January 7, 2025

Newsnap Kannada

The World at your finger tips!

samput

ಸಂಪುಟ ವಿಸ್ತರಣೆ: 6 ಮಂದಿ ಫೈನಲ್-7 ನೇಯವರು ಯಾರು?

Spread the love
  • ಮುನಿರತ್ನ-C.P ಯೋಗೇಶ್ವರ್ ಪೈಕಿ ಯಾರಿಗೆ ಮಣೆ..?
  • ಮಂತ್ರಿ ಯಾರಾಗಬಹುದು
  • ಉಮೇಶ್ ಕತ್ತಿ
  • ಅರವಿಂದ್ ಲಿಂಬಾವಳಿ
  • ಎಸ್ . ಅಂಗಾರ್
  • ಎಂಟಿಬಿ ನಾಗರಾಜ್
  • ಶಂಕರ್
  • ಮುರುಗೇಶ್ ನಿರಾಣಿ

ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಇಂದು ಮಧ್ಯಾಹ್ನ 3.58 ಕ್ಕೆ ಮುಹೂರ್ತ ಫಿಕ್ಸ್​ ಆಗಿದೆ.

ಈಗಾಗಲೇ ಸಂಪುಟ ಸೇರಲಿರುವ 7 ಮಂದಿ ಪೈಕಿ 6 ಜನರ ಹೆಸರು ಫೈನಲ್ ಆಗಿದೆ. ಆದರೆ 7ನೇಯವರಾಗಿ ಶಾಸಕ ಮುನಿರತ್ನ ಹಾಗೂ ಪರಿಷತ್ ಸದಸ್ಯ ಸಿ.ಪಿ ಯೋಗೇಶ್ವರ್​​ ಪೈಕಿ ಯಾರಿಗೆ ಸಚಿವ ಸ್ಥಾನ ಎನ್ನೋದು ಇನ್ನೂ
ಸಸ್ಪೆನ್ಸ್.

ಈ ನಡುವೆ ನಿನ್ನೆ ರಾತ್ರಿ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ನಿವಾಸದಲ್ಲಿ ಸಭೆ ನಡೆಯಿತು. ಸಿಎಂ ಯಡಿಯೂರಪ್ಪ, ಡಿಸಿಎಂ ಲಕ್ಷ್ಮಣ್ ಸವದಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ,‌ ಕಂದಾಯ ಸಚಿವ ಆರ್.ಅಶೋಕ್ ಹಾಗೂ ಮುನಿರತ್ನ ಸಭೆಯಲ್ಲಿ ಉಪಸ್ಥಿತರಿದ್ದರು. ಸತತ ಮೂರುವರೆ ಗಂಟೆಗಳ ಕಾಲ ನಡೆದ ಈ ಸಭೆಯಲ್ಲಿ ಒಂದು ವಿಚಾರ ಬಿಟ್ಟು ಬಾಕಿ ಎಲ್ಲಾ ವಿಚಾರದಲ್ಲೂ ಯಡಿಯೂರಪ್ಪ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ನಾಗೇಶ್ ಸಚಿವ ಸ್ಥಾನ ಔಟ್ :

ಹಾಲಿ ಖಾಲಿಯಿರುವ 7 ಸ್ಥಾನದ ಜೊತೆಗೆ ಒಬ್ಬ ಅಥವಾ ಮೂವರು ಸಚಿವರನ್ನು ಸಂಪುಟದಿಂದ ತೆಗೆಯಲು ನಿರ್ಧರಿಸಲಾಗಿದೆ. ಅಬಕಾರಿ‌ ಸಚಿವ ಹೆಚ್.ನಾಗೇಶ್‌ರನ್ನು‌ ಸಂಪುಟದಿಂದ ಕೈ ಬಿಡಲು ಸಿಎಂ ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ನಾಗೇಶ್‌ರನ್ನು ಸಂಪುಟದಿಂದ ಕೈಬಿಟ್ಟರೆ, 8 ಸ್ಥಾನಗಳು ಖಾಲಿಯಿರುತ್ತದೆ. ಈ 8 ಸ್ಥಾನಗಳ ಪೈಕಿ 7 ಸ್ಥಾನಗಳನ್ನು ಭರ್ತಿ ಮಾಡಿ ಒಂದನ್ನು ಮಾತ್ರ ಖಾಲಿಯಿಟ್ಟುಕೊಳ್ಳುವ ನಿರ್ಧಾರಕ್ಕೆ ನಾಯಕರು ಬಂದಿದ್ದಾರೆ ಎಂದು ಹೇಳಲಾಗುತ್ತದೆ.

ಈ 6 ಮಂದಿಯ ಹೆಸರುಗಳು ಸಚಿವ ಸ್ಥಾನಕ್ಕೆ ಅಂತಿಮವಾಗಿವೆ. ಈಗ ಸಿ.ಪಿ.ಯೋಗೇಶ್ವರ್ ಹಾಗೂ ಮುನಿರತ್ನ ಮಧ್ಯೆ ಸಚಿವ ಸ್ಥಾನಕ್ಕಾಗಿ ಬಿಗ್ ಫೈಟ್ ಏರ್ಪಟ್ಟಿದೆ. ಸಂಪುಟ ಸ್ಥಾನದ ರೇಸ್‌ನಿಂದ ಹಿಂದೆ ಸರಿಯಲು ಇಬ್ಬರು ನಾಯಕರು ಕೂಡ ಒಪ್ಪುತ್ತಿಲ್ಲ. ಸಿ.ಪಿ.ಯೋಗೇಶ್ವರ್ ಸರ್ಕಾರ ರಚಿಸಲು ನಾನು ಶ್ರಮಿಸಿದ್ದೇನೆ ಎನ್ನುತ್ತಿದ್ದಾರೆ. ಇತ್ತ ಮುನಿರತ್ನ, ನಾನು ಬಂಡಾಯವೆದ್ದು ಬಂದಿದ್ದಕ್ಕೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿರುವುದು. ನನಗೆ ಕೊಟ್ಟಿರುವ ಭರವಸೆ ಈಡೇರಿಸಿ ಎಂದು ಸಿಎಂ ಮುಂದೆ ಒತ್ತಡ ಹೇರುತ್ತಿದ್ದಾರಂತೆ. ಇಬ್ಬರಲ್ಲಿ ಒಬ್ಬರನ್ನು ಮಾತ್ರ ಕ್ಯಾಬಿನೆಟ್‌ಗೆ ಸೇರ್ಪಡೆ ಮಾಡಿಕೊಳ್ಳಲು ಸಿಎಂ ನಿರ್ಧರಿಸಿದ್ದಾರೆ. ಹೀಗಾಗಿ, ಈ ಇಬ್ಬರಲ್ಲಿ ಒಬ್ಬರ ಹೆಸರು ಇನ್ನು ಅಂತಿಮವಾಗಬೇಕಿದೆ.

ಇಂದು ಬೆಳಗ್ಗೆ 9 ಗಂಟೆಗೆ ಮತ್ತೆ ಸಿಎಂ ನಿವಾಸಕ್ಕೆ ಬರಲು ಡಿಸಿಎಂ ಲಕ್ಷ್ಮಣ್ ಸವದಿ, ಸಚಿವರಾದ ಬೊಮ್ಮಾಯಿ ಹಾಗೂ ಆರ್.ಅಶೋಕ್‌ಗೆ ಯಡಿಯೂರಪ್ಪ ಸೂಚನೆ ನೀಡಿದ್ದಾರೆ. ಈ ಇಬ್ಬರಲ್ಲಿ ಒಬ್ಬರನ್ನು ಮಾತ್ರ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬಹುದು. ಇದರ ಬಗ್ಗೆ ಸಭೆ ನಡೆಸೋಣ ಎಂದು ಸಿಎಂ ಹೇಳಿದ್ದಾರೆ.

ಯೋಗೇಶ್ವರ್ ಹಾಗೂ ಮುನಿರತ್ನ ಪೈಕಿ ಯಾರಿಗೆ ಸಚಿವ ಸ್ಥಾನ ಒಲಿಯಲಿದೆ ಅನ್ನೋದು ಕುತೂಹಲ ಕೆರಳಿಸಿದೆ.

Copyright © All rights reserved Newsnap | Newsever by AF themes.
error: Content is protected !!