February 15, 2025

Newsnap Kannada

The World at your finger tips!

WhatsApp Image 2022 08 24 at 7.17.11 PM

ಹೊಸ ಕಾರು-ಬೈಕ್ ಖರೀದಿಸುವವರಿಗೆ ಶಾಕ್: ಫೆ.1ರಿಂದ ನೋಂದಣಿ ಶುಲ್ಕ ಹೆಚ್ಚಳ

Spread the love

ಬೆಂಗಳೂರು: 2025ರಲ್ಲಿ ಹೊಸ ಕಾರು ಮತ್ತು ಬೈಕ್ ಖರೀದಿಸುವವರಿಗೆ ರಾಜ್ಯ ಸರ್ಕಾರ ಆಘಾತಕಾರಿ ನಿರ್ಧಾರವನ್ನು ಪ್ರಕಟಿಸಿದೆ. ಫೆಬ್ರವರಿ 1 ರಿಂದ ವಾಹನ ನೋಂದಣಿ ಶುಲ್ಕವನ್ನು ಹೆಚ್ಚಿಸುವುದಾಗಿ ಸರ್ಕಾರ ಘೋಷಿಸಿದೆ. ಹೊಸ ಕಾರುಗಳ ನೋಂದಣಿ ಶುಲ್ಕವನ್ನು ₹1000 ಮತ್ತು ಬೈಕ್‌ಗಳ ಶುಲ್ಕವನ್ನು ₹500 ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ.

ಬೆಳಗಾವಿ ಅಧಿವೇಶನದಲ್ಲಿ ಅನುಮೋದನೆ
ಈ ಸಂಬಂಧ ಮಸೂದೆ ಈಗಾಗಲೇ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಮಂಡನೆಗೊಂಡಿದ್ದು, ಅದಕ್ಕೆ ಗ್ರೀನ್ ಸಿಗ್ನಲ್ ದೊರಕಿದೆ. ಡಿಸೆಂಬರ್‌ನಲ್ಲಿ ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆದ ಅಧಿವೇಶನದಲ್ಲಿ ಈ ವಿಷಯ ಚರ್ಚೆಯಾಗಿ, ಪರಿಷ್ಕೃತ ದರಗಳನ್ನು ಜಾರಿಗೆ ತರಲು ನಿರ್ಧಾರ ಕೈಗೊಳ್ಳಲಾಗಿದೆ.

ಯೆಲ್ಲೋ ಬೋರ್ಡ್ ಚಾಲಕರ ಅಭಿವೃದ್ಧಿಗೆ ಹಣ ಬಳಕೆ
ಸರಕಾರ ಈ ಹೆಚ್ಚುವರಿ ಹಣವನ್ನು ಯೆಲ್ಲೋ ಬೋರ್ಡ್‌ (ವಾಣಿಜ್ಯ ವಾಹನ) ಚಾಲಕರ ಕಲ್ಯಾಣಕ್ಕೆ ಬಳಸಲಾಗುವುದು ಎಂದು ತಿಳಿಸಿದೆ. ಈ ಹೊಸ ದರಗಳನ್ನು ಅನುಷ್ಠಾನಗೊಳಿಸಲು ಸರಕಾರ ಈಗಾಗಲೇ ಗೆಜೆಟ್ ನೋಟಿಫಿಕೇಷನ್ ಹೊರಡಿಸಿದ್ದು, ಸಾರಿಗೆ ಇಲಾಖೆ ‘ವಾಹನ್ – 4’ ಸಾಫ್ಟ್‌ವೇರ್‌ನಲ್ಲಿ ಈ ಪರಿಷ್ಕೃತ ದರಗಳನ್ನು ಅಪ್‌ಡೇಟ್ ಮಾಡುತ್ತಿದೆ. ಅಂತಿಮ ಆದೇಶ ಹೊರಡಿಸಿದ ಕೂಡಲೇ ರಾಜ್ಯದ ಎಲ್ಲ ಪ್ರಾದೇಶಿಕ ಸಾರಿಗೆ ಕಚೇರಿಗಳು (RTO) ಹೊಸ ದರ ಜಾರಿಗೆ ತರಲಿವೆ.ಇದನ್ನು ಓದಿ –ಮಹಾ ಕುಂಭಮೇಳದಲ್ಲಿ ಭೀಕರ ಕಾಲ್ತುಳಿತ: 17 ಮಂದಿ ಸಾವು, 50ಕ್ಕೂ ಹೆಚ್ಚು ಮಂದಿ ಗಾಯ

ಸರ್ಕಾರದ ನಿರ್ಧಾರದ ವಿರುದ್ಧ ಜನರ ಆಕ್ರೋಶ
ಈ ಹಿಂದೆ KSRTC ಬಸ್ ಟಿಕೆಟ್‌ ದರವನ್ನು 15% ಹೆಚ್ಚಿಸಿ ಸಾರ್ವಜನಿಕ ಆಕ್ರೋಶ ಎದುರಿಸಿದ್ದ ರಾಜ್ಯ ಸರ್ಕಾರ, ಇದೀಗ ಹೊಸ ವಾಹನ ಖರೀದಿಗೆ ಹೆಚ್ಚುವರಿ ನೋಂದಣಿ ಶುಲ್ಕ ವಿಧಿಸಿ ಮತ್ತಷ್ಟು ವಿರೋಧಕ್ಕೆ ಕಾರಣವಾಗಿದೆ. ಸರ್ಕಾರ ಚಾಲಕರ ಅಭಿವೃದ್ಧಿ ಹೆಸರಿನಲ್ಲಿ ಹೊಸ ವಾಹನ ಖರೀದಿದಾರರಿಂದ ಹೆಚ್ಚುವರಿ ಹಣ ವಸೂಲಿ ಮಾಡುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!