ಮಾಜಿ ಪ್ರಧಾನಿ ವಾಜಪೇಯಿಗೆ ಸಂಜೆಹೊತ್ತು ಎರಡು ಗ್ಲಾಸ್ ವಿಸ್ಕಿ ಬೇಕಾಗಿತ್ತಂತೆ. ಹಾಗಾಂತ ಎಲ್ಲ ಬಾರ್‌ಗಳಿಗೆ ವಾಜಪೇಯಿ ಬಾರ್ ಅಂತ ಹಾಕ್ತಿರಾ ಎಂದು ಕಾಂಗ್ರೆಸ್ ಶಾಸಕ ಪಿಯಾಂಕ್ ಖರ್ಗೆ ಬಿಜೆಪಿಯವರನ್ನು ಪ್ರಶ್ನಿಸಿದ್ದಾರೆ.
ಬಿಜೆಪಿ ರಾಷ್ಟೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಇತ್ತೀಚೆಗೆ, ಕಾಂಗ್ರೆಸ್‌ನವರು ನೆಹರು ಹುಕ್ಕಾ ಬಾರ್ ತೆರೆಯಲಿ ಎಂದು ನೀಡಿದ್ದ ಹೇಳಿಕೆ ಬಗ್ಗೆ ಶಾಸಕರು ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ತಮ್ಮ ವಾಗ್ದಾಳಿ ನಡೆಸಿದರು.
ತಾವು ಓದಿದ ಒಂದು ಲೇಖನದಲ್ಲಿ ಈ ವಿಷಯ ಇದ್ದುದನ್ನು ಪ್ರಿಯಾಂಕ್ ಪ್ರಸ್ತಾಪಿಸಿ, ಸಿಗರೇಟ್, ಮದ್ಯಪಾನ ಮಾಡುವುದು ತಪ್ಪಲ್ಲ, ಹಾಗಂತ ನೀವು(ಬಿಜೆಪಿ) ಎಲ್ಲ ಬಾರ್‌ಗಳಿಗೂ ವಾಜಪೇಯಿ ಹೆಸರು ಇಡುತ್ತೀರಾ ಎಂದು ಕುಹಕದಿಂದ ಕೇಳಿದರು.
ವಾಜಪೇಯಿ ಮಾಂಸಪ್ರಿಯರು. ಮಾಂಸ ಸೇವಿಸುವುದರಿಂದ ಗೌರವ ಕಡಿಮೆಯಾಗುತ್ತಾ? ಹಾಗಾದ್ರೆ ಎಲ್ಲ ಕಸಾಯಿಖಾನೆಗಳಿಗೆ ವಾಜಪೇಯಿ ಹೆಸರು ಇಡಲು ಆಗುತ್ತಾ ಎಂದಿದ್ದಾರೆ.
https://twitter.com/priyankkharge?s=11
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು