January 14, 2026

Newsnap Kannada

The World at your finger tips!

sidda

Pic Credits : deccanherald.com

ಮಾಜಿ ಸಚಿವ ಎ.ಮಂಜು ಕಾಂಗ್ರೆಸ್​​ಗೆ ಬಂದರೂ ನಾವು ಸೇರಿಸಿಕೊಳ್ಳಲ್ಲ – ಸಿದ್ದು

Spread the love

ಮಾಜಿ ಸಚಿವ ಎ.ಮಂಜು ಕಾಂಗ್ರೆಸ್​​ಗೆ ಬಂದರೂ ನಾವು ಸೇರಿಸಿಕೊಳ್ಳಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಡಕ್ ಪ್ರತಿಕ್ರಿಯೆ ನೀಡಿದ್ದಾರೆ

ಇತ್ತೀಚೆಗಷ್ಟೇ ಎ.ಮಂಜು ಸಿದ್ದರಾಮಯ್ಯರನ್ನು ಭೇಟಿಯಾಗಿದ್ದರು. ಕಾಂಗ್ರೆಸ್​ಗೆ ಮತ್ತೆ ಸೇರ್ಪಡೆ ಆಗುವ ಬಗ್ಗೆ ಚರ್ಚೆ ನಡೆಸಿದ್ದರು ಅಂತಾ ವರದಿಯಾಗಿತ್ತು.

ಈ ಕುರಿತಂತೆ ಮಾಧ್ಯಮಗಳ ಜೊತೆ ಪ್ರತಿಕ್ರಿಯಿಸಿದ ಸಿದ್ದು, ಎ.ಮಂಜು ಕಾಂಗ್ರೆಸ್ ಸೇರಲ್ಲ. ಕಾಂಗ್ರೆಸ್‌ಗೆ ಬರುವುದಾಗಿಯೂ ಕೇಳಿಲ್ಲ ಎಂದಿದ್ದಾರೆ. ಬಂದರೂ ನಾವು ಸೇರಿಸೋವುದಿಲ್ಲ ಎಂದರು

ಸಿಂಗಲ್ ವೋಟ್ ಹಾಕಲು ಹೇಳಿದ್ದೇನೆ :

ಬಿಜೆಪಿ-ಜೆಡಿಎಸ್​ ಒಳ ಒಪ್ಪಂದ  ಪರಿಷತ್ ಚುನಾವಣೆಯಲ್ಲಿ ನಮ್ಮ ಬೆಂಬಲಿತ ಮತದಾರರಿಗೆ ಸಿಂಗಲ್ ವೋಟ್ ಮಾಡಲು ಹೇಳಿದ್ದೇವೆ. ಎರಡನೇ ಪ್ರಾಶಸ್ತ್ಯ ಮತವನ್ನು ಯಾರಿಗೂ ಹಾಕಲ್ಲ. ನಾವು ಯಾರೊಂದಿಗೂ, ಯಾವ ಕ್ಷೇತ್ರದಲ್ಲೂ ಹೊಂದಾಣಿಕೆ ಮಾಡಿಕೊಳ್ಳಲ್ಲ ಎಂದು ಹೇಳಿದರು

ನಮ್ಮ ಬೆಂಬಲಿತರಿಗೆ ಸಿಂಗಲ್ ವೋಟ್ ಹಾಕಲು ಸೂಚನೆ ಕೊಟ್ಟಿದ್ದೇನೆ. ಬಿಜೆಪಿ- ಜೆಡಿಎಸ್ ನಡುವೆ ಒಳ ಒಪ್ಪಂದ ಇದ್ದೇ ಇದೆ. ಈ ಚುನಾವಣೆಯಲ್ಲಿ ಮಾತ್ರ ಅಲ್ಲ. ಇತ್ತೀಚೆಗೆ ನಡೆದ ಉಪಚುನಾವಣೆ ಸೇರಿದಂತೆ ಎಲ್ಲಾ ಚುನಾವಣೆಗಳಲ್ಲೂ ಅವರಿಬ್ಬರೂ ಒಳ ಒಪ್ಪಂದ ಮಾಡಿಕೊಂಡೇ ಚುನಾವಣೆ ಮಾಡಿದ್ದಾರೆ ಎಂದು ಆರೋಪಿಸಿದರು.

error: Content is protected !!