ಉಕ್ರೇನ್‍ನಲ್ಲಿ ಸಿಲುಕಿರುವ ಕರ್ನಾಟಕದ ಮೆಡಿಕಲ್ ವಿದ್ಯಾರ್ಥಿಗಳು
ನಾವೆಲ್ಲರೂ ಸುರಕ್ಷಿತವಾಗಿದ್ದೇವೆ ಎಂದು ತಿಳಿಸಿದ್ದಾರೆ.
ನಾವು ಉಕ್ರೇನ್‍ನಲ್ಲಿ ಇದ್ದೇವೆ. ಇಲ್ಲಿ ಭಯ ಇದ್ದರೂ, ಎಲ್ಲರೂ ಸುರಕ್ಷಿತವಾಗಿ ಇದ್ದಾರೆ. ಇಲ್ಲಿ ಊಟ ಮತ್ತು ನೀರಿಗೆ ಜನರ ಬೇಡಿಕೆ ಹೆಚ್ಚಾಗಿದೆ. ಅಲ್ಲದೆ ದಿನಸಿ ಅಂಗಡಿ ಮುಂದೆ ತುಂಬಾ ಜನರು ನಿಂತಿದ್ದಾರೆ ಎಂದು ಅಲ್ಲಿನ ಪರಿಸ್ಥಿತಿಯನ್ನು ಬೆಂಗಳೂರಿನ ವಿದ್ಯಾಥಿ೯ನಿ ಪ್ರಿಯಾಂಕ ಮಾದ್ಯಮಗಳಿಗೆ ವಿವರಿಸಿದ್ದಾರೆ
ಎಲ್ಲರೂ ಸುರಕ್ಷಿತವಾಗಿದ್ದೇವೆ. ನಾವು ಮಾರುಕಟ್ಟೆ ಮುಂದೆ ಇದ್ದೇವೆ. ಇಲ್ಲಿ ತುಂಬಾ ಜನರು ತಮಗೆ ಬೇಕಾದ ವಸ್ತುಗಳನ್ನು ಖರೀದಿಸಲು ಸಾಲಾಗಿ ನಿಂತಿದ್ದಾರೆ. ಅಲ್ಲದೆ ನೀರಿಗೆ ಇಲ್ಲಿ ತುಂಬಾ ಸಮಸ್ಯೆಯಾಗಿತ್ತು ಎಂದು ತಿಳಿಸಿದರು.
ನಮ್ಮ ಜೊತೆ 200ಕ್ಕೂ ಹೆಚ್ಚು ಕರ್ನಾಟಕದವರು ಇದ್ದಾರೆ. ಬೇರೆ ಕಡೆಯೂ ತುಂಬಾ ಜನರಿದ್ದಾರೆ. ಇಲ್ಲಿರುವ ಹಲವು ವಿದ್ಯಾರ್ಥಿಗಳು ಮೆಡಿಕಲ್ ಓದುತ್ತಿದ್ದಾರೆ. ಒಂದು ವಾರದಿಂದಲೂ ಇಲ್ಲಿಂದ ಹೋಗಿ ಎಂದು ತಿಳಿಸಲಾಗಿತ್ತು. ಸೂಚನೆ ಕೊಟ್ಟ ಕೆಲವು ದಿನಗಳಲ್ಲಿ ಹಲವು ಮಂದಿ ತಮ್ಮ ದೇಶಕ್ಕೆ ಹೋಗಿದ್ದಾರೆ. ಆದರೆ ಈ ವಾರ ಹೋಗಬೇಕು ಎಂದುಕೊಂಡವರು ಇಲ್ಲೇ ಸಿಕ್ಕಿ ಹಾಕಿಕೊಂಡಿದ್ದಾರೆ ಎಂದರು.
ವಿಮಾನದ ಟಿಕೆಟ್ ಬುಕ್ ಮಾಡಿಕೊಂಡಿದ್ದು, ಈಗ ರದ್ದಾಗಿದೆ. ಕಳೆದ ವಾರ ಹೇಳಿದ್ರಿಂದ ಎಷ್ಟೋ ಜನರಿಗೆ ಇವತ್ತು ಟಿಕೆಟ್ ಸಿಕ್ಕಿತ್ತು. ಕಳೆದ ವಾರ ಟಿಕೆಟ್ ಸಿಕ್ಕಿರಲಿಲ್ಲ. ಅಲ್ಲದೆ ದುಡ್ಡು ಸಹ ಹೆಚ್ಚಿತ್ತು ಎಂದು ತಿಳಿಸಿದರು.
- MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು
- ರೋಹಿತ್ ಶರ್ಮಾ ದಂಪತಿಗೆ ಗಂಡು ಮಗು ಜನನ
- ಆಸ್ಪತ್ರೆಯಲ್ಲಿ ಬೆಂಕಿ ಅವಘಡ: 10 ಮಕ್ಕಳು ಸಜೀವ ದಹನ
- ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
- ಕರ್ನಾಟಕದಲ್ಲಿ 6 ಲಕ್ಷ ಎಕರೆ ವಕ್ಫ್ ಆಸ್ತಿಗೆ ಪರಿಗಣನೆ: ಬಿಜೆಪಿ ಶಾಸಕ ಯತ್ನಾಳ್ ಆರೋಪ
More Stories
ಶೀಘ್ರದಲ್ಲೇ ಅಡುಗೆ ಎಣ್ಣೆಗಳ ಬೆಲೆ ಏರಿಕೆ ಸಾಧ್ಯತೆ
ಅಕ್ರಮ ಜಾಹಿರಾತು ಫಲಕ ಕುಸಿತಕ್ಕೆ 14 ಸಾವು, 74 ಜನರು ಗಂಭೀರ
ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ರಾಮ ಮಂದಿರ ಶುದ್ಧೀಕರಣ : ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಉವಾಚ