ಲಿ ಮಾತನಾಡಿದ ಶ್ರೀಗಳು, ಮೈಸೂರು, ಮಂಡ್ಯ, ಹಾಸನ, ಬೆಂಗಳೂರು ಒಳಗೊಂಡಂತೆ ಈ ಭಾಗದಲ್ಲಿ ಒಕ್ಕಲಿಗ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮೀಸಲಾತಿ ನಿರಾಕರಿಸಿದರೆ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿರುವ ಜಿಲ್ಲೆಗಳನ್ನು ಸೇರಿಸಿ ಪ್ರತ್ಯೇಕ ರಾಜ್ಯವನ್ನು ಕೇಳಬೇಕಾದೀತು. ಅದಕ್ಕೆ ಸರ್ಕಾರ ಅವಕಾಶ ನೀಡುವುದು ಬೇಡ ಸ್ವಾಮೀಜಿ ಎಚ್ಚರಿಸಿದರು.

ಒಕ್ಕಲಿಗರಿಂದಲೇ ಶೇ 60 ರಷ್ಟು ಪಾಲು:

ಒಕ್ಕಲಿಗ ಸಮಾಜದವರಿಂದಲೇ ಸರ್ಕಾರಕ್ಕೆ ಶೇ. 60 ರಷ್ಟು ಪಾಲು ಸಿಗುತ್ತಿದೆ. ಬೆಂಗಳೂರು ಮತ್ತು ಮೈಸೂರು ಬೆಳೆಯಲು ಒಕ್ಕಲಿಗ ಸಮಾಜದವರು ತಮ್ಮ ಜಮೀನು ನೀಡಿದ್ದಾರೆ. ಇಷ್ಟೆಲ್ಲಾ ಕೊಡುಗೆ ನೀಡಿದರೂ ಸಮುದಾಯಕ್ಕೆ ಶೇ. 4 ರಷ್ಟು ಮಾತ್ರ ಮೀಸಲಾತಿ ಸಿಗುತ್ತಿದೆ. ಈ ಅನ್ಯಾಯದ ಬಗ್ಗೆ ಸರ್ಕಾರ ಗಮನಹರಿಸಬೇಕು ಎಂದು ತಿಳಿಸಿದರು.

ಶೇ 15 ರಷ್ಟು ಮೀಸಲಾತಿ ಬೇಕು:

ಮೈಸೂರು ಮತ್ತು ಚಾಮರಾಜನಗರ ಒಕ್ಕಲಿಗರ ಸಂಘದ ಸಭೆಯಲ್ಲಿ ಜನಸಂಖ್ಯೆ ಆಧರಿಸಿ ಒಕ್ಕಲಿಗರಿಗೆ ಶೇ. 15 ರಷ್ಟು ಮೀಸಲಾತಿ ದೊರಕಿಸಿಕೊಡುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ಒಗ್ಗಟ್ಟಾಗಿ ಹೋರಾಟ ನಡೆಸುವ ನಿರ್ಣಯವನ್ನು ತೆಗೆದುಕೊಳ್ಳಲಾಯಿತು.

ಶಾಸಕರಾದ ಜಿ.ಟಿ.ದೇವೇಗೌಡ, ಶಾಸಕ ಎಲ್‌.ನಾಗೇಂದ್ರ, ಕಾಂಗ್ರೆಸ್ ಮುಖಂಡ ವಾಸು, ಹರೀಶ್‌ ಗೌಡ, ಪ್ರಶಾಂತ್‌ ಗೌಡ, ಬಿಜೆಪಿ ಮುಖಂಡ ಸಂದೇಶ್‌ ಸ್ವಾಮಿ, ಒಕ್ಕಲಿಗರ ಸಂಘದ ಅಧ್ಯಕ್ಷ ಜಿ.ಮಂಜು, ಗೌರವಾಧ್ಯಕ್ಷ ಜಿ.ಕುಮಾರಗೌಡ, ಪ್ರಧಾನ ಕಾರ್ಯದರ್ಶಿ ಬಿ.ಪಿ.ಬೋರೇಗೌಡ, ಮುಖಂಡರಾದ ಜಯರಾಂ, ನಂಜಯ್ಯ, ಚಂದ್ರೇಗೌಡ, ಮುಕುಂದ, ಸುರೇಶ್‌ ಉಪಸ್ಥಿತರಿದ್ದರು.

Copyright © All rights reserved Newsnap | Newsever by AF themes.
error: Content is protected !!