ವಿಜಯಪುರ : ನನ್ನನ್ನು ರಾಜಕೀಯವಾಗಿ ತುಳಿಯಲು ಯತ್ನಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನನ್ನ ಭೇಟಿಗಾಗಿ ಮನೆಗೆ ಬರುವುದು ಬೇಡ ಎಂದು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಎಚ್ಚರಿಕೆ ನೀಡಿದ್ದಾರೆ.
ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ನನ್ನ ಕ್ಷೇತ್ರದ ಅಭಿವೃದ್ಧಿಗೆ ಬರೆಯುತ್ತಿದ್ದ ಪತ್ರಗಳನ್ನೆಲ್ಲ ಈ ವಿಜಯೇಂದ್ರ ತನ್ನ ಬಳಿ ಇರಿಸಕೊಳ್ಳುತ್ತಿದ್ದ. ವಿಜಯಪುರ ನಗರ ಕ್ಷೇತ್ರದ ಅಭಿವೃದ್ದಿಗೆ ಬಿಡುಗಡೆ ಆಗಿದ್ದ 125 ಕೋಟಿ ರೂ. ಅನುದಾನವನ್ನು ತಡೆ ಹಿಡಿಯುವಲ್ಲಿ ವಿಜಯೇಂದ್ರ ಪಾತ್ರವಿದೆ ಎಂದು ಕಿಡಿ ಕಾರಿದರು. ಇದನ್ನು ಓದು – 100 ಕೋಟಿ ಮಹಿಳಾ ಪ್ರಯಾಣಿಕರ ದಾಟಿದ ಶಕ್ತಿ ಯೋಜನೆ !
ನನ್ನನ್ನು ಮಂತ್ರಿ ಮಾಡದೇ ಹಾಗೂ ಪಕ್ಷದಿಂದ ನನ್ನನ್ನು ಹೊರ ಹಾಕುವಲ್ಲಿ ಇವರು ಮಾಡಿರುವ ಎಲ್ಲ ನಾಟಕಗಳು ನನಗೆ ಗೊತ್ತಿದೆ. ಈಗ ನಾಟಕೀಯವಾಗಿ ನನ್ನ ಭೇಟಿಗೆ ಹೂಗುಚ್ಚ ಹಿಡಿದು ನನ್ನ ಮನೆಗೆ ಬಂದು ಮಾಧ್ಯಮಗಳಲ್ಲಿ ಪ್ರಚಾರ ಪಡೆಯುವ ಇವರ ಹುನ್ನಾರ ನನಗೆ ಗೊತ್ತಿದೆ. ಹೀಗಾಗಿ ಭೇಟಿಗೆ ವಿಜಯೇಂದ್ರ ನನ್ನ ಮನೆಗೆ ಬರುವುದು ಬೇಡ ಎಂದು ಕಿಡಿ ಕಾರಿದರು. ಇದನ್ನು ಓದು – ಮೈಸೂರು ಜಿಲ್ಲೆಯಲ್ಲಿ ಹುಲಿ ದಾಳಿಗೆ ಮಹಿಳೆ ಬಲಿ
ವಿಜಯೇಂದ್ರ ನನ್ನ ಮನೆಗೆ ಬರುವುದು ಬೇಡ : ಶಾಸಕ ಯತ್ನಾಳ್ – Vijayendra should not come to my house: MLA Yatnal #Yatnal #bjp #coldwar #inc #politics
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು