December 19, 2024

Newsnap Kannada

The World at your finger tips!

rss

ನಾವು RSS ಖಾಕಿ ಚಡ್ಡಿ ಸುಡುತ್ತೇವೆ : ಅದು ರಾಷ್ಟ್ರ ಧ್ವಜವಲ್ಲ – NSUI ಭವ್ಯ

Spread the love

ಆರ್ ಎಸ್ ಎಸ್ ಈ ಖಾಕಿ ಚಡ್ಡಿ ಏನು ನಮ್ಮ ದೇಶದ ರಾಷ್ಟ್ರಧ್ವಜವೇ

WhatsApp Image 2022 06 04 at 4.53.34 PM
RSS

ಇದನ್ನು ಓದಿ – ಪರಿಷತ್ ಚುನಾವಣೆ: ಮತದಾರರ ಸೆಳೆಯಲು ಹಣ, ಹೆಂಡ, ಬಾಡೂಟದ್ದೇ ದರ್ಬಾರು !

  • ಇದು ಎನ್‍ಎಸ್‍ಯುಐ ಉಪಾಧ್ಯಕ್ಷೆ ಭವ್ಯರ ನೇರ ಪ್ರಶ್ನೆ

ತುಮಕೂರಿನಲ್ಲಿ ಪ್ರತಿಭಟನೆ ಮಾಡಿದಕ್ಕೆ ಎನ್‍ಎಸ್‍ಯುಐ ರಾಜ್ಯಾಧ್ಯಕ್ಷ ಕೀರ್ತಿ ಗಣೇಶ್ ಅವರನ್ನು ಬಂಧಿಸಲಾಗಿದೆ. ಇದನ್ನು ವಿರೋಧಿಸಿ ಶನಿವಾರ ಪ್ರತಿಭಟನಾ ಸಭೆಯನ್ನು ಯುವ ಕಾಂಗ್ರೆಸ್ ಆಯೋಜಿಸಿತ್ತು.

ಈ ವೇಳೆ ಮಾತನಾಡಿದ ಭವ್ಯ ಪಠ್ಯ ಪರಿಷ್ಕರಣೆ ವೇಳೆ ಬಸವಣ್ಣ, ಕುವೆಂಪು, ನಾರಾಯಣಗುರು ಮತ್ತು ಟಿಪ್ಪು ಸುಲ್ತಾನ್ ಅವರ ವಿಷಯವನ್ನು ಬಿಟ್ಟು, ಕೆಲಸಕ್ಕೆ ಬಾರದೆ ಇರುವ ವಿಷಯಗಳನ್ನು ಪಠ್ಯದಲ್ಲಿ ಸೇರಿಸಲಾಗಿದೆ. ಈ ಮೂಲಕ ಯುವಕರ ಭವಿಷ್ಯ ಹಾಳು ಮಾಡಲಾಗುತ್ತಿದೆ. ಆ ರೀತಿ ನಡೆಯಬಾರದು ಎಂದು ಕೀರ್ತಿ ಗಣೇಶ್ ಅವರು ತಮ್ಮ ಎನ್‍ಎಸ್‍ಯುಐ ಪದಾಧಿಕಾರಿಗಳ ಜೊತೆ ಪ್ರತಿಭಟನೆ ಮಾಡುವುದಕ್ಕೆ ಹೋದ್ರೆ ಅವರನ್ನು ಜೈಲಿಗೆ ಹಾಕಿದ್ದಾರೆ ಎಂದು ಕೋಪವನ್ನು ಹೊರಹಾಕಿದರು

ಆರ್‍ಎಸ್‍ಎಸ್ ಚಡ್ಡಿಯನ್ನು ಸುಟ್ಟಿದ್ದಕ್ಕೆ ಕೀರ್ತಿ ಗಣೇಶ್ ಅವರನ್ನು ಜೈಲಿಗೆ ಹಾಕಿದ್ದಾರೆ. ಇವತ್ತು ಕೇವಲ ತುಮಕೂರಿನಲ್ಲಿ ಸುಟ್ಟಿದ್ದಾರೆ. ಆದರೆ ಮುಂದೆ ಯುವ ಕಾಂಗ್ರೆಸಿಗರು ಪ್ರತಿಯೊಂದು ಜಿಲ್ಲೆಯಲ್ಲಿಯೂ ಆರ್‌ಎಸ್‍ಎಸ್ ಚಡ್ಡಿಯನ್ನು ಸುಡುತ್ತಾರೆ ನೋಡುತ್ತೀರಿ. ಎಷ್ಟು ಜನಗಳನ್ನು ಬಂಧಿಸುತ್ತೀರಾ ಬಂಧಿಸಿ ಎಂದು ಸವಾಲು ಹಾಕಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!