ಹಿರಿಯ ನಟ,ರಂಗಕರ್ಮಿ, ಪ್ರಗತಿ ಪರ ಚಿಂತಕ ಜಿ ಕೆ ಗೋವಿಂದ ರಾವ್ ಇಂದು ಬೆಳಗಿನ ಜಾವ ಹುಬ್ಬಳ್ಳಿಯ ಮಗಳ ನಿವಾಸದಲ್ಲಿ ಕೊನೆಯುಸಿರೆಳೆದರು.
1937 ರ ಏಪ್ರಿಲ್ 27 ರಂದು ಬೆಂಗಳೂರಿನಲ್ಲಿ ಜನಿಸಿದ ಗೋವಿಂದ ರಾವ್ ಇಂಗ್ಲೀಷ್ ಪ್ರಾಧ್ಯಾಪಕರಾಗಿದ್ದರು. ಇವರಿಗೆ ಇಬ್ಬರು ಪುತ್ರಿಯರು ಇದ್ದಾರೆ. ಗೋವಿಂದ ರಾವ್ ಅವರು ತಮ್ಮ ಎರಡು ಕಣ್ಣುಗಳನ್ನು ದಾನ ಮಾಡಿದ್ದಾರೆ.
ಗೋವಿಂದ ರಾವ್ ಬೆಳಗಿನ ಜಾವ 4 ಗಂಟೆಗೆ ವಿಧಿವಶರಾದರು. ಹಬ್ಬದ ಹಿನ್ನೆಲೆಯಲ್ಲಿ ಕುಟುಂಬದವರು
ಹುಬ್ಬಳ್ಳಿಯ ಕೇಶವಾಪುರದಲ್ಲಿ ಇರುವ ಮುಕ್ತಿ ಧಾಮದಲ್ಲಿ ಬೆಳಿಗ್ಗೆ 8 ಅಂತ್ಯ ಕ್ರಿಯೆ ನೆರವೇರಿಸಿದರು.
ರಂಗಭೂಮಿ, ನಾಟಕದ ಅಪಾರ ಒಲವು ಹೊಂದಿದ್ದ ಗೋವಿಂದ ರಾವ್ ಮಿಥಿಲೆಯ ಸೀತೆಯರು, ಗೃಹ, ಕರ್ಫೂ , ಶಾಸ್ರ್ತಿ ಸೇರಿದಂತೆ ಅನೇಕ ಕೃತಿಗಳನ್ನು ರಚಿಸಿದ್ದಾರೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಕನ್ನಡ ಸಿನಿಮಾ ಕ್ಷೇತ್ರಕ್ಕೆ ಉದ್ಯಮ ಸ್ಥಾನಮಾನ
ರಾಜ್ಯ ಸರ್ಕಾರದಿಂದ ಸಿನಿಮಾ ಟಿಕೆಟ್ ದರ ನಿಯಂತ್ರಣದ ಚಿಂತನೆ: ಗೃಹ ಸಚಿವ ಜಿ. ಪರಮೇಶ್ವರ್