ಶ್ರೀರಂಗಪಟ್ಟಣ ತಾಲೂಕಿನಲ್ಲಿ ವಕ್ಫ್ ಭೂಮಿ ವಿವಾದ ಹೊಸದಾಗಿ ಹೊಮ್ಮಿದ ವಿಚಾರವಲ್ಲ. ತಾಲ್ಲೂಕಿನ ಕಿರಂಗೂರು, ಶೆಟ್ಟಿಹಳ್ಳಿ, ಬಾಬುರಾಯನಕೊಪ್ಪಲು, ದರಸಕುಪ್ಪೆ ಸೇರಿದಂತೆ ಹಲವು ಗ್ರಾಮಗಳಲ್ಲಿ 50ಕ್ಕೂ ಹೆಚ್ಚು ರೈತರ ಜಮೀನುಗಳ ಪಹಣಿಯಲ್ಲಿ, ಸ್ವಾಧೀನದಾರರ ಹೆಸರಿದ್ದರೂ, ಋಣ ಕಲಂನಲ್ಲಿ “ಕರ್ನಾಟಕ ರಾಜ್ಯ ವಕ್ಫ್ ಮಂಡಳಿ” ಎಂದು ನಮೂದಿಸಲಾಗಿದೆ. ಸಾಮಾನ್ಯವಾಗಿ, ಜಮೀನು ಮೇಲೆ ಸಾಲ ಇದ್ದಲ್ಲಿ ಅಥವಾ ಕ್ರಯ ಪ್ರಕ್ರಿಯೆ ನಡೆದಿದ್ದರೆ ಮಾತ್ರ ಋಣ ಕಲಂನಲ್ಲಿ ಬ್ಯಾಂಕ್ ಅಥವಾ ವ್ಯಕ್ತಿಯ ಹೆಸರನ್ನು ಉಲ್ಲೇಖಿಸಲಾಗುತ್ತದೆ. ಆದರೆ 2014-15ರಿಂದ ಇದು ಬದಲಾಗಿದ್ದು, ರೈತರ ಜಮೀನಿನಲ್ಲಿ “ವಕ್ಫ್ ಆಸ್ತಿ” ಎಂದು ನೋಂದಾವಣೆಯಾಗಿದೆ.
ರೈತರ ಜಮೀನುಗಳ ಜೊತೆಗೆ, ಸರ್ಕಾರಿ ಶಾಲೆಗಳು, ಪುರಾತತ್ವ ಇಲಾಖೆಯ ಆಸ್ತಿಗಳು ಮತ್ತು ಪಾರಂಪರಿಕ ಕಟ್ಟಡಗಳ ಮೇಲೂ ವಕ್ಫ್ ಮಂಡಳಿಯ ಕಣ್ಣು ಬಿದ್ದಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಬೆಳವಣಿಗೆಯಿಂದ ಜಿಲ್ಲೆಯ ರೈತ ಸಮುದಾಯದ ಆತಂಕ ಹೆಚ್ಚಾಗಿದೆ.ಇದನ್ನು ಓದಿ –ಪ್ರತಿಸ್ಪಂದಿಸಿ ಆದರೆ ಪ್ರತಿಕ್ರಿಯಿಸಬೇಡಿ
ಈ ವಿವಾದವನ್ನು ಖಂಡಿಸಿ ಶ್ರೀರಂಗಪಟ್ಟಣದಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗದಳ, ರೈತಸಂಘ, ಮತ್ತು ಮಂಡ್ಯ ರಕ್ಷಣಾ ವೇದಿಕೆ ಸೇರಿ ಹಲವು ಸಂಘಟನೆಗಳು ಬಂದ್‌ಗೆ ಕರೆ ನೀಡಿವೆ. ಜನವರಿ 20ರಂದು ರೈತರು ತಮ್ಮ ಜಾನುವಾರುಗಳೊಂದಿಗೆ ರಸ್ತೆಗಿಳಿಯಲು ಸಿದ್ಧತೆ ನಡೆಸಿದ್ದಾರೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು