ನಾಲ್ಕು ರೈಲುಗಳನ್ನು ಲೋಕಾರ್ಪಣೆ ಮಾಡಲಾಗಿದ್ದು, ಮತ್ತೊಂದು ರೈಲು ಸಂಚಾರಕ್ಕೆ ಸಿದ್ಧತೆ ನಡೆಸಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಹಿಮಾಚಲ ಪ್ರದೇಶದ ಉನಾ ರೈಲು ನಿಲ್ದಾಣದಲ್ಲಿ ನಾಲ್ಕನೇ ‘ವಂದೇ ಭಾರತ್’ ಎಕ್ಸ್ ಪ್ರೆಸ್ ರೈಲಿಗೆ ಚಾಲನೆ ನೀಡಿದ್ದರು. ಮುರುಘಾ ಸ್ವಾಮಿ ಮಕ್ಕಳ ಅಶ್ಲೀಲ ವೀಡಿಯೋ ನೋಡುವ ಚಟವಿದೆ : ಒಡನಾಡಿ ಆರೋಪ
ಮತ್ತೊಂದು ವಂದೇ ಭಾರತ್ ರೈಲು ಸಂಚಾರವನ್ನು ಘೋಷಿಸಲಾಗಿದೆ ನವೆಂಬರ್ 10ರಂದು ಇದು ಲೋಕಾರ್ಪಣೆಗೊಳ್ಳಲಿದೆ . ಈ ರೈಲು ಚೆನ್ನೈ – ಬೆಂಗಳೂರು – ಮೈಸೂರು ನಡುವೆ ಸಂಚರಿಸಲಿದೆ ರಾಜ್ಯದ ಜನತೆಗೆ ಅನುಕೂಲಕರವಾಗಲಿದೆ.
ಗ್ಯಾನವಾಪಿ ಮಸೀದಿ ಪ್ರಕರಣದಲ್ಲಿ ಕಾರ್ಬನ್ ಡೇಟ್ ಪರೀಕ್ಷೆಗೆ ಅನುಮತಿ ನೀಡಲು ವಾರಣಸಿ ಕೋರ್ಟ್ ನಿರಾಕರಿಸಿದೆ.
ಗ್ಯಾನ್ವಾಪಿ ಮಸೀದಿಯ ವಜೂಖಾನಾದಲ್ಲಿ ಪತ್ತೆಯಾಗಿರುವ ಶಿವಲಿಂಗ ಮಾದರಿಯ ನೈಜತೆ ಅರಿಯಲು ಕಾರ್ಬನ್ ಡೇಟಿಂಗ್ ಪರೀಕ್ಷೆ ನಡೆಸುವಂತೆ ಕೋರಿ ವಾರಣಸಿ ಕೋರ್ಟ್ಗೆ ನಾಲ್ವರು ಮಹಿಳೆಯರು ಅರ್ಜಿ ಸಲ್ಲಿಸಿದ್ದರು . ಈ ಅರ್ಜಿಗಳ ವಿಚಾರಣೆಯನ್ನು ನಡೆಸಿ ಇಂದು ಕೋರ್ಟ್ ತೀರ್ಪು ನೀಡಿದ್ದು, ಶಿವಲಿಂಗದ ವೈಜ್ಞಾನಿಕ ಪರೀಕ್ಷೆಗೆ ಅವಕಾಶ ಇಲ್ಲ ಎಂದು ಹೇಳಿದೆ.
ಕಾರ್ಬನ್ ಡೇಟ್ ಅಂದ್ರೆ ಪ್ರಾಚೀನ ವಸ್ತುಗಳ ಕಾಲ ನಿರ್ಧರಿಸುವ ವೈಜ್ಞಾನಿಕ ಪರೀಕ್ಷೆಯಾಗಿದೆ. ಕಾರ್ಬನ್ ಡೇಟಿಂಗ್ನಿಂದ ವಿಗ್ರಹಗಳ ಕಾಲಾವಧಿ ತಿಳಿಯುತ್ತದೆ. 50 ಸಾವಿರ ವರ್ಷಗಳ ಹಿಂದಿನ ಕಾಲಮಾನ ತಿಳಿಯಬಹುದು.
ವಸ್ತುವಿನ ಮೇಲೆ ಉಳಿದಿರುವ ಕಾರ್ಬನ್ ಆಧರಿಸಿ ಪರೀಕ್ಷೆ ಮಾಡಲಾಗುತ್ತೆ. ಗಟ್ಟಿಯಾಗಿರುವ ವಸ್ತು ಮೇಲೆ ಪ್ರಯೋಗ ಮಾಡುವ ವಿಧಾನವಾಗಿದೆ. ಮೂಳೆ, ಮರದ ಮೇಲೆ ಪ್ರಯೋಗ ಮಾಡಲಾಗುತ್ತೆ, ಕಾರ್ಬನ್ ಡೇಟಿಂಗ್ನಿಂದ 90% ರಷ್ಟು ಕಾಲಮಾನ ನಿರ್ಧಾರ ಆಗಲಿದೆ.
ಅಮೆರಿಕದ ಚಿಕಾಗೋ ವಿವಿಯಲ್ಲಿ ವಿಲ್ಲಾರ್ಡ್ ಲಿಬ್ಬಿಯಿಂದ ಅಭಿವೃದ್ಧಿ ಆಗಿದ್ದು 1940ರಿಂದಲೇ ಕಾರ್ಬನ್ ಡೇಟಿಂಗ್ ವಿಧಾನ ದೃಢಪಟ್ಟಿದೆ.
ಅಯೋಧ್ಯೆ ರಾಮಮಂದಿರ ಬಳಿಕ ಭಾರೀ ಸುದ್ದಿ ಮಾಡಿದ್ದು ಕಾಶಿಯ ಗ್ಯಾನವಾಪಿ ಮಸೀದಿ ಪ್ರಕರಣ. ಮಸೀದಿಯಲ್ಲಿ ಪತ್ತೆಯಾಗಿರುವ ಕಲ್ಲಿನಮೂರ್ತಿ ಶಿವಲಿಂಗ ಹೌದೋ, ಅಲ್ಲವೋ ಎನ್ನುವ ಬಗ್ಗೆ ಕಾರ್ಬನ್ ಡೇಟಿಂಗ್ ಪರೀಕ್ಷೆ ನಡೆಸುವಂತೆ ಹಿಂದೂ ಪರ ಅರ್ಜಿದಾರರು ಕೋರ್ಟ್ ಗೆ ಮನವಿ ಮಾಡಿಕೊಂಡಿದ್ದರು
ಬೆಂಗಳೂರು: ಸಂಚಾರ ನಿಯಮಗಳ ಉಲ್ಲಂಘನೆಗೆ ಸಂಬಂಧಪಟ್ಟಂತೆ ರಾಜ್ಯದಲ್ಲಿ ಬರೋಬ್ಬರಿ 1,700 ಕೋಟಿ ರೂ. ದಂಡ ಬಾಕಿ ಉಳಿದಿದೆ. ದಂಡವನ್ನು ವಸೂಲಿ… Read More
ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ನಿವಾಸದಲ್ಲಿದ್ದ ಹೆಚ್.ಡಿ ರೇವಣ್ಣ ರೇವಣ್ಣರನ್ನು ಅರೆಸ್ಟ್ ಮಾಡಲು ಪದ್ಮನಾಭನಗರಕ್ಕೆ ತೆರಳಿದ್ದ SIT ತಂಡ ಮಹಿಳೆ… Read More
ಹುಬ್ಬಳ್ಳಿ : ಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ , : ನಾವು ಯಾರು ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಬೆಂಬಲಿಸಿಲ್ಲ… Read More
ನಿನ್ನೆ ರಾತ್ರಿ 72ರ ವಯಸ್ಸಿನ ಎನ್.ಮುನಿಕೆಂಪಣ್ಣ ಶಕುನಿ (Shakuni) ವೇಷದಲ್ಲಿ ವೇದಿಕೆಗೆ ಬಂದು ಪಾತ್ರ ನಿರ್ವಹಿಸುತ್ತಲೇ ವೇದಿಕೆಯ ಮೇಲೆ ಕುಸಿದು… Read More
ಬಾಗಲಕೋಟೆ : ಡಿಸಿಎಂ ಡಿ.ಕೆ.ಶಿವಕುಮಾರ್ , ಬಿಜೆಪಿ ಮುಖಂಡರು ಪ್ರಜ್ವಲ್ ರೇವಣ್ಣ ಬಗ್ಗೆ ಯಾಕೆ ಮಾತನಾಡುತ್ತಿಲ್ಲ ? ಹೆಣ್ಣುಮಕ್ಕಳಿಗೆ ಸಾಂತ್ವನ… Read More
ಬೆಂಗಳೂರು : ನೆನ್ನೆ ವಿಶೇಷ ತನಿಖಾ ತಂಡ (ಎಸ್ಐಟಿ) , ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರಿಂದ ಲೈಂಗಿಕ ಶೋಷಣೆಗೆ ಒಳಗಾಗಿದ್ದಳು… Read More
This website uses cookies.
Leave a Comment