December 23, 2024

Newsnap Kannada

The World at your finger tips!

sandalwood , film , entertainment

Vishnuvardhan is a heartly loved by entire Karunadu - CM ವಿಷ್ಣುವರ್ಧನ್ ಇಡೀ ಕರುನಾಡು ‌ಮೆಚ್ಚಿದ ಹೃದಯವಂತ - ಸಿಎಂ

ವಿಷ್ಣುವರ್ಧನ್ ಇಡೀ ಕರುನಾಡು ‌ಮೆಚ್ಚಿದ ಹೃದಯವಂತ – ಸಿಎಂ

Spread the love

ನಟ ಡಾ ವಿಷ್ಣುವರ್ಧನ್ ಇಡೀ ಕರುನಾಡು ‌ಮೆಚ್ಚಿದ ಹೃದಯವಂತ,ತಮ್ಮ ಅಭಿನಯದಿಂದಲೇ ಜನಮನ ಗೆದ್ದ ಅಪ್ರತಿಮ ನಟ ಎಂದು ಮುಖ್ಯಮಂತ್ರಿ ತಿಳಿಸಿದರು .

ಮೈಸೂರಿನ ಎಚ್ ಡಿ ಕೋಟೆ ರಸ್ತೆಯ ಹಾಲಾಳು ಗ್ರಾಮದಲ್ಲಿ ಡಾ ವಿಷ್ಣುವರ್ಧನ್ ಪ್ರತಿಷ್ಠಾನ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ನಿರ್ಮಿಸಿರುವ ಡಾ ವಿಷ್ಣುವರ್ಧನ್ ಸ್ಮಾರಕ ಭವನ ಉದ್ಘಾಟಿಸಿ ಅವರು ಮಾತನಾಡಿದರು.ಸಾಹಿತಿ ‘ಬರಗೂರು ಆರೋಗ್ಯದಲ್ಲಿ ಏರುಪೇರು : ಆಸ್ಪತ್ರೆಗೆ ದಾಖಲು

ನಾಗರಹಾವು ಸಿನೆಮಾದ ರಾಮಾಚಾರಿ ಪಾತ್ರದ ಮೂಲಕ ಎಲ್ಲರ ಮನೆ ಮಾತಾದ ಡಾ ವಿಷ್ಣುವರ್ಧನ್ ಯಾವುದೇ ಪಾತ್ರಕ್ಕೂ ಸೈ ಎನ್ನವಂತೆ ನೂರಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಡಾ ವಿಷ್ಣುವರ್ಧನ್ ಅವರಿಗೆ ಜೀವನದಲ್ಲಿ ಜೊತೆಯಾಗಿ,ಶಕ್ತಿ ಯಾಗಿ ನಿಂತಿದ್ದ ಪದ್ಮಶ್ರೀ ಭಾರತಿ ಅವರು ವಿಷ್ಣುವರ್ಧನ್ ಅವರು ಜನಿಸಿದ ಮೈಸೂರಿನಲ್ಲೇ ಸ್ಮಾರಕ ನಿರ್ಮಾಣ ಮಾಡಬೇಂದು ಹಂಬಲಿಸಿ ,ಪರಿಶ್ರಮ ವಹಿಸಿ ಸ್ಮಾರಕ ನಿರ್ಮಾಣ ಮಾಡಿಸಿದ್ದಾರೆ .

ಈ ಭವ್ಯ ಸ್ಮಾರಕದಲ್ಲಿ ಎಲ್ಲಾ ಸೌಲಭ್ಯ ಇದೆ ಸಾರ್ವಜನಿಕರು ಹಾಗೂ ಚಿತ್ರ ರಂಗ ಇದರ ಅನುಕೂಲ ಪಡೆದುಕೊಳ್ಳಬೇಕು ಎಂದರು.

ವಿಷ್ಣುವರ್ಧನ್ ಅವರ ಕಲೆ, ಸಾಹಸ, ಚಿತ್ರರಂಗದಲ್ಲಿ ಮಾಡಿರೋ ಸಾಧನೆ ಕಣ್ಣ ಮುಂದೆ ಇದೆ.
ನಾನು ಒಬ್ಬ ವಿಷ್ಣುವರ್ಧನ್ ಅಭಿಮಾನಿಯಾಗಿ ಇಲ್ಲಿ ಬಂದಿದ್ದೇನೆ. 70 ರ ದಶಕದಲ್ಲಿ ನಾಗರಹಾವಿನ ಹೊಸ ನಾಯಕ, ಅವ್ರ ಚಿತ್ರ ಬಂದಿತ್ತು.
ಮೊದಲ ಸಲಾ ನೋಡಿದವ್ರು ಖಂಡಿತವಾಗಿ ವಿಷ್ಣುವರ್ಧನ್ ಅಭಿಮಾನಿ ಆಗುತ್ತಿದ್ದರು.

ಇಂದಿಗೂ ಕೂಡ ವಿಷ್ಣುವರ್ಧನ್ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ವಿಷ್ಣುವರ್ಧನ್ ಭಾವುಕ ಜೀವಿ, ಮಾನವೀಯತೆಯಿಂದ ಮೆರೆದವರು.
ಅವರ ಪಾತ್ರದಲ್ಲಿಯೂ ಮಾನವೀಯತೆ ಎದ್ದು ಕಾಣುತ್ತಿತ್ತು. ಸ್ಮಾರಕ ನಿರ್ಮಾಣಕ್ಕೆ ಯಡಿಯೂರಪ್ಪ ನವರು 11 ಕೋಟಿ ಬಿಡುಗಡೆ ಮಾಡಿಸಿದ್ದರು. ಇದಕ್ಕಾಗಿ ನಾನು ಯಡಿಯೂರಪ್ಪ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಡಾ ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕೆಂದು ಅಭಿಮಾನಿಗಳ ಒತ್ತಾಯವಾಗಿದೆ ರಾಜ್ಯ ಸರ್ಕಾರ ಮುಂದಿನ‌ ದಿನಗಳಲ್ಲಿ ಅವರ ಭಾವನೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವ ಕೆಲಸ ಮಾಡಲಿದೆ ಎಂದು ಅವರು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಶಾಸಕರಾದ ಜಿ.ಟಿ ದೇವೇಗೌಡ, ಭಾರತಿ ವಿಷ್ಣುವರ್ಧನ್, ಅನಿರುದ್ ಜತಕರ್ ಅವರು ಮಾತನಾಡಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಡಾ .ಪಿ ಹರ್ಷ ಅವರು ಪ್ರಸ್ತಾವಿಕವಾಗಿ ಮಾತನಾಡಿ ಡಾ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣದ ಹಿನ್ನಲೆ ,ಸ್ವರೂಪ ಇರುವ ಸೌಲಭ್ಯಗಳ ಬಗ್ಗೆ ವಿವರಿಸಿದರು.
ಲೋಕಸಭಾ ಸದಸ್ಯರಾದ ಪ್ರತಾಪ್ ಸಿಂಹ ,ಶಾಸಕರಾದ ರಾಮದಾಸ್, ನಾಗೇಂದ್ರ ಹಾಗೂ ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರು ವಿವಿಧ ಜನ ಪ್ರತಿನಿಧಿಗಳು ಹಾಜರಿದ್ದರು.

Copyright © All rights reserved Newsnap | Newsever by AF themes.
error: Content is protected !!