ಬೆಂಗಳೂರು: ರಾಜ್ಯದಲ್ಲಿ ವಕ್ಫ್ ಆಸ್ತಿ ವಿವಾದ ಈಗ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ವಿಜಯಪುರದಿಂದ ಆರಂಭವಾದ ಈ ವಿವಾದ ಇದೀಗ ಬೆಂಗಳೂರಿಗೂ ಕಾಲಿಟ್ಟಿದೆ.
ಲಾಲ್ ಬಾಗ್ ಉದ್ಯಾನವನದ ಮೇಲೂ ವಕ್ಫ್ ಬೋರ್ಡ್‌ನ ನಿರೀಕ್ಷೆ?
ಶಹರದ ಪ್ರಸಿದ್ಧ ಐತಿಹಾಸಿಕ ತಾಣವಾದ ಲಾಲ್ ಬಾಗ್ ಪಾರ್ಕ್‌ನ ಸುತ್ತಲಿನ ಜಾಗವನ್ನು ವಕ್ಫ್ ಬೋರ್ಡ್ ತನ್ನದ್ದೆಂದು ಹೇಳುತ್ತಿದೆ. ಇದರಿಂದ ಪಾರ್ಕ್‌ನ ಮೇಲೂ ವಕ್ಫ್ ಬೋರ್ಡ್ ನಿರೀಕ್ಷೆಯ ಕಣ್ಣು ಬಿದ್ದಂತೆ ಕಾಣುತ್ತಿದೆ.
ಲಾಲ್ ಬಾಗ್ ವಕ್ಫ್ ಪಾಲಾಗುತ್ತದೆಯೇ?
ಬೆಂಗಳೂರು ಎಂದಾಕ್ಷಣ ಎಲ್ಲರಿಗೂ ಮೊದಲಾಗಿ ನೆನಪಾಗುವ ತಾಣವೇ ಲಾಲ್ ಬಾಗ್. ಈ ಸುಂದರ ಉದ್ಯಾನವನ ಈಗಾಗಲೇ ಖಾಸಗಿಯವರ ಒತ್ತುವರಿಗೊಳಗಾಗಿದೆ. ಇದೀಗ ವಕ್ಫ್ ಹೆಸರಿನಲ್ಲಿ ಈ ಜಾಗ ಖಾಸಗಿಯ ಪಾಲಾಗುತ್ತಾ ಎಂಬ ಆತಂಕ ಬೆಳೆದು ಬರುತ್ತಿದೆ.
ವಕ್ಫ್ ಬೋರ್ಡ್ ಲಾಲ್ ಬಾಗ್ ಸುತ್ತಮುತ್ತಲಿನ ಜಾಗಗಳ ಮೇಲೂ ದಾವೆ
ಲಾಲ್ ಬಾಗ್ ಸುತ್ತಮುತ್ತಲಿನ ಜಾಗಗಳ ಮೇಲೆ ವಕ್ಫ್ ದಾವೆ ಹೂಡಿದ್ದು, ಹಾಪ್ ಕಾಮ್ಸ್ ಜಾಗವನ್ನು ತನ್ನದೇ ಎನ್ನುತ್ತಿದೆ. ಸಿಟಿ ಸರ್ವೇ ನಂಬರ್ 18 ಕುರಿತು ಖಾಸಗಿ ಹಾಗೂ ವಕ್ಫ್ ನಡುವಿನ ಹಕ್ಕು ವಿವಾದವೂ ನಡೆಯುತ್ತಿದೆ.
ಆತಂಕದಲ್ಲಿರುವ ಸ್ಥಳೀಯರು
2016ರಿಂದಲೂ 5 ಎಕರೆ ಭೂಮಿಗಾಗಿ ವಿವಾದ ಮುಂದುವರಿದಿದ್ದು, ಸರ್ವೇ ನಂಬರ್ 14, 16, 17, 18, 19, ಮತ್ತು 20ಗಳ ಮೇಲೂ ವಕ್ಫ್ ತನ್ನ ಹಕ್ಕನ್ನು ಹೇಳಿಕೊಂಡಿದೆ.ಇದನ್ನು ಓದಿ – ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ FIR ದಾಖಲು
ಈ ಬೆಳವಣಿಗೆಯಿಂದ ಸ್ಥಳೀಯರು ತೀವ್ರ ಆತಂಕದಲ್ಲಿದ್ದಾರೆ.
More Stories
ಓದಿನ ಮಹತ್ವ
ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ
ಮಂಡ್ಯದಲ್ಲಿ ಭೀಕರ ಅಪಘಾತ: ಕಾರು-ಲಾರಿ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿ ಸಾವು