December 24, 2024

Newsnap Kannada

The World at your finger tips!

cc8b2009 4ad3 48df ba7d b67e559ee504

ನಟ ಸಂಚಾರಿ ವಿಜಯ್ ಇನ್ನಿಲ್ಲ.

Spread the love

ಅಪಘಾತದಲ್ಲಿ ಸಂಚಾರಿ ವಿಜಯ್(38) ಗಂಭೀರವಾಗಿ ಗಾಯ ಗೊಂಡಿದ್ದರು. ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪೋಲೊ ಆಸ್ಪತ್ರೆಯ ಐಸಿಯುನಲ್ಲಿ ನಟ ವಿಜಯ್ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ವಿಜಯ್ ಮೆದುಳಿನ ಬಲಭಾಗದಲ್ಲಿ ಹಾಗೂ ತೊಡೆಗೆ ತೀವ್ರ ಗಾಯವಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ.

87505c49 086b 4f4f 8d2c 833ea7df6400

ಸ್ನೇಹಿತನೊಂದಿಗೆ ಬೈಕ್​ನಲ್ಲಿ ಹಿಂದೆ ಕುಳಿತು ವಿಜಯ್ ಪ್ರಯಾಣಿಸುತ್ತಿದ್ದ ವೇಳೆ ಅಪಘಾತ ಸಂಭವಿಸಿತ್ತು. ಆಸ್ಪತ್ರೆಗೆ ತಂದಾಗಲೇ ಅವರ ಸ್ಥಿತಿ ಗಂಭೀರವಾಗಿತ್ತು. ಸ್ಕ್ಯಾನ್​ ಮಾಡಿದಾಗ ಮೆದುಳಿನ ಬಲಭಾಗದಲ್ಲಿ ರಕ್ತಸ್ರಾವವಾಗುತ್ತಿತ್ತು. ಹೀಗಾಗಿ, ಅವರಿಗೆ ಮೆದುಳಿನ ಆಪರೇಷನ್ ಅನ್ನು ನೆರವೇರಿಸಲಾಗಿತ್ತು.

ಅತಿ ಚಿಕ್ಕ ವಯಸ್ಸಿನಲ್ಲಿಯೇ ನಾನವನಲ್ಲ ಅವಳು ಅನ್ನೋ ಸಿನಿಮಾದ ನಟನೆಗಾಗಿ ಶ್ರೇಷ್ಠ ನಟ ರಾಷ್ಟ್ರೀಯ ಪ್ರಶಸ್ತಿಯನ್ನು ವಿಜಯ್ ಪಡೆದುಕೊಂಡಿದ್ದಾರೆ.

ಸಂಚಾರಿ ವಿಜಯ್ ನಿಧನಕ್ಕೆ ಚಿತ್ರ ರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ .

Copyright © All rights reserved Newsnap | Newsever by AF themes.
error: Content is protected !!