ಬೆಂಗಳೂರು : ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರದ ಮಾಜಿ ಸಚಿವ ಮಾರ್ಪಾಡಿ ವೀರಪ್ಪ ಮೊಯಿಲಿ ಅವರ ಕಿರಿಯ ಪುತ್ರಿ ಹಂಸ ಮೊಯಿಲಿ ಅವರು ಇಲ್ಲಿ ಇಂದು ನಿಧನರಾದರು. ಅವರಿಗೆ 46 ವರ್ಷ ವಯಸ್ಸಾಗಿತ್ತು.
ಭರತನಾಟ್ಯ ಕಲಾವಿದೆಯೂ ಆಗಿದ್ದ ಹಂಸ ಅವರು ಕೆಲ ಕಾಲ ಅಸ್ವಸ್ಥರಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಇದನ್ನು ಓದಿ –ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India
ದೇವದಾಸಿಯರ ಕಥೆ ಆಧಾರಿತ ತಮಿಳಿನ ಶೃಂಗಾರಂ ಚಿತ್ರದಲ್ಲಿಯೂ ಅಭಿನಯಿಸಿದ್ದ ಹಂಸ ಅವರು ತಂದೆ ವೀರಪ್ಪ ಮೊಯಿಲಿ, ತಾಯಿ ಮಾಲತಿ ಮೊಯಿಲಿ, ಸಹೋದರ ಹರ್ಷಾ ಮೊಯಿಲಿ, ಸಹೋದರಿ ಸುಷ್ಮಾ ಅವರನ್ನು ಒಳಗೊಂಡಂತೆ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
More Stories
ಪೆಟ್ರೋಲ್ GST ವ್ಯಾಪ್ತಿಗೆ ಸೇರಿಸುವ ಕುರಿತು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮಹತ್ವದ ಸ್ಪಷ್ಟನೆ
ಐಶ್ವರ್ಯಗೌಡ ವಂಚನೆ ಪ್ರಕರಣ: ಶಾಸಕ ನರೇಂದ್ರಸ್ವಾಮಿಯ ಕೈವಾಡ ಶಂಕೆ, ಅನ್ನದಾನಿಯ ಗಂಭೀರ ಆರೋಪ
ಹೊಸ ವರ್ಷದ ಸಂಭ್ರಮ: KSBCLನಿಂದ ಒಂದೇ ದಿನ 308 ಕೋಟಿ ರೂ. ಮದ್ಯ ಮಾರಾಟ