ಮಂಡ್ಯ :ಇಂದಿನ ಗೆಲುವು ಮಂಡ್ಯ ಜಿಲ್ಲೆಯ ಜನರ ಗೆಲುವು. ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಕಾರ್ಯಕರ್ತರ ಶ್ರಮದಿಂದ ಚುನಾವಣೆ ಗೆದ್ದಿದ್ದೇವೆ. ಜಿಲ್ಲೆಯ ಜನರು ಋಣವನ್ನು ಹೊರಿಸಿದ್ದಾರೆ.
ಭಗವಂತ ಕೊಟ್ಟ ಈ ಅವಕಾಶವನ್ನ ಮಂಡ್ಯ ಜನರ ಸಮಸ್ಯೆಯನ್ನು ಪರಿಹಾರ ಮಡುವೆ ಎಂದು ಮಂಡ್ಯ ನೂತನ ಸಂಸದ ಎಚ್ ಡಿ ಕುಮಾರ ಸ್ವಾಮಿ ಮಂಗಳವಾರ ಹೇಳಿದರು.
ಸುದ್ದಿಗಾರರ ಜೊತೆ ಮಾತನಾಡಿದ ಕುಮಾರಸ್ವಾಮಿ ಜಿಲ್ಲೆಯ ಜನ ನೀಡಿರುವ ಅವಕಾಶ ಉಪಯೋಗಿಸಿಕೊಂಡು ಪ್ರಾಮಾಣಿಕವಾಗಿ ಕೆಲಸ ಮಾಡ್ತಿನಿ.ಇವತ್ತಿನ ಗೆಲುವು ಮಂಡ್ಯ ಜನರದ್ದು.
ಪಕ್ಷ ಭೇಧ ಮರೆತು ನನಗೆ ಕೆಲಸ ಮಾಡಿದ್ದಾರೆ.ಅವರ ನಿರೀಕ್ಷೆ ಹುಸಿಯಾಗದಂತೆ ಕೆಲಸ ಮಾಡ್ತಿನಿ ಎಂಬ ಭರವಸೆ ನೀಡಿದರು .
ರಾಮನಗರ ಜಿಲ್ಲೆಯ ಜನ ನನಗೆ ಆಕ್ತಿ ತುಂಬಿದ್ದಾರೆ.ಇವತ್ತು ಮಂಡ್ಯ ಜನ ಶಕ್ತಿ ನೀಡಿದ್ದಾರೆ.ಈ ಚುನಾವಣೆಯಲ್ಲಿ ಅತ್ಯಂತ ಬಹುಮತದಲ್ಲಿ ಗೆಲ್ಲುವ ನಿರೀಕ್ಷೆ ಇತ್ತು.ನನ್ನ ನಿರೀಕ್ಷೆ 25 ಸ್ಥಾನ ಗೆಲ್ಲಬೇಕು ಅಂತಿತ್ತು ಆದ್ರೆ ಈ ರಿಸಲ್ಟ್ ಮನಸಿಗೆ ನೋವು ಮಾಡಿದೆ.
ಯಾಕೆ 25 ಸ್ಥಾನ ಗೆಲ್ಲಲಿಲ್ಲ ಅನ್ನೋದನ್ನ ಹೊರಗಡೆ ಮಾತನಾಡಲ್ಲ ಕೆಲವು ಆಂತರಿಕ ವಿಚಾರಗಳಿವೆ.
ಕಾಂಗ್ರೆಸ್ ನವರು ಕೇಂದ್ರದಲ್ಲಿ ಸರ್ಕಾರ ರಚನೆ ಮಾಡಲು ಮಾತುಕತೆ ನಡೆಸ್ತಿದ್ದಾರೆ.ಮೋದಿಯವರ ಸರ್ಕಾರ ರಚನೆ ಮಾಡಲು ಯಾವುದೇ ಸಮಸ್ಯೆ ಇಲ್ಲ ಎಂದರು.
ಚನ್ನಪಟ್ಟಣ ಮಾತ್ರವನ್ನು ನನ್ನ ಕರ್ಮ ಭೂಮಿ.ಚನ್ನಪಟ್ಟಣದಲ್ಲಿ ಮುಂದೆ ಯಾರು ಸ್ಪರ್ಧೆ ಮಾಡಬೇಕು ಅನ್ನೋದು ಕೂತು ತೀರ್ಮಾನ ಮಾಡ್ತಿವಿ.ಡಾ.ಕೆ. ಸುಧಾಕರ್ಗೆ ಭರ್ಜರಿ ಗೆಲುವು : ಶಾಸಕ ಪ್ರದೀಪ್ ಈಶ್ವರ್ ಗೆ ರಾಜೀನಾಮೆ ಒತ್ತಡ
ಮೋದಿಯವರ ಹೋರಾಟದಿಂದಲೇ ಇಂದು ಎನ್ ಡಿ ಎ ಇಷ್ಟು ಸ್ಥಾನ ಗೆಲ್ಲಲು ಸಾಧ್ಯವಾಯ್ತು. ಡಾ ಮಂಜುನಾಥ್ ಅವರನ್ನು ಹರಕೆ ಕುರಿ ಎಂದು ಹೇಳ್ತಿದ್ದರು ಇಂದು ಯಾರು ಅರಕೆ ಕುರಿ ಅಂತ ಗೊತ್ತಾಗಿದೆ.ಮುಂದಿನ ಚುನಾವಣೆಯಲ್ಲಿ ಹಾಸನವನ್ನೂ ಗೆಲ್ಲುತ್ತೆವೆ ಎಂದರು.
More Stories
ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ: 6 ಜನರ ಮೃತದೇಹ ಪತ್ತೆ
ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ: DYSP ವಿರುದ್ಧ ಗಂಭೀರ ಆರೋಪ
ಐಶ್ವರ್ಯ ಗೌಡ ಪ್ರಕರಣ: ಸರ್ಕಾರದ ವಿರುದ್ಧ ಹೆಚ್ಡಿಕೆ ವಾಗ್ದಾಳಿ