December 26, 2024

Newsnap Kannada

The World at your finger tips!

modi bosi

ಲಂಡನ್‌ನಲ್ಲಿ ಅಡಗಿರುವ ವಿಜಯ್‌ ಮಲ್ಯ, ನೀರವ್‌ ಮೋದಿ ಭಾರತಕ್ಕೆ ಹಸ್ತಾಂತರ- ಬೋರಿಸ್‌

Spread the love

ಬ್ಯಾಂಕ್‌ಗಳಿಂದ ಸಾವಿರಾರು ಕೋಟಿ ಸಾಲ ಪಡೆದು ವಂಚಿಸಿ ಲಂಡನ್‌ನಲ್ಲಿ ತಲೆಮರೆಸಿಕೊಂಡಿರುವ ಉದ್ಯಮಿಗಳಾದ ವಿಜಯ್‌ ಮಲ್ಯ ಹಾಗೂ ನೀರವ್‌ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸಲು ಯಾವುದೇ ತೊಡಕು ಇಲ್ಲ ಎಂದು ಬ್ರಿಟಿಷ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಹೇಳಿದರು.

ಭಾರತದಲ್ಲಿ ಎರಡು ದಿನ ಪ್ರವಾಸ ಕೈಗೊಂಡಿರುವ ಬೋರಿಸ್‌ ಜಾನ್ಸನ್‌, ವಿಜಯ್‌ ಮಲ್ಯ, ನೀರವ್‌ ಮೋದಿಯನ್ನು ವಿಚಾರಣೆಗಾಗಿ ಭಾರತಕ್ಕೆ ವಾಪಸ್ ಹಸ್ತಾಂತರಿಸಲು ನಾವು ಬಯಸುತ್ತೇವೆ ಎಂದರು.

ಯುಕೆ ಸರ್ಕಾರವು ಅವರನ್ನು ಹಸ್ತಾಂತರಿಸಲು ಆದೇಶಿಸಿದೆ. ಅವರನ್ನು ವಿಚಾರಣೆಗಾಗಿ ಭಾರತಕ್ಕೆ ಹಿಂತಿರುಗಿಸಲು ನಾವು ಬಯಸುತ್ತೇವೆ ಎಂದು ಹೇಳಿದ್ದಾರೆ.

ವಿಜಯ್‌ ಮಲ್ಯ ಮತ್ತು ನೀರವ್‌ ಮೋದಿ ಬ್ಯಾಂಕ್‌ಗಳಿಂದ 9 ಸಾವಿರ ಕೋಟಿ ರೂ. ಸಾಲ ಪಡೆದು ವಂಚಿಸಿ ವಿದೇಶಕ್ಕೆ ಪರಾರಿಯಾಗಿದ್ದಾರೆ.

ಆವರಿಬ್ಬರ ನಡೆಯನ್ನು ನಾವು ಸ್ವಾಗತಿಸುವುದಿಲ್ಲ. ನಾನು ಈಗ ಅದನ್ನು ಸಂಪೂರ್ಣವಾಗಿ ಸ್ಪಷ್ಟಪಡಿಸಲು ಬಯಸುತ್ತೇನೆ. ಭಾರತದಲ್ಲಿ ಕಾನೂನಿನಿಂದ ತಪ್ಪಿಸಿಕೊಳ್ಳಲು ನಮ್ಮ ಕಾನೂನು ವ್ಯವಸ್ಥೆಯನ್ನು ಬಳಸಿಕೊಳ್ಳುತ್ತಾರೆ ಈ ಜನರು ಎಂದು ಮಲ್ಯ, ನೀರವ್‌ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!