November 16, 2024

Newsnap Kannada

The World at your finger tips!

old mysuru , BJP Parva , CM

BJP Parva begins in Old Mysore Province - CM Bommai ಹಳೇ ಮೈಸೂರು ಪ್ರಾಂತದಲ್ಲಿ ಬಿಜೆಪಿ ಪರ್ವ ಆರಂಭ - ಸಿಎಂ ಬೊಮ್ಮಾಯಿ

ಮಂಗಳವಾರ ಮಾತಾಂತರ ಮಸೂದೆ ಮಂಡನೆಗೆ ಸಂಪುಟ ಗ್ರೀನ್ ಸಿಗ್ನಲ್

Spread the love

ನಾಳೆ (ಮಂಗಳವಾರ)ಮತಾಂತರ ತಡೆ ಮಸೂದೆ ಮಂಡನೆ ಆಗಲಿದೆ.

ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಸೂದೆ ಮಂಡನೆಗೆ ಒಪ್ಪಿಗೆ ಸಿಕ್ಕಿದೆ, ಕರಡು ಮಸೂದೆಯಲ್ಲಿ ಕೆಲ ಬದಲಾವಣೆ ಮತ್ತು ಬಿಗಿ ಕ್ರಮದೊಂದಿಗೆ ಮಂಡನೆಗೆ ಸಂಪುಟವೂ ಗ್ರೀನ್ ಸಿಗ್ನಲ್ ನೀಡಿದೆ

ನಾಳೆ ವಿಧಾನಸಭೆ ಕಲಾಪದಲ್ಲಿ ಮತಾಂತರ ನಿಷೇಧ ಕಾನೂನು ಮಂಡನೆ ಆಗಲಿದೆ. ಆದರೆ ಕಾಂಗ್ರೆಸ್ ಪಕ್ಷ ಮತಾಂತರ ತಡೆ ಕಾನೂನು ಜಾರಿಗೆ ತರಲು ಬಿಡಲ್ಲ ಎಂದು ಪಟ್ಟುಹಿಡಿದಿದೆ.

ಈ ವಿರೋಧದ ಮಧ್ಯೆ ಸರ್ಕಾರ ಮತಾಂತರ ಮಸೂದೆ ಮಂಡನೆಗೆ ಮುಂದಾಗಿದೆ.

ಆಮಿಷದ ಮತಾಂತರಕ್ಕೆ ತಡೆ :

ಮತಾಂತರವಾದವರ ಮೂಲ ಹುಡುಕಿದರೆ ಅವರೆಲ್ಲ ಹಿಂದುಗಳೇ. ಕೆಲವು ಕಡೆ ಗೌಪ್ಯವಾಗಿ ಮತಾಂತರ ನಡೆಯುತ್ತಿದೆ.

ಬಲವಂತದ ಮತಾಂತರವನ್ನು ಸರ್ಕಾರ ಸಹಿಸಲ್ಲ. ಕಾನೂನು ಮುಖಾಂತರ ಆಸೆ ಆಮಿಷ ಒತ್ತಡ ಮತಾಂತರವನ್ನು ತಡೆಯುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು

ಷರತ್ತುಗಳಲ್ಲಿ ಏನಿದೆ ? :

1) ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣೆ ಹಕ್ಕು ಕಾಯ್ದೆ-2021
ಬಲವಂತದ ಮತಾಂತರ ಜಾಮೀನುರಹಿತ ಅಪರಾಧ ಮತ್ತು ಅಸಿಂಧುವಾಗಿದೆ.
ನೇರ ವಿಚಾರಣೆಗೆ ಒಳಪಡಿಸಬಹುದು.

2) ಉಡುಗೊರೆ, ಕೆಲಸ, ಉಚಿತ ಶಿಕ್ಷಣ, ವಿವಾಹದ ಆಮಿಷ ಒಡ್ಡಿ ಮತಾಂತರ ಮಾಡುವಂತಿಲ್ಲ.

3) ಭಾವನಾತ್ಮಕವಾಗಿ ಸೆಳೆದು ಮತಾಂತರ ಮಾಡುವುದು ಅಪರಾಧ.

4) ಆಮಿಷ ಒಡ್ಡಿ ಮತಾಂತರಗೊಂಡು ವಿವಾಹ ಆಗಿದ್ದರೆ ಆ ಮದುವೆ ಅಸಿಂಧು ಎಂದು ಘೋಷಿಸಲು ಕೌಟುಂಬಿಕ ನ್ಯಾಯಾಲಯಕ್ಕೆ ಈ ಮಸೂದೆಯಲ್ಲಿ ಅವಕಾಶ ನೀಡಲಾಗಿದೆ.

5) ಸಾಮೂಹಿಕ ಮತಾಂತರದಲ್ಲಿ ಶಿಕ್ಷಣ ಸಂಸ್ಥೆ, ಆಶ್ರಮ, ಧಾರ್ಮಿಕ ಮಿಷನರಿ, ಎನ್‍ಜಿಓ ಪಾಲ್ಗೊಳ್ಳುವಂತಿಲ್ಲ.

6) ಸಾಮೂಹಿಕ ಮತಾಂತರದಲ್ಲಿ ಭಾಗಿಯಾದ ಸಂಸ್ಥೆಗಳಿಗೆ ಸರ್ಕಾರದಿಂದ ಅನುದಾನ ನಿಲ್ಲಿಸಲಾಗುವುದು.

ತಪ್ಪಿತಸ್ಥರಿಗೆ ದಂಡ ಎಷ್ಟು?

1) ಎಸ್‍ಸಿ, ಎಸ್‍ಟಿ ಸಮುದಾಯದವರನ್ನು ಬಲವಂತವಾಗಿ ಮತಾಂತರ ಮಾಡುವ ಹಾಗಿಲ್ಲ.

2) ಅಪ್ರಾಪ್ತರು, ಮಹಿಳೆಯರು, ಬುದ್ದಿಮಾಂಧ್ಯರಿಗೆ ಆಸೆ, ಆಮಿಷ ಒಡ್ಡಿ ಮತಾಂತರ ಮಾಡಬಾರದು.

3)ಕಾಯ್ದೆ ಉಲ್ಲಂಘಿಸಿದಲ್ಲಿ ಕನಿಷ್ಠ 3ರಿಂದ 10 ವರ್ಷ ಜೈಲು ಶಿಕ್ಷೆ ಮತ್ತು 50 ಸಾವಿರ ರೂ. ದಂಡ ವಿಧಿಸಲಾಗುವುದು.

4) ಬಲವಂತವಾಗಿ ಮತಾಂತರಿಸಿದ್ದಲ್ಲಿ 3ರಿಂದ 5 ವರ್ಷ ಜೈಲು ಶಿಕ್ಷೆ ಮತ್ತು 25 ಸಾವಿರ ರೂ. ದಂಡ ಹಾಗೂ ಸಾಮೂಹಿಕ ಮತಾಂತರ ಮಾಡಿದವರಿಗೆ 3ರಿಂದ 10 ವರ್ಷ ಜೈಲು ಶಿಕ್ಷೆ, 1 ಲಕ್ಷ ರೂ. ದಂಡ ವಿಧಿಸಲಾಗುವುದು.

Copyright © All rights reserved Newsnap | Newsever by AF themes.
error: Content is protected !!