ಬಾಲಕಿ ಪ್ರಾಣ ರಕ್ಷಿಸಲು ಹೋದ ಐವರು ಜಲ ಸಮಾಧಿ‌ – ತಮಿಳುನಾಡಿನಲ್ಲಿ ದುರಂತ

Team Newsnap
1 Min Read

ಅಂಗಲಮ್ಮನ್ ದೇವಸ್ಥಾನದ ಕೊಳದಲ್ಲಿ ಮುಳುಗುತ್ತಿರುವ ಬಾಲಕಿಯ ರಕ್ಷಿಸಲು ಹೋಗಿ ಐದು ಮಂದಿ ಜಲ ಸಮಾಧಿಯಾದ ಘಟನೆ ತಮಿಳುನಾಡಿನ ಪುಧು ಗುಮ್ಮಿಡಿ ಪುಂಡಿ ಗ್ರಾಮದಲ್ಲಿ ಗುರುವಾರ ಜರುಗಿದೆ.

ಈ ದುರಂತದಲ್ಲಿ ನರ್ಮದಾ (12 ವರ್ಷ), ಜೀವಿತಾ (14 ವರ್ಷ ), ಅಶ್ಮಿತಾ (14 ವರ್ಷ ), ತಾಯಿ ಸುಮತಿ ( 38 ವರ್ಷ ) ಮತ್ತು ಜೋತಿ (30 ವರ್ಷ) ಎಂಬವರೇ ಮೃತರಾಗಿದ್ದಾರೆ.

ದೇವಸ್ಥಾನದ ಕೊಳದಲ್ಲಿ ಬಟ್ಟೆ ಒಗೆಯುತ್ತಿದ್ದ ವೇಳೆಯಲ್ಲಿ ಮಕ್ಕಳು ಕೊಳದಲ್ಲಿ ನೀರಿನ‌ ಆಟವಾಡು ತ್ತಿದ್ದರು.

ಈ ವೇಳೆಯಲ್ಲಿ ನರ್ಮದಾ ಎಂಬ ಬಾಲಕಿ ಕೊಳದಲ್ಲಿನ ಕೆಸರಿನಲ್ಲಿ ಸಿಲುಕಿಕೊಂಡಿದ್ದಾಳೆ. ಈ ವೇಳೆಯಲ್ಲಿ ರಕ್ಷಣೆಗೆ ಇಳಿದ ಜೀವಿತಾ ಹಾಗೂ ಅಶ್ಮಿತಾ ಅವರು ನೀರಿನಲ್ಲಿ ಮುಳುಗಿದ್ದಾರೆ. ಅಲ್ಲದೇ ಇದ್ದ ಅಶ್ಮಿತಾ ತಾಯಿ ನೀರಿಗೆ ಇಳಿದು ಮಕ್ಕಳ ರಕ್ಷಣೆಗೆ ಮುಂದಾಗಿದ್ದಾರೆ. ಅಲ್ಲದೇ ಜ್ಯೋತಿ ಅನ್ನೋ ಇನ್ನೋರ್ವ ಮಹಿಳೆಯೂ ಕೊಳಕ್ಕೆ ಇಳಿದಿದ್ದಾರೆ.

ನಂತರ ಕೊಳದಲ್ಲಿನ ಕೆಸರಿನಲ್ಲಿ ಸಿಲುಕು ಐದು ಮಂದಿಯೂ ಸಾವನ್ನಪ್ಪಿದ್ದಾರೆ. ಗ್ರಾಮಸ್ಥರು ಕೊಳದ ಬಳಿಗೆ ಬರುವ ಹೊತ್ತಿಗೆ ಎಲ್ಲರ ಪ್ರಾಣ ಪಕ್ಷಿಯೂ ಹಾರಿ ಹೋಗಿತ್ತು. ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಎಲ್ಲಾ ಶವಗಳನ್ನು ಹೊರತೆಗೆದಿದ್ದಾರೆ. ಶವಗಳನ್ನು ಪೊನ್ನೆರಿ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಕಾರ್ಯವನ್ನು ನಡೆಸಲಾಗಿದೆ. ಸಿಪ್ಕಾಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಮೃತ ಕುಟುಂಬಸ್ಥರಿಗೆ ತಲಾ 5 ಲಕ್ಷ ರು. ಪರಿಹಾರ ಘೋಷಣೆ ಮಾಡಿದ್ದಾರೆ.

Share This Article
Leave a comment