December 23, 2024

Newsnap Kannada

The World at your finger tips!

WhatsApp Image 2022 06 15 at 11.04.17 AM

with a veterinarian abducted and had a forced marriage

ಪಶುವೈದ್ಯನನ್ನು ಅಪಹರಿಸಿ ಬಲವಂತದ ಮದುವೆ ಮಾಡಿದ್ರು

Spread the love

ಪ್ರಾಣಿ ಪರೀಕ್ಷಿಸಲು ಕರೆಸಿದ್ದ ಪಶುವೈದ್ಯನನ್ನು ಅಪಹರಿಸಿ ಬಲವಂತವಾಗಿ ಮದುವೆ ಮಾಡಿಸಿದ ಘಟನೆ ಬಿಹಾರದ ಬೇಗುಸರಾಯ್‍ನಲ್ಲಿ ನಡೆದಿದೆ.

ಸಂತ್ರಸ್ತನ ತಂದೆ ಈ ಕುರಿತು ಮಾತನಾಡಿದ್ದು, ನನ್ನ ಮಗನನ್ನು 12 ಗಂಟೆ ರಾತ್ರಿಗೆ ಪ್ರಾಣಿಯೊಂದಕ್ಕೆ ಆರೋಗ್ಯ ಸರಿಯಿಲ್ಲ ಎಂದು ಕರೆಸಿಕೊಂಡಿದ್ದರು. ಈ ವೇಳೆ ಮೂವರು ಬಂದು ನನ್ನ ಮಗನನ್ನು ಅಪಹರಿಸಿಕೊಂಡು ಹೋಗಿದ್ದಾರೆ. ವಿಷಯ ತಿಳಿದು ನಮಗೆ ಗಾಬರಿಯಾಯಿತು. ಅದಕ್ಕೆ ನಾನು ಪೊಲೀಸರಿಗೆ ದೂರು ಕೊಟ್ಟಿದ್ದೇವೆ ಎಂದು ಹೇಳಿದರು. ಇದನ್ನು ಓದಿ –ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸಿದ ನೂತನ ಲೋಕಾಯುಕ್ತ ಬಿ.ಎಸ್. ಪಾಟೀಲ್

ಬೇಗುಸರಾಯ್ SP ಯೋಗೇಂದ್ರ ಕುಮಾರ್ ಈ ಕುರಿತು ಮಾತನಾಡಿದ್ದು, ಸಂತ್ರಸ್ತನ ತಂದೆ ಅವರೇ ದೂರನ್ನು ಬರೆದು ಪೊಲೀಸ್ ಠಾಣೆಗೆ ಕೊಟ್ಟಿದ್ದಾರೆ. ಈ ಬಗ್ಗೆ ತನಿಖೆ ನಡೆಸುವಂತೆ ನಾವು ಎಸ್‍ಎಚ್‍ಒ ಮತ್ತು ಇತರ ಅಧಿಕಾರಿಗಳನ್ನು ಕೇಳಿದ್ದೇವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಇದೊಂದು ಪದ್ಧತಿ ವರನ ಅಪಹರಣ ಅಥವಾ ‘ಪಕದ್ವಾ ವಿವಾಹ’ ಎಂಬುದು ಬಿಹಾರದಲ್ಲಿ ನಡೆಯುವ ಪದ್ಧತಿಯಾಗಿದೆ. ಜಾರ್ಖಂಡ್ ಮತ್ತು ಉತ್ತರ ಪ್ರದೇಶದ ಭಾಗಗಳಲ್ಲಿ ಇದು ಸಾಮಾನ್ಯವಾಗಿದೆ. ಈ ಪದ್ಧತಿಯಲ್ಲಿ ಬ್ರಹ್ಮಚಾರಿಗಳನ್ನು ಅಪಹರಿಸಿ ಬಲವಂತವಾಗಿ ಮದುವೆ ಮಾಡಿಸುತ್ತಾರೆ. ಆರ್ಥಿಕ ಮತ್ತು ಸಾಮಾಜಿಕ ಭದ್ರತೆಯನ್ನು ಹೊಂದಿರುವವರನ್ನು ವಧುವಿನ ಕುಟುಂಬ ಅಪಹರಿಸಿ ಮದುವೆ ಮಾಡಿಸುತ್ತಾರೆ.

Copyright © All rights reserved Newsnap | Newsever by AF themes.
error: Content is protected !!