Literature

ವಿಶ್ವಗುರು ಬಸವಣ್ಣ (Vishwaguru Basavanna)

ಡಾ. ರಾಜಶೇಖರ ನಾಗೂರ

ಭಾರತ ದೇಶದ ಹೊಸ ಸಂಸದೀಯ ಸಂಕೀರ್ಣಗಳಿಗೆ ಅಡಿಪಾಯ ಕಲ್ಲು ಇಡುವಾಗ ಭಾರತದ ಪ್ರಧಾನ ಮಂತ್ರಿಗಳು ಮಾತನಾಡುತ್ತಾ ನೆನೆದದ್ದು ಜಗಜ್ಯೋತಿ ಬಸವೇಶ್ವರರನ್ನು. ಸಂಸತ್ತು ಎನ್ನುವ ಪರಿಕಲ್ಪನೆಯ ಶಬ್ದ ಬಂದಾಗಲೆಲ್ಲ ಬಸವಣ್ಣನವರು ನೆನಪಾಗಲೇಬೇಕು.

ಇಡೀ ದೇಶದ ಹಿತ ಕಾಯಲೆಂದೇ ಇರುವ, ಹೊಸ ಕಾನೂನುಗಳನ್ನು ಚರ್ಚಿಸಿ ಜಾರಿಗೆ ತರುವ, ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಸಾಮಾಜಿಕ ನ್ಯಾಯ ಒದಗಿಸುವ ಸಂಸತ್ತನ್ನು 12ನೆಯ ಶತಮಾನದಲ್ಲಿಯೇ ಶ್ರೀ ಬಸವೇಶ್ವರರು ಕರ್ನಾಟಕದ ಬಸವಕಲ್ಯಾಣದಲ್ಲಿ ‘ಅನುಭವ ಮಂಟಪ’ದ ರೂಪದಲ್ಲಿ ಪ್ರಾರಂಭಿಸಿ ಸಮಾನ ಸಮಾಜಕ್ಕೆ ನಾಂದಿ ಹಾಡಿದರು.

ಪ್ರಜಾಪ್ರಭುತ್ವದ ತಳಹದಿಯೆಂದು ಕರೆಯುವ ‘ಮ್ಯಾಗ್ನಾಕಾರ್ಟ’ 13ನೇ ಶತಮಾನದಲ್ಲಿ ಬರೆಯಲ್ಪಟ್ಟರೆ ಅದಕ್ಕಿಂತ ಮುಂಚಿತವಾಗಿಯೇ 12ನೇ ಶತಮಾನದಲ್ಲಿಯೇ ಸಂಸದೀಯ ಪ್ರಜಾಪ್ರಭುತ್ವದ ಮುನ್ನುಡಿ ಬರೆದ ಕೀರ್ತಿ ‘ವಿಭೂತಿ ಪುರುಷ’ ಶ್ರೀಬಸವಣ್ಣನವರಿಗೆ ಸಲ್ಲುತ್ತದೆ.

ಸ್ವತಂತ್ರ ಭಾರತದ ಸಂವಿಧಾನದಲ್ಲಿ ಜಾತ್ಯತೀತ (Secular) ಎಂಬ ಪದವನ್ನು ಸಂವಿಧಾನದ ಮುನ್ನುಡಿ (Preamble) ಯಲ್ಲಿ ಸೇರಿಸಲು 1976 ರಲ್ಲಿ 42ನೇ ಸಂವಿಧಾನ ತಿದ್ದುಪಡೆ ಮಾಡಬೇಕಾಯಿತು. ಅಂದರೆ ಸ್ವತಂತ್ರ ಸಿಕ್ಕು 30 ವರ್ಷಗಳ ನಂತರ ಭಾರತವನ್ನು ‘ಜಾತ್ಯತೀತ ರಾಷ್ಟ್ರ’ ಎನ್ನಬೇಕಾಯಿತು. ಈ ಜಾತ್ಯಾತೀತ ಪರಿಕಲ್ಪನೆಯನ್ನು 12ನೇ ಶತಮಾನದಲ್ಲಿಯೇ ಬಸವಣ್ಣ ಸಾರಿ ಸಾರಿ ಜಗತ್ತಿಗೆ ಹೇಳಿದ್ದ ಎನ್ನುವುದಕ್ಕೆ ಅಂದು ಬಸವಣ್ಣನವರು ಮಾಡಿಸಿದ ಪ್ರೇಮವಿವಾಹವೇ ಸಾಕ್ಷಿ.

ಸಂವಿಧಾನದ ಮೂಲಭೂತ ಹಕ್ಕುಗಳಲ್ಲೊಂದಾದ Art-14 ಕಾನೂನಿನ ಮುಂದೆ ಸಮಾನತೆ ಮತ್ತು ಕಾನೂನಿನ ಸಮಾನ ರಕ್ಷಣೆ ಒದಗಿಸುವಲ್ಲಿ ಧರ್ಮ, ಜಾತಿ, ಲಿಂಗ,ವರ್ಗ, ಹುಟ್ಟಿದ ಸ್ಥಳ ಇತ್ಯಾದಿಗಳ ಪರಿಗಣನೆ ಯಾಗಬಾರದು ಎಂದು ಹೇಳುತ್ತದೆ. ಇದನ್ನು ಅಂದೇ ಬಸವಣ್ಣನವರು ಪ್ರಾಯೋಗಿಕವಾಗಿ ಕಾರ್ಯಗತಗೊಳಿಸಿದ್ದ ಎನ್ನುವುದಕ್ಕೆ ಮಾದರ ಹರಳಯ್ಯ, ಡೋಹರ ಕಕ್ಕಯ್ಯ ಮುಂತಾದವರ ವಚನಾಭಿವ್ಯಕ್ತಿಯೇ ಸಾಕ್ಷಿಯಾಗಿ ನಿಲ್ಲುತ್ತವೆ.

21ನೇ ಶತಮಾನದಲ್ಲಿಯೂ ಮಹಿಳೆಯರಿಗೆ 50% ಮೀಸಲಾತಿ ಒದಗಿಸಲು ಹೆಣಗಾಡುತ್ತಿರುವ ನಮಗೆ, ಅಂದು ಹನ್ನೆರಡನೇ ಶತಮಾನದಲ್ಲಿಯೇ ಬಸವಣ್ಣನವರು ಹೆಣ್ಣು ಮಕ್ಕಳಿಗೆ ವಿಚಾರಗಳ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಒದಗಿಸಿದ ಹಿನ್ನೆಲೆಯಲ್ಲಿಯೇ ಅಕ್ಕಮಹಾದೇವಿ, ಆಯ್ದಕ್ಕಿ ಲಕ್ಕಮ್ಮ, ಸೂಳೇ ಸಂಕವ್ವ ಮುಂದೆಬಂದು ವಚನಗಳ ಮೂಲಕ ತಮ್ಮನ್ನು ಅಭಿವ್ಯಕ್ತಿಸಿಕೊಂಡರು. ಸ್ತ್ರೀಯರಿಗೆ ಸಂಗಾತಿಗಳ ಆಯ್ಕೆ ವಿಧವೆಯರಿಗೆ ಪುನರ್ ವಿವಾಹಕ್ಕೆ ಅವಕಾಶ ಕಲ್ಪಿಸಿದ ಕೀರ್ತಿ ಬಸವಣ್ಣನಿಗೆ ಸಲ್ಲಬೇಕು. ಲಿಂಗ ಭೇದದ ವಿರುದ್ಧ ಹೋರಾಡಿದ ಬಸವಣ್ಣನವರು ನಮಗೆ ಇಂದಿಗೂ ಮಾದರಿ.

ಮೇಲಿನ ಎಲ್ಲಾ ಕಾರಣಗಳಿಂದ ಮೊದಲ ಬಾರಿಗೆ ಸಂಸತ್ತಿನ ಪರಿಕಲ್ಪನೆ ಕೊಟ್ಟ ಯುಗಪುರುಷ ಶ್ರೀ ಬಸವೇಶ್ವರರು.

ಕಾಯಕ ದಾಸೋಹ ಮಂತ್ರ: ‘ಕಾಯಕವೇ ಕೈಲಾಸ’ ‘ಗುರುಲಿಂಗ ಜಂಗಮವಾದರೂ ಕಾಯಕದಿಂದಲೇ ಮುಕ್ತಿ’ ಎಂದು ತಿಳಿಸಿ ಶ್ರಮ ಸಂಸ್ಕೃತಿಯ ಪ್ರತಿಪಾದಕರಾದರು ಶ್ರೀ ಬಸವೇಶ್ವರರು. ಬೆವರು ಸುರಿಸಿ ಬದುಕಿ ಎನ್ನುತ್ತಾ ದುಡಿಮೆ ಇಲ್ಲದೆಯೇ ಸಂಪತ್ತು ಗಳಿಸಬೇಕೆಂಬ ಇಂದಿನ ಮನಸ್ಥಿತಿಯವರಿಗೆ ಅಂದೇ ಛಡಿ ಏಟು ಕೊಟ್ಟಿದ್ದು ಬಸವಣ್ಣ.

‘ಕಾಗೆ ಒಂದಗುಳ ಕಂಡೊಡೆ ಕರೆಯದೆ ತನ್ನ ಬಳಗವನು’ ಎಂದು ತಿಳಿಸುತ್ತಾ ತನ್ನ ಗಳಿಕೆಯಲ್ಲಿ ಸಮಾಜದ ಪಾತ್ರವು ಇರುವುದರಿಂದ ಸಮಾಜದ ಜೊತೆ ಹಂಚಿಕೊಂಡು ಬದುಕಬೇಕೆಂದು ‘ಗಳಿಕೆಯ ಕ್ರೂಡೀಕರಣ’ (Concentration of wealth ) ವನ್ನು ಅಲ್ಲಗಳೆದದ್ದು ಅಣ್ಣ ಬಸವಣ್ಣನವರು. ಇದು ಕೇವಲ ಭಾರತಕ್ಕಲ್ಲ ಇಡೀ ವಿಶ್ವಕ್ಕೆ ಒಂದು ಅದ್ಭುತ ಸಂದೇಶವಾಗಿದೆ ಹೀಗಾಗಿ ಬಸವಣ್ಣ ವಿಶ್ವಗುರುವಾಗಿದ್ದು.

‘ದಯವೇ ಧರ್ಮದ ಮೂಲವಯ್ಯ’ ಎನ್ನುತ್ತಾ ಪರಸ್ಪರ ಪ್ರೀತಿ ಪ್ರೇಮ, ಮಾನವೀಯತೆ ಇಂತಹ ಗುಣಗಳನ್ನು ಒಳಗೊಂಡಾಗ ಯಾವುದೇ ಧರ್ಮ ಮಾನವ ಧರ್ಮವಾಗುತ್ತದೆಂದು ಧರ್ಮದ ತಳಹದಿ ‘ದಯೆ’ ಎಂದು ತಿಳಿಸಿದವರು ಶ್ರೀ ಬಸವೇಶ್ವರರು.

ಮೂಢನಂಬಿಕೆಗಳನ್ನು ಜನರಲ್ಲಿ ಹುಟ್ಟು ಹಾಕಿ ಧಾರ್ಮಿಕವಾಗಿ ಜನತೆಯನ್ನು ಶೋಷಣೆ ಮಾಡಿದ್ದು ಈ ಭಕ್ತಿ ಮಾರ್ಗ. ಇಂತಹ ಭಕ್ತಿ ಮಾರ್ಗದಲ್ಲಿ ಅಡೆತಡೆಗಳಂತಿರುವ ಮೂಢನಂಬಿಕೆಗಳನ್ನು ತೆಗೆದುಹಾಕಿ ‘ಕಲ್ಲ ನಾಗರ ಕಂಡರೆ ಹಾಲನೆರೆ ಎಂಬರಯ್ಯ ಉಣ್ಣದ ಲಿಂಗಕ್ಕೆ ಬೋನವ ಹಿಡಿಯ ಎಂಬರಯ್ಯ’ ಎಂದು ಬಸವಣ್ಣ ಪ್ರತಿಪಾದಿಸಿದ್ದು ವೈಜ್ಞಾನಿಕ ವೈಚಾರಿಕತೆ ಅಲ್ಲದೆ ಇನ್ನೇನು..!

ಪ್ರಾಮಾಣಿಕವಾಗಿ ಬದುಕಿ ಸಹ ಸಮಾಜದ ಮೆಚ್ಚುಗೆ ಪಡೆದರೆ ಮುಂದೆ ಸ್ವರ್ಗದಲ್ಲಿಯೂ ಸ್ಥಾನವಿದೆ ಎಂದು ‘ಇಲ್ಲಿ ಸಲ್ಲುವವರು ಅಲ್ಲಿಯೂ ಸಲ್ಲುವರು’ ಎನ್ನುತ್ತಾ ಇಹಪರಗಳ ಸಮನ್ವಯ ಎತ್ತಿ ಹಿಡಿದವರು ಶ್ರೀ ಬಸವಣ್ಣನವರು.

ಇಂದಿನ ಚುನಾವಣೆಯ ಸಂದರ್ಭದಲ್ಲಿ ನೀತಿ ಸಂಹಿತೆ ಜಾರಿಯಲ್ಲಿರಬಹುದು ಆದರೆ ಬಸವಣ್ಣನವರ

‘ಕಳಬೇಡ ಕೊಲಬೇಡ
ಖುಷಿಯ ನುಡಿಯಲು ಬೇಡ
ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ….’

ಈ ವಚನವು ವಿಶ್ವಕ್ಕೆ ನೀಡಿದ ಪ್ರತಿದಿನದ ನೈತಿಕ ನೀತಿ ಸಂಹಿತೆಯಾಗಿದೆ.

ಬಸವಣ್ಣನವರಿಗಿಂತ ಮುಂಚೆಯೇ ಹಳೆಯ ಶೈವ ಮತವನ್ನು ಬೆಳೆಸಿದ ಶ್ರೀ ರೇವಣಸಿದ್ದೇಶ್ವರರ ಪ್ರಭಾವಕ್ಕೆ ಒಳಗಾದ ಗ್ರಾಮಗಳಲ್ಲಿ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ‘ಇಂಗಳೇಶ್ವರ’ವೂ ಒಂದು. ಈ ಇಂಗಳೇಶ್ವರದಲ್ಲಿ ಕ್ರಿಸ್ತಶಕ 1131 ರ ವೈಶಾಖ ಶುದ್ದ ಅಕ್ಷಯ ತೃತೀಯ ರೋಹಿಣಿ ನಕ್ಷತ್ರದಲ್ಲಿ ಜನಿಸಿ, ಕೂಡಲಸಂಗನ ಪ್ರಭೇಯಲ್ಲಿ ಬೆಳೆದು ದೂರದ ಬೀದರ್ ನ ಬಿಜ್ಜಳನ ಬಸವಕಲ್ಯಾಣದಲ್ಲಿ ಹಣಕಾಸು ಮಂತ್ರಿಯಾಗಿ ಆಮೇಲೆ ಪ್ರಧಾನಿಯಾದದ್ದು ಬಸವಣ್ಣನವರ ಆರ್ಥಿಕ ಮತ್ತು ಆಡಳಿತ ಜ್ಞಾನಕ್ಕೆ ಸಾಕ್ಷಿಯಾಗಿದೆ.

ಹೀಗೆ ಜಿಡ್ಡು ಹಿಡಿದ ಸಮಾಜಕ್ಕೆ ವಚನಗಳ ವೈಚಾರಿಕತೆಯ ಸ್ಪರ್ಶ ನೀಡಿ ಸಮಾನ ಸಮಾಜದ ಕನಸು ಕಂಡ ಶರಣ ಬಸವಣ್ಣನು ಜಗಜ್ಯೋತಿ ಬಸವಣ್ಣನೇ ಸರಿ.

ನಿನ್ನೆ, ಇಂದು ಮತ್ತು ನಾಳೆಗಳಿಗೆ ಬಸವಣ್ಣನ ವಿಚಾರಗಳು ಎಂದೆಂದಿಗೂ ಪ್ರಸ್ತುತ. ಹೀಗಾಗಿ ಬಸವಣ್ಣ ನಿರಂತರ ಚಲಿಸುವ ಚೇತನ.

ಈ ಕಾರಣದಿಂದಲೇ ಇರಬೇಕು ಬಸವಣ್ಣನನ್ನು ಕುರಿತು ನಮ್ಮ ರಾಷ್ಟ್ರಕವಿ ಕುವೆಂಪುರವರು

‘ಕಾರ್ತಿಕದ ಕತ್ತಲಲ್ಲಿ ಆಕಾಶ ದೀಪವಾಗಿ ನೀ ಬಂದೆ,
ಬಟ್ಟೆಗೆಟ್ಟವರಿಗೊಂದು ದೊಂದಿ ದಿಕ್ಕಾಗಿ
ಎಂಟು ಶತಮಾನಗಳ ಹಿಂದೆ ಅಗ್ನಿ ಖಡ್ಗವ ನಾಂತು
ಓ ಅಧ್ಯಾತ್ಮ ಕ್ರಾಂತಿವೀರ,
ದೇವ ದಯೆಯೊಂದು ಹೇ, ಧೀರಾವತಾರ
ಶ್ರೀ ಗುರುಬಸವೇಶ್ವರಾ!
ಶ್ರೀ ಗುರುಬಸವೇಶ್ವರಾ!…’

ಎಂದು ಹೇಳಿರಬೇಕು.

ಇಂದು ಬಸವ ಜಯಂತಿ. ಬಸವನ ದಾರಿಯಲ್ಲಿ ಬಸವಣ್ಣನ ತತ್ವಾದರ್ಶಗಳನ್ನು ಅಳವಡಿಸಿಕೊಂಡು ಎನಗಿಂತ ಕಿರಿಯರಿಲ್ಲ ಎನ್ನುತ್ತಾ ಸಾಗೋಣವೇ..!

Team Newsnap
Leave a Comment
Share
Published by
Team Newsnap

Recent Posts

ಕ್ರೇಜಿವಾಲ್ ಗೆ ಮಧ್ಯಂತರ ಜಾಮೀನು ಪರಿಗಣನೆಗೆ ಸುಪ್ರೀಂ ಸೂಚನೆ

ನವದೆಹಲಿ : ಲೋಕಸಭೆ ಚುನಾವಣೆಯನ್ನು ಹಿನ್ನಲೆಯಲ್ಲಿ ರದ್ದಾಗಿರುವ ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌… Read More

May 3, 2024

ಬಿಜೆಪಿ ಜೊತೆಗಿನ ಮೈತ್ರಿ ಸದ್ಯಕ್ಕೆ ನನಗೆ ಮುಖ್ಯ ಅಲ್ಲ: ಎಚ್ ಡಿ ಕೆ

ರಾಯಚೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ತೀವ್ರ ಪೇಚಿಗೆ ಸಿಲುಕಿರುವ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ… Read More

May 3, 2024

ಹೆಚ್.ಡಿ ರೇವಣ್ಣ ವಿರುದ್ಧ ಕಿಡ್ನಾಪ್ ಕೇಸ್ ದಾಖಲು

ಮೈಸೂರು : ಮೈಸೂರು ಜಿಲ್ಲೆ ಕೆ.ಆರ್ ನಗರ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ಮಗನಿಂದ ರೇವಣ್ಣ ವಿರುದ್ಧ ದೂರು ದಾಖಲಿಸಲಾಗಿದ್ದು ,ಎಫ್‍ಐಆರ್… Read More

May 3, 2024

ರಾಮನಗರ : ಐಜೂರಿನಲ್ಲಿ ಕರಡಿ ಪ್ರತ್ಯಕ್ಷ

ರಾಮನಗರ : ಮೂರು ದಿನಗಳ ಹಿಂದೆ ಕರಡಿಯೊಂದು ಐಜೂರಿನ ಜನವಸತಿ ಪ್ರದೇಶದಲ್ಲಿ ನಿರ್ಭೀತಿಯಿಂದ ಓಡಾಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.… Read More

May 3, 2024

ಪ್ರಜ್ವಲ್ ರೇವಣ್ಣ ವಿರುದ್ಧ ಅತ್ಯಾಚಾರ ಕೇಸ್ ದಾಖಲು

ಬೆಂಗಳೂರು : . ಪ್ರಜ್ವಲ್ ರೇವಣ್ಣ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದ್ದು , ಸಂತ್ರಸ್ತೆಯೊಬ್ಬರು ಜಡ್ಜ್ ಮುಂದೆ ಸಿಆರ್ ಪಿಸಿ… Read More

May 3, 2024

ಪೊಲೀಸ್ ಠಾಣೆ ಸಮೀಪದಲ್ಲೇ ಪತ್ನಿಯನ್ನು ಕೊಂದ ಪತಿ

ಬೆಂಗಳೂರು : ಕೋರಮಂಗಲದ ಆರನೇ ಬ್ಲಾಕ್ ನಲ್ಲಿ , ಕಿರುಕುಳದ ದೂರು ನೀಡಿದ ಪತ್ನಿಯನ್ನು ಪೊಲೀಸ್ ಠಾಣೆ ಎದುರಲ್ಲೇ ಪತಿ… Read More

May 3, 2024