ದಸರಾ ಜಂಜೂ ಸವಾರಿ ಮೆರವಣಿಗೆಯನ್ನು ಅರಮನೆಯ ಹೊರಗೆ ನಡೆಸಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೊರೊನಾ ಹಿನ್ನೆಲೆ ಈ ಬಾರಿ ಜಂಬೂ ಸವಾರಿಯನ್ನು ಕೇವಲ ಅರಮನೆ ಆವರಣದಲ್ಲೇ ನಡೆಸಲಾಗುತ್ತಿದೆ. ಇದನ್ನು ಖಂಡಿಸಿ ವಾಟಳ್ ನಾಗರಾಜ್ ಪ್ರತಿಭಟನೆ ನಡಸುತ್ತಿದ್ದರು. ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ವಾಟಳ್ ನಾಗರಾಜ್ ಸಿಎಂ ಯಡಿಯೂರಪ್ಪನವರ ಸರ್ಕಾರ ಪೊಲೀಸ್ ಸರ್ಕಾರ ಆಗಿದೆ. ಅರಮನೆ ಆವಣದಲ್ಲಿ ಅಂಬಾರಿ ಮೆರೆವಣಿಗೆ ನಡೆಸುತ್ತಿದ್ದಾರೆ. ಅಲ್ಲಿ ಭಾಗಿಯಾಗುವ ಯಾರಿಗೂ ಕೊರೊನಾ ಇಲ್ವಾ. ಸಿಎಂ ಬಿಎಸ್ವೈ ಅವರಿಗೆ ಆರೋಗ್ಯ ಸಚಿವರಿಗೆ ಎಲ್ಲರಿಗೂ ಕೊರೊನಾ ಬಂದಿತ್ತು, ಅವ್ರು ಭಾಗಿಯಾಗ್ತಿಲ್ವಾ ಅಂತಾ ಪ್ರಶ್ನಿಸಿದ್ದಾರೆ.
ಯಡಿಯೂರಪ್ಪ ಅವರೇ ನಿಮ್ಮ ದರ್ಪ ಬಿಡಿ, ನಾನು ನಿಮ್ಮ ನೀತಿ ವಿರೋಧಿಸುತ್ತೇನೆ. ನಾನು ಪೋಲೀಸ್ ಪರ. ನಿಮಗೆ ಗೌರವ ಮತ್ತು ಪೋಲೀಸ್ ಬಗ್ಗೆ ಪ್ರೀತಿ ಇದ್ದರೆ ಔರಾದ್ಕರ್ ವರದಿ ಜಾರಿ ಮಾಡಿ. ನೀವು ಅಧಿಕಾರದಿಂದ ಕೆಳಗೆ ಇಳಿದರೆ ನಿಮ್ಮನ್ನು ಒಂದು ಬೀದಿ ನಾಯಿ ಸಹ ಕೇಳುವುದಿಲ್ಲ. ಸಾರ್ವಜನಿಕರಿಗೆ ಚಾಮುಂಡಿ ಹಬ್ಬ ಮಾಡಲು ಅವಕಾಶ ನೀಡದಿರುವುದು ತೀವ್ರ ಖಂಡನೀಯ ಎಂದು ಹರಿಹಾಯ್ದರು.
More Stories
ಚನ್ನಪಟ್ಟಣದಲ್ಲಿ ಸಿ ಪಿ ಯೋಗೇಶ್ವರ್ ಗೆ ಭರ್ಜರಿ ಗೆಲುವು
ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಗೆಲುವು: ಅಧಿಕೃತ ಘೋಷಣೆ ಬಾಕಿ
ರಾಜ್ಯದ ಉಪಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ: ಬಿಜೆಪಿಗೆ ಆಘಾತ