ನೀವು ಸಂಯಮದಿಂದ ಜೀವಿಸುತ್ತಿದ್ದೀರಿ. ಈ ಹೋರಾಟದಲ್ಲಿ ಜಯ ಖಂಡಿತ’ ಎಂದು ಭಾನುವಾರ ರೆಡಿಯೋದಲ್ಲಿ ಪ್ರಸಾರವಾದ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ
ದೇಶದ ಪ್ರಜೆಗಳನ್ನು ಕುರಿತು ಪ್ರಧಾನಿ ನರೇಂದ್ರ ಮೋದಿ ಹೇಳಿದ ಮಾತಿದು.
ಈಗ ದಸರಾ, ರಾಮನವಮಿಯಂತಹ ಹಬ್ಬಗಳ ಆಚರಣೆಗಳನ್ನು ಸರಳವಾಗಿ ಆಚರಿಸಲಾಗುತ್ತಿದೆ. ಮುಂದೆ ಈದ್, ದೀಪಾವಳಿ ಬರಲಿದೆ. ಹಬ್ಬಕ್ಕಾಗಿ ಖರೀದಿಸುವ ವಸ್ತುಗಳನ್ನು ಸಮಯದಲ್ಲಿ ದೇಶೀಯವಾಗಿ ತಯಾರಿಕೆ ಮಾಡಿದಂತಹ ಉತ್ಪನ್ನಗಳನ್ನು ಕೊಳ್ಳಿರಿ’ ಎಂದು ಪ್ರಜೆಗಳಲ್ಲಿ ಕೇಳಿಕೊಂಡರು.*
ಇನ್ನು ಇಂದಿನ ಮನ್ ಕಿ ಬಾತ್ ಕಾರ್ಯಕ್ರಮದ ಪ್ರಮುಖಾಂಶಗಳೆಂದರೆ:
- ಕಠಿಣ ಪರಿಸ್ಥಿತಿಯಲ್ಲಿ ನಾವು ಭದ್ರತಾ ಸಿಬ್ಬಂದಿ, ಓಲೀಸ್, ಪೌರ ಕಾರ್ಮಿಕರೊಡನೆ ಒಟ್ಟಾಗಿ ನಿಂತಂತೆ ಹಬ್ಬದ ಸಮಯದಲ್ಲೂ ನಿಲ್ಲೋಣ.
- ಹಬ್ಬಗಳಿಗೆ ವಸ್ತುಗಳನ್ನು ಖರೀದಿ ಮಾಡುವಾಗ ದೇಶೀಯ ವಸ್ತುಗಳಿಗೆ ಆದ್ಯತೆ ನೀಡೋಣ.
- ಖಾದಿಗೆ ವ್ಯಾಪಕ ಬೇಡಿಕೆ, ಖ್ಯಾತಿ ಬೆಳೆಯುತ್ತಿದೆ. ದೆಹಲಿಯ ಕೇಂದ್ರವೊಂದರಲ್ಲಿ ಒಂದೇ ದಿನಕ್ಕೆ 1 ಕೋಟಿ ರೂಗಳ ಖಾದಿ ಮಾರಾಟವಾಗಿದೆ.
- ವಿದೇಶದಲ್ಲಿ ಖ್ಯಾತಿ ಪಡೆಯುತ್ತಿರುವ ದೇಶೀಯ ಕ್ರೀಡೆಗಳಲ್ಲಿ ಮಲ್ಲಕಂಬವೂ ಒಂದು. ಅಮೇರಿಕಾದಲ್ಲಿ ಇದರ ತರಬೇತಿ ಕೇಂದ್ರ ಸ್ಥಾಪನೆಯಾಗಿದೆ.
- ತಮಿಳುನಾಡಿನ ತೂತುಕುಡಿಯ ನಿವಾಸಿ ಪೊನ್ ಮಾರಿಯಪ್ಪನ್ ಅವರು ತಮ್ಮ ಕಟಿಂಗ್ ಸಲೂನ್‌ನಲ್ಲಿ ಗ್ರಂಥಾಲಯ ಸ್ಥಾಪಿಸಿ, ಪುಸ್ತಕ ಓದಿದವರಿಗೆ ರಿಯಾಯಿತಿ ನೀಡುವ ಬಗ್ಗೆ ಅಭಿನಂದಿಸಿದರು.
- ಸರ್ದಾರ್ ಪಟೇಲ್ ಜನ್ಮದಿನದ ಪ್ರಯುಕ್ತ ಅಕ್ಟೋಬರ್ 31ನ್ನು ರಾಷ್ಟ್ರೀಯ ಏಕತಾ ದಿವಸ್ ಆಗಿಆಚರಿಸಬೇಕು. ಅವರ ತ್ಯಾಗ, ಬಲಿದಾನಗಳನ್ನು ನೆನೆಯಬೇಕು.
- ಚಂಡೀಘಡದ ಸಂದೀಪ್ ಕುಮಾರ ಬಡ ಮಕ್ಕಳಿಗೆ ಅನಕೂಲವಾಗಲೆಂದು ಸಂಚಾರಿ ಗ್ರಂಥಾಲಯ ತೆರೆದಿದ್ದಾರೆ.
- ‘ಏಕ್ ಭಾರತ್, ಶ್ರೇಷ್ಠ್ ಭಾರತ್’ ಜಾಲತಾಣ ಓದುವಂತೆ ಕರೆ.
- ಪೆನ್ಸುಲ್ ಹಾಗೂ ಸ್ಲೇಟ್ ಪುಲ್ವಾಮಾ ಪ್ರಸಿದ್ಧಿಯ ಬಗ್ಗೆ ಮಾತು.
- ಹಬ್ಬದ ಸಮಯದಲ್ಲೂ ಕೊರೋನಾಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಕರೆ.
- ಜಾರ್ಖಂಡ್‌ನ ಮಹಿಳಾ ಸ್ವಸಹಾಯ ಸಂಘದವರ ಆ್ಯಪ್ ಆಧಾರಿತ ತರಕಾರಿಮಾರಾಟದ ಬಗ್ಗೆ ಮೆಚ್ಚುಗೆ.
More Stories
10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ
ವಿರಾಟ್ ಕೊಹ್ಲಿಗೆ ಬಿಬಿಎಂಪಿ ನೋಟಿಸ್