ಪ್ರೇಮಿಗಳ ದಿನಾಚರಣೆಗೆ ಫೆ 14 ರಂದು
ತಮ್ಮ ಪ್ರೇಮಿಗಳಿಗೆ ನೀಡಿ ಉಡುಗೊರೆ ನೀಡಿ, ಖುಷಿಪಡಿಸುತ್ತಾರೆ.
ವ್ಯಾಲಂಟೈನ್ಸ್ ಡೇ ದಿನ ಹುಡುಗಿಯರ ಕಾಟ ತಾಳಲಾರದ ವಿದ್ಯಾರ್ಥಿಯೊಬ್ಬ
ಈ ಪ್ರೇಮಿಗಳ ದಿನದ ಸಹವಾಸವೇ ಬೇಡ. ನನಗೆ ಐದು ದಿನ ರಜೆ ಕೊಟ್ಟುಬಿಡಿ ಸಾರ್ ಪ್ಲೀಸ್ ಎಂದು ಕಾಲೇಜು ಪ್ರಾಂಶುಪಾಲರಿಗೆ ಲೀವ್ ಲೆಟರ್ ಬರೆದಿರುವುದು ವೈರಲ್ ಆಗಿದೆ.
ಕೊಳ್ಳೇಗಾಲದ ಮಹದೇಶ್ವರ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ದ್ವಿತೀಯ ವರ್ಷದ ಬಿಕಾಂ ವಿದ್ಯಾರ್ಥಿ ಎಸ್. ಶಿವರಾಜು ವಿಕ್ಟರ್ ಎಂಬ ವಿದ್ಯಾರ್ಥಿ ಲೀವ್ ಲೆಟರ್ ಬರೆದಿದ್ದಾನೆ.
ಫೆ. 14ರ ಪ್ರೇಮಿಗಳ ದಿನದಂದು ಹುಡುಗಿಯರ ಕಾಟವನ್ನು ನಾನು ತಾಳಲಾರೆ. ಹೀಗಾಗಿ ನನಗೆ ಐದು ದಿನಗಳ ಕಾಲ ರಜೆ ಕೊಡಿ ಎಂದು ಪತ್ರದಲ್ಲಿ ಶಿವರಾಜ್ ಮನವಿ ಮಾಡಿಕೊಂಡಿದ್ದಾರೆ
ವಿದ್ಯಾರ್ಥಿ ಶಿವರಾಜ್ ಬರೆದ ಪತ್ರದ ಮೇಲೆ ಪ್ರಾಂಶುಪಾಲರ ಸೀಲ್ ಹಾಗು ಸಹಿ ಸಹ ಇರುವುದು ರಜೆಗೆ ಅನುಮತಿ ದೊರಕಿದೆ ಎನ್ನಲಾಗಿದೆ. ಆದರೆ, ಎಷ್ಟು ಸತ್ಯವೋ ಗೊತ್ತಾಗಿಲ್ಲ. ಪ್ರಚಾರ ಹುಚ್ಚಿಗೆ ಹಾಗೂ ಬಿಲ್ಡ್ ಅಫ್ ಗೂ ಈ ರೀತಿಯ ಪತ್ರ ಸೃಷ್ಟಿ ಮಾಡಿರುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.
ಆದರೂ ಪ್ರಾಂಶುಪಾಲರಿಗೆ ಬರೆದ ಪತ್ರ ಮಾತ್ರ ಸಿಕ್ಕಾಪಟ್ಟೆ ವೈರಲ್ ಆಗಿದೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು