January 29, 2026

Newsnap Kannada

The World at your finger tips!

vishwanath

ಶಾಸಕ ವಿಶ್ವನಾಥ್ ಕೊಲೆಗೆ ಸಂಚು: ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಷನ ವಿರುದ್ದ ಎಫ್ ಐ ಆರ್

Spread the love

ಬೆಂಗಳೂರಿನ ಯಲಹಂಕ ಶಾಸಕ ಎಸ್.ಆರ್ ವಿಶ್ವನಾಥ್ ಕೊಲೆ ಸಂಚು ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

ರಾಜಾನುಕುಂಟೆ ಪೊಲೀಸರು ಕೋರ್ಟ್ ಅನುಮತಿ ಪಡೆದು ಐಪಿಸಿ ಸೆಕ್ಷನ್ 120ಬಿ, 506 ಅಡಿಯಲ್ಲಿ ಎಫ್‍ಐಆರ್ ದಾಖಲಿಸಿದ್ದಾರೆ.

ಕೊಲೆಗೆ ಸಂಚು ಸಂಬಂಧ ಕುಳ್ಳ ದೇವರಾಜ್, ಧರ್ಮ, ಮಂಜು ಎಂಬ ಮೂವರನ್ನು ವಶಕ್ಕೆ ಪಡೆದು ಪೊಲೀಸರು ಬಿಟ್ಟುಕಳಿಸಿದ್ದಾರೆ.

ಶಾಸಕರ ದೂರಿನಲ್ಲಿ ಗೋಪಾಲಕೃಷ್ಣ ಒಬ್ಬರೇ ಆರೋಪಿ. ಎಫ್‍ಐಆರ್ ಪ್ರತಿಯಲ್ಲಿ ಕೂಡ ಗೋಪಾಲಕೃಷ್ಣ ಒಬ್ಬರನ್ನೇ ಪೊಲೀಸರು ಆರೋಪಿಯನ್ನಾಗಿ ಮಾಡಿದ್ದಾರೆ. ದೂರಿನಲ್ಲಿ ಕುಳ್ಳ ದೇವರಾಜ್ ಹೆಸರು ಸೂಚಿಸಿದ್ದರೂ ಎಫ್‍ಐಆರ್‍ನಲ್ಲಿ ಹೆಸರಿಲ್ಲ. ಹೀಗಾಗಿ ಶಾಸಕ ಎಸ್.ಆರ್.ವಿಶ್ವನಾಥ್ ಒತ್ತಡಕ್ಕೆ ಪೊಲೀಸರು ಮಣಿದ್ರಾ ಎಂಬ ಸಂಶಯ ಹುಟ್ಟಿಕೊಂಡಿದೆ

ಈ ಪ್ರಕರಣ ಸಂಬಂಧ ರಾಜಾನುಕುಂಟೆ ಪೊಲೀಸರು ಶಾಸಕ ಎಸ್.ಆರ್.ವಿಶ್ವನಾಥ್‍ಗೂ ನೋಟಿಸ್ ನೀಡಿದ್ದಾರೆ. ದೂರಿನ ಜೊತೆ ಯಾವುದೇ ದಾಖಲೆಗಳನ್ನು ನೀಡದ ಹಿನ್ನೆಲೆಯಲ್ಲಿ ಘಟನೆಗೆ ಸಂಬಂಧಪಟ್ಟ ದಾಖಲೆ ನೀಡುವಂತೆ ನೋಟಿಸ್ ನೀಡಿದ್ದಾರೆ. ಅಲ್ಲದೆ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ, ಕುಳ್ಳ ದೇವರಾಜ್, ಕಾಂತ, ಧರ್ಮ, ಮಂಜ ಹಾಗೂ ಸಹಚರಿಗೆ ಸೇರಿದಂತೆ ಒಟ್ಟು 10ಕ್ಕೂ ಹೆಚ್ಚು ಮಂದಿಗೆ ರಾಜಾನುಕುಂಟೆ ಪೊಲೀಸರು ನೋಟಿಸ್ ನೀಡಿದ್ದಾರೆ.

ತನಿಖಾಧಿಕಾರಿ ದೊಡ್ಡಬಳ್ಳಾಪುರ ಇನ್ಸ್ ಪೆಕ್ಟರ್ ನವೀನ್ ಮುಂದೆ ತ್ವರಿತವಾಗಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‍ನಲ್ಲಿ ಉಲ್ಲೇಖ ಮಾಡಲಾಗಿದೆ.

error: Content is protected !!