January 15, 2025

Newsnap Kannada

The World at your finger tips!

pundar gang

ಯುವಕ- ಯುವತಿಯ ಖಾಸಗಿ ಕ್ಷಣ ವಿಡಿಯೋ ಮಾಡಿ,5 ಲಕ್ಷ ರು ಗೆ ಬೇಡಿಕೆ ಇಟ್ಟಿದ್ದ ಪಂಡರ ಗ್ಯಾಂಗ್ ಅಂದರ್

Spread the love

ಕಾರಲ್ಲೇ ಕೂರಿಸಿ ಯುವಕ, ಯುವತಿಯನ್ನು ಕೂರಿಸಿ ಖಾಸಗಿ ಕ್ಷಣಗಳನ್ನು ವೀಡಿಯೋ ರೆಕಾರ್ಡ್ ಮಾಡಿ 5 ಲಕ್ಷಕ್ಕೆ ಬೇಡಿಕೆ ಇಟ್ಟ ಪುಂಡರ ಗ್ಯಾಂಗ್ ,ಒಂದು ಯುವತಿಯ ಕೈಯನ್ನು ಹಿಡಿದು ಎಳೆದಾಡಿ ಘಟನೆ ಬೆಂಗಳೂರಿನ ಹೊರವಲಯದಲ್ಲಿ ನಡೆದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಂದೇನಹಳ್ಳಿ ಗ್ರಾಮದ ಸಯ್ಯದ್ ಆಸಿಫ್ ಫಾಷಾ, ನವಾಜ್ ಪಾಷ, ಲಿಯಾಖತ್ ಪಾಷಾ, ಸಲ್ಮಾನ್ ಖಾನ್, ರೂಹಿದ್ ರನ್ನು ಪೊಲೀಸರು ಬಂಧಿಸಿದ್ದಾರೆ.

ಯುವತಿಯೊಬ್ಬಳು ತನ್ನ ಸಂಬಂಧಿ ಯುವಕನ ಜೊತೆ ಸೆ. 25 ರಂದು ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ಅನುಗೊಂಡನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಹಂದೇನಹಳ್ಳಿ ಗ್ರಾಮದ ಖಾಸಗಿ ಲೇಔಟ್ ಗೆ ಈ ಜೋಡಿ ಹೋಗುತ್ತಿತ್ತು.

ಈ ವೇಳೆ ಇವರಿಬ್ಬರು ಕಾರಿನಲ್ಲಿ ಕೂತು ಸ್ನ್ಯಾಕ್ಸ್ ಮತ್ತು ತಂಪು ಪಾನೀಯ ಸೇವಿಸುತ್ತಿದ್ದರು.

ಆಗ 11:30ಕ್ಕೆ ಪುಂಡರ ಗ್ಯಾಂಗ್ ಆಗಮಿಸಿ, ಈ ಯುವತಿ ಯುವಕನನ್ನು ಕಾರಿನಲ್ಲೇ ಕೂರುವಂತೆ ಹೆದರಿಸಿದ್ದಾರೆ. ಇಬ್ಬರ ಖಾಸಗಿ ಕ್ಷಣಗಳನ್ನು ಮೊಬೈಲ್ ನಲ್ಲಿ ಈ ಗ್ಯಾಂಗ್ ಹಿಂದಿನಿಂದ ಚಿತ್ರೀಕರಿಸಿದೆ. ಅಲ್ಲದೆ ಯುವತಿಯ ಕೈ ಹಿಡಿದು ಎಳೆದಾಡಿದ್ದಾರೆ. ಐದು ಲಕ್ಷ ಹಣ ಕೊಡಬೇಕು, ಇಲ್ಲವಾದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಈ ವೀಡಿಯೋವನ್ನು ಹರಿಬಿಡೋದಾಗಿ ಬೆದರಿಕೆ ಹಾಕಿದ್ದಾರೆ. ಅಷ್ಟರಲ್ಲಿ ಈ ಗ್ಯಾಂಗ್ ದೂರದಲ್ಲಿ ಜನ ಬರುತ್ತಿರುವುದು ನೋಡಿ ಅಲ್ಲಿಂದ ಪರಾರಿಯಾಗಿದ್ದಾರೆ.


ಈ ಘಟನೆ ಯಿಂದ ಯುವತಿ ಆಘಾತಕ್ಕೆ ಒಳಗಾಗಿದ್ದಳು. ಚೇತರಿಸಿಕೊಂಡು ಘಟನೆಯ ಬಗ್ಗೆ ಅನುಗೊಂಡನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಐಪಿಸಿ ಸೆಕ್ಷನ್ 354(ಎ) (ಹೆಂಗಸಿನ ಮಾನಭಂಗ ಮಾಡುವ ಉದ್ದೇಶದಿಂದ ಅವಳ ಮೇಲೆ ಹಲ್ಲೆ ಅಥವಾ ಅಪರಾಧಿಕ ಬಲಪ್ರಯೋಗ ಮಾಡುವುದು), 354(ಡಿ)(ಹಿಂಬಾಲಿಸುವುದು), 504(ಶಾಂತಿಭಂಗವನ್ನು ಮಾಡಲು ಉದ್ರೇಕಿಸುವುದಕ್ಕಾಗಿ ಉದ್ದೇಶಪೂರ್ವಕ ಅವಮಾನ), 149(ಏಕೋದ್ದೇಶವನ್ನು ಈಡೇರಿಸುವಲ್ಲಿ ಮಾಡಲಾದ ಅಪರಾಧದ), 384(ಸುಲಿಗೆ)ಅಡಿ ಪೋಲಿಸರು ಪ್ರಕರಣ ದಾಖಲು ಮಾಡಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!