January 29, 2026

Newsnap Kannada

The World at your finger tips!

vijay kiragandur

ಮಂಡ್ಯಕ್ಕೆ 50 ಐಸಿಯು ಬೆಡ್ ಅಥವಾ 2 ಆ್ಯಕ್ಸಿಜನ್ ಘಟಕ ಸ್ಥಾಪನೆಗೆ ಆರ್ಥಿಕ ನೆರವು ವಿಜಯ್ ಕಿರಗಂದೂರು ನಿರ್ಧಾರ

Spread the love

ಮಂಡ್ಯ ಜಿಲ್ಲೆಯಲ್ಲಿ ಕೊರೊನಾ ಆರ್ಭಟ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಹೊಂಬಾಳೆ ಗ್ರೂಪ್ ಆಪ್ ಕಂಪನಿಯು ಜಿಲ್ಲೆಯಲ್ಲಿ ಸುಸಜ್ಜಿತ 50 ಐಸಿಯು ಹಾಸಿಗೆ ವ್ಯವಸ್ಥೆ ಅಥವಾ ಎರಡು ಆಮ್ಲಜನಕ ಘಟಕ ಸ್ಥಾಪನೆ ಮಾಡಲು ಅಗತ್ಯ ಆರ್ಥಿಕ ನೆರವು ನೀಡಲು ಮುಂದೆ ಬಂದಿದೆ.

ಈ ಕುರಿತಂತೆ ಹೊಂಬಾಳೆ ಕಂಪನಿ ವ್ವವಸ್ಥಾಪಕ ನಿರ್ಧೇಶಕ ಟಿ. ವಿಜಯ್ ಕಿರಗಂದೂರು ಮಂಡ್ಯ ಜಿಲ್ಲಾಧಿಕಾರಿ ಗಳಿಗೆ ಪತ್ರ ಬರೆದು‌ ಕಷ್ಟ ಕಾಲದಲ್ಲಿ ಜಿಲ್ಲೆಯ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಸಾಮಾಜಿಕ‌ ಜವಾಬ್ದಾರಿ ಯಾಗಿದೆ. ಈ ಕಾರಣಕ್ಕಾಗಿ ಸಂಸ್ಥೆಯು 50 ಹಾಸಿಗೆ ಐಸಿಯು ಬೆಡ್‌ ಅಥವಾ ಎರಡು ಆಮ್ಲಜನಕ ‌ತಯಾರಿಕಾ ಘಟಕಗಳನ್ನು ‌ಸ್ಥಾಪಿಸಲು ಜಿಲ್ಲಾಡಳಿತ ಕ್ಕೆ ಅಗತ್ಯ ಆರ್ಥಿಕ ನೆರವು ನೀಡುವುದಾಗಿ ಹೇಳಿದ್ದಾರೆ. ‌

ಮಂಡ್ಯ ತಾಲೂಕಿನ ಕಿರಗಂದೂರು ಗ್ರಾಮದವರಾದ ವಿಜಯ್, ಜಿಲ್ಲೆಗೆ ನೆರವು ನೀಡುವ ಮೂಲಕ ತಮ್ಮ ಸಾಮಾಜಿಕ ಹೊಣೆಗಾರಿಕೆ ನ್ಯಾಯ ಒದಗಿಸಲು ಮುಂದಾಗಿದ್ದಾರೆ.

error: Content is protected !!