ಸಂಸದೆ ಸುಮಲತಾ ಅಂಬರೀಶ್ಗೆ ಮಂಡ್ಯ ರೈತ ಸಂಘಟನೆಗಳ ಮುಖಂಡರು ವಾರ್ನಿಂಗ್ ಕೊಟ್ಟಿದ್ದಾರೆ.
ಸಂಸದೆ ಸುಮಲತಾ ನಿಜವಾದ ರೈತರು ಯಾರು ಎಂದು ಸ್ಪಷ್ಟಪಡಿಸಬೇಕು.
ಸಿಎಂ ನೇತೃತ್ವದಲ್ಲಿ ನಡೆಸ ಮೈಶುಗರ್ ಸಭೆಯಲ್ಲಿ ಸುಮಲತಾ ನಮ್ಮನ್ನು ರೈತರೇ ಅಲ್ಲ ಎಂದು ಹೇಳಿದ್ದಾರೆ ನಮಗೆ ಬಹಳ ನೋವಾಗಿದೆ ಎಂದು ರೈತ ನಾಯಕರು ಹೇಳಿದ್ದಾರೆ
ಸುಮಲತ ನಿನ್ನೆ ಸಭೆಯಲ್ಲಿ ಮೈಶುಗರ್ ಫ್ಯಾಕ್ಟರಿ ವಿಚಾರದಲ್ಲಿ ನಿಜವಾದ ರೈತರ ಅಭಿಪ್ರಾಯ ಪಡೆಯಬೇಕು ಎಂದು ಒತ್ತಡ ಹಾಕಿದ್ದರು ಎನ್ನಲಾಗಿದೆ.
ಅಲ್ಲದೇ ಸಭೆಯಲ್ಲಿ ಭಾಗಿಯಾದವರು ರೈತರಲ್ಲ, ಬದಲಿಗೆ ಸಂಘಟನೆ ಮುಖಂಡರು ಎಂದು ಜರಿದಿದ್ದರು ಎಂದು ತಿಳಿದು ಬಂದಿದೆ.
ಸಿಎಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದ ಎಲ್ಲರೂ ರೈತರೇ. ಹರಿದ ಬಟ್ಟೆ ಹಾಕಿಕೊಂಡವರು ಮಾತ್ರ ರೈತರಾ? ನಿಜವಾದ ರೈತರು ಯಾರು ಎಂದು ಸುಮಲತಾ ಹೇಳಲಿ. ನಮ್ಮ ಭಾವನೆಗಳ ಜತೆ ಸುಮಲತಾ ಚೆಲ್ಲಾಟ ಆಡೋದು ಬೇಡ. ಮೈಶುಗರ್ ಸಕ್ಕರೆ ಕಾರ್ಖಾನೆ ಸರ್ಕಾರಿ ಸ್ವಾಮ್ಯದಲ್ಲೇ ಉಳಿಬೇಕು ಎಂಬುದು ನಮ್ಮ ಒತ್ತಾಯ. ಇವರಿಗೆ ಆರಂಭದಿಂದಲೂ ಖಾಸಗೀಕರಣದ ಮೇಲೆಯೇ ಹೆಚ್ಚು ಒಲವು ಎಂದು ಕಿಡಿಕಾರಿದ್ದಾರೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ