ದೇಶದ ಎಲ್ಲ ನಾಗರಿಕರಿಗೂ ಮತದಾನದ ಹಕ್ಕನ್ನು ನೀಡಲೇಬಾರದು. ಸರ್ವಾಧಿಕಾರಿ ಆಡಳಿತವೇ ಶ್ರೇಷ್ಠ ಎಂದು ತೆಲುಗಿನ ನಟ ವಿಜಯ್ ದೇವರಕೊಂಡ ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಈ ಹೇಳಿಕೆ ನೀಡಿರುವ ಅವರು, ನಾನೇನಾದರೂ ರಾಜಕೀಯ ಪ್ರವೇಶಿಸಿದರೆ ಸರ್ವಾಧಿಕಾರಿಯಾಗಲು ಬಯಸುತ್ತೇನೆ. 300 ಮಂದಿ ಒಂದು ವಿಮಾನದಲ್ಲಿ ತೆರಳಲು ಬಯಸುತ್ತಾರೆ ಎಂದಿಟ್ಟುಕೊಳ್ಳಿ. ಪೈಲಟ್ ಯಾರಾಗಬೇಕು ಎಂದು ಎಲ್ಲ 300 ಮಂದಿ ಸೇರಿ ನಿರ್ಧರಿಸುತ್ತಾರಾ? ಇಲ್ಲವಲ್ಲ. ವಿಮಾನ ಓಡಿಸಲು ಯಾರು ಅರ್ಹರು ಎಂಬುದನ್ನು ಒಂದು ಸಮರ್ಪಕ ಸಂಸ್ಥೆ ನಿರ್ಧರಿಸುತ್ತದೆ.
ಅದೇ ರೀತಿ ದೇಶವನ್ನು ನಡೆಸಬೇಕಾದವರು ಯಾರು ಎಂಬುದನ್ನು ಇಡೀ ದೇಶವೇ ನಿರ್ಧರಿಸಬೇಕಾಗಿಲ್ಲ. ಪ್ರತಿಯೊಬ್ಬರಿಗೂ ಮತದಾನದ ಹಕ್ಕನ್ನು ನೀಡುವುದು ನನಗೆ ಸಮಂಜಸ ಎನಿಸುವುದಿಲ್ಲ ಎಂದು ಹೇಳಿದ್ದಾರೆ.
ತುಂಬಾ ಜನರು ಹಣ ಮತ್ತು ಹೆಂಡಕ್ಕಾಗಿ ತಮ್ಮ ಮತದಾನದ ಹಕ್ಕನ್ನು ಮಾರಿಕೊಳ್ಳುತ್ತಾರೆ. ಅವರು ಯಾವ ಕಾರಣಕ್ಕಾಗಿ ಮತದಾನದಲ್ಲಿ ಭಾಗಿಯಾಗುತ್ತಾರೆ ಎನ್ನುವ ಪರಿಕಲ್ಪನೆಯೂ ಅವರಿಗೆ ಇರುವುದಿಲ್ಲ. ಅಂತವರಿಗೆ ಮತದಾನ ಮಾಡಲು ಅವಕಾಶ ನೀಡಬಾರದು ಎಂದು ವಿಜಯ್ ಹೇಳಿದ್ದಾರೆ.
More Stories
ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ