ಈ ಪೂರ್ವಘಟ್ಟಗಳ ಸುಂದರ ತಾಣಗಳು ನಮ್ಮ ಹಳೇ ಮೈಸೂರಿನ ಪ್ರದೇಶದಲ್ಲಿದ್ದು , ಅಕ್ಷರಶಹ ತಮಿಳ ನಾಡಿನ ಸರಹದ್ದು . ಮಲೆ ಮಹದೇಶ್ವರನೆಂದರೆ ನಮ್ಮ ಮೈಸೂರಿನ ಪ್ರದೇಶದ ಜಾತಿ ಮತ ಪಂಥಗಳ ಮೀರಿದ ಭಕ್ತಿ ಹಾಗೂ ಪ್ರೀತಿ . ಜಾನಪದ ಹಾಡುಗಳು ಮಾಯಕಾರ ಮಹದೇಶ್ವರನ ಮ್ಯಾಲೆ ಸಾಕಷ್ಟು ಇವೆ , ಹುಲಿ ಏರಿ ಬಂದ ಮುದ್ದು ಮಾದಪ್ಪನ ಗೀತೆಗಳನ್ನು ಕೇಳುವುದೇ ಸೊಗಸು .
ಹಳೇ ಮೈಸೂರಿನ ಬಹುತೇಕ ಮಂದಿ ಮಾದಪ್ಪನ ಬೆಟ್ಟಕ್ಕೆ ಹೋಗಿ ಬರೋದು ವಾಡಿಕೆ . ವಿಜಯನಗರದ ಸಾಮಂತರ ಕಾಲದಲ್ಲಿ ಇದರ ಸಮೀಪವಿರುವ ದೇವಾಲಯಗಳು ಜೀರ್ಣೋದ್ಧಾರಗೊಂಡಿವೆ ಎನ್ನುವುದು ಐತಿಹ್ಯ .
ಚಿತ್ತಾಕರ್ಷಕ ತಾಣ ಹೋಗೆನಕ್ಕಲ್ಲು ಜಲಪಾತವು ಇಲ್ಲಿಗೆ ಅತ್ಯಂತ ಹತ್ತಿರ , ಈಗಂತೂ ಹುಲಿಗಳ ಸಂರಕ್ಷಣೆಯಿಂದ ಅದರ ಸಂತತಿಯು ಗಣನೀಯವಾಗಿ ಏರಿರುವುದರಿಂದ ಅದರ ಸಂಚಾರ ಜಾಸ್ತಿ .
ಮಾದಪ್ಪನ ಜಾನಪದ ಹಾಡುಗಳಿಗೆ ಕಂಸಾಳೆಯೇ ತಾಳ , ವಾಲಿಗವೋ , ಕ್ವಾರಣ್ಯ ನೀಡವ್ವ , ಜೋಗಿಹಾಡುಗಳು , ಗೊರವರ ಹಾಡು ಕುಣಿತಗಳು ಅಷ್ಟೇ ಪ್ರಸಿದ್ಧ . ಗೊರವರ ಕುಣಿತವು ಉತ್ತರದ ಮೈಲಾರಿಗಳ ಜಾನಪದೀಯ ಕುಣಿತದಷ್ಟೇ ಪ್ರಸಿದ್ಧ , ಗೊರವರು ಮೈಸೂರಿನ ಸೀಮೆಗೆ ಬಹಳ ಬೇಕಾದಂತಹವರು , ವೀರಮಕ್ಕಳ ಕುಣಿತವು ಸಹ ಪ್ರಸಿದ್ಧವಿಲ್ಲಿ . ಮನೆಮನೆಗೆ ಹೋಗಿ ಕಾಣಿಕೆಗಳನ್ನು ಸ್ವೀಕರಿಸುವಂತಹವರು , ಅಷ್ಟೇ ಅಲ್ಲದೆ ಜಂಗಮರು , ಜೋಗಪ್ಪರು , ದಾಸಯ್ಯ ಮುಂತಾದ ಸಂಸ್ಕೃತಿಗಳು ತಲೆತಲಾಂತರಗಳಿಂದ ನಡೆದುಕೊಂಡು ಬಂದ ಸಂಪ್ರದಾಯ .
ಇದು ಹಳೇ ಮೈಸೂರು ಚಾಮರಾಜನಗರದ ಜಿಲ್ಲೆಗಳಲ್ಲಿ ಪ್ರಸಿದ್ಧವಾದ ಬಿಳಿಗಿರಿ ರಂಗಯ್ಯನ ಜಾತ್ರೆ , ಹುಲಿಗನ ಮರಡಿ ಶ್ರೀನಿವಾಸದೇವರ ಜಾತ್ರೆ , ನಂಜುಂಡನ ಜಾತ್ರೆಯೊ , ಮುಡುಕ ತೊರೈ ಜಾತ್ರೆ , ಚಾಮರಾಜೇಶ್ವರ ಜಾತ್ರೆ , ತಲಕ್ಕಾಡು ಪಂಚಲಿಂಗೇಶ್ವರ ಜಾತ್ರೆ , ಚಾಮುಂಡಿ ಬೆಟ್ಟ – ಉತ್ತನಹಳ್ಳಿ ಜಾತ್ರೆ ಹೀಗೆ ಮೈಸೂರು ಚಾಮರಾಜನಗರದ ನಡುವಣ ತಾಲ್ಲೂಕ್ಕಿನ ಪ್ರಸಿದ್ಧ ಜಾತ್ರೆಗಳು .ಈ ಸಂದರ್ಭದಲ್ಲಿ ಗೊರವರನ್ನು , ಕಂಸಾಳೆ ವಾದಕರನ್ನು , ಜೋಗಯ್ಯರನ್ನು ಹಾಗೂ ವೀರಮಕ್ಕಳ ಕುಣಿತದವರನ್ನು ಕಾಣಬಹುದು .ಇವೆಲ್ಲದರ ಜೊತೆಗೆ ವೀರಗಾಸೆ ಡೊಳ್ಳುಕುಣಿತವು ಇರುವುದು.
ಇದರ ಪೈಕಿ ಮಲೆ ಅಥವಾ ಮಲೈ ಮಹದೇಶ್ವರನ ಜಾತ್ರೆಯೂ ಅಷ್ಟೇ ಪ್ರಸಿದ್ಧ ನಂಜನಗೂಡಿನ ಜಾತ್ರೆಯಾಗಲಿ , ಚಾಮರಾಜೇಶ್ವರನ ಜಾತ್ರೆಯಾಗಲಿ ತಮಿಳುನಾಡಿನ ಈರೋಡು , ಕೊಯಂಬತ್ತೂರು , ಊಟಿ , ಭವಾಣಿ( ಭವಾನಿ ಸಾಗರ ಡ್ಯಾಂನ ಊರು) , ಅವಿನಾಶಿಗಳಿಂದ ಸಹ ಜನರು ಜಾತ್ರೆಗೆ ಬರುತ್ತಾರೆ .
ಹಳೇಮೈಸೂರಿನ ಪ್ರಾಂತ್ಯದ ಜನರಾದ ನಮಗೆ ಜಾತ್ರೆಗಳೆಂದರೆ ಸಂಭ್ರಮ ಜಾತ್ಯಾತೀತವಾಗಿ ಪಾಲ್ಗೊಳ್ಳುವ ಎಲ್ಲರೂ ಒಟ್ಟಿಗೆ ಸೇರಿ ಆಚರಿಸುವ ಸದಾವಕಾಶ . ಮಲೆಮಹದೇಶ್ವರನ ಬೆಟ್ಟವು ಹಾಗೆ ನಿಸರ್ಗ ರಮಣೀಯ ತಾಣ .
ಮಾದಪ್ಪನಿಗೆ ತಮಿಳಿನಲ್ಲೂ ಪದಗಳು ಇವೆ . ಕೃಷಿಯನ್ನು ಮಾಡುವ ರೈತರು ಸಹ ಈ ಮಹಾನುಭಾವನ ಮೇಲೆ ಪದಗಳನ್ನು ಕಟ್ಟಿ ಕೃಷಿಚಟುವಟಿಯನ್ನು ಮಾಡುತ್ತಾ ಹಾಡುವುದು ಈಗಲೂ ಸಹ ರೂಢಿಯಲ್ಲಿದೆ .
ಆದಿತ್ಯ .ಜಿ .ಮೈಸೂರು✍️
More Stories
ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ: 6 ಜನರ ಮೃತದೇಹ ಪತ್ತೆ
ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ: DYSP ವಿರುದ್ಧ ಗಂಭೀರ ಆರೋಪ
ಐಶ್ವರ್ಯ ಗೌಡ ಪ್ರಕರಣ: ಸರ್ಕಾರದ ವಿರುದ್ಧ ಹೆಚ್ಡಿಕೆ ವಾಗ್ದಾಳಿ