ಮಂಡ್ಯ : ಜಿಲ್ಲೆಯ ಎಲ್ಲಾ ತಾಲ್ಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಿದ್ದರೂ , ಕಡಿಮೆ ಅನುದಾನದಲ್ಲಿ ಈ ಬಾರಿ ಮಾಚ್೯ 16 ರಿಂದ 28 ರವರೆಗೆ ವೈರಮುಡಿ ಉತ್ಸವದ ವಿವಿಧ ಪೂಜಾ ಕೈಂಕರ್ಯಗಳನ್ನು ವ್ಯವಸ್ಥಿತ ಹಾಗೂ ಅರ್ಥಪೂರ್ಣವಾಗಿ ಆಚರಣೆ ಮಾಡಲು ಸಕಲ ಸಿದ್ಧತೆ ಮಾಡಿಜೊಳ್ಳಲಾಗಿದೆ ಎಂದು ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಶುಕ್ರವಾರ ತಿಳಿಸಿದರು.
ಮೇಲುಕೋಟೆ ಪ್ರವಾಸಿ ಮಂದಿರದಲ್ಲಿ ಪೂರ್ವ ಸಿದ್ಧತಾ ಸಭೆ ನಡೆಸಿ ಮಾತನಾಡಿದರು. ಮಾಚ್೯ 21 ರಂದು ವೈರಮುಡಿ ಉತ್ಸವ ನಡೆಯಲಿದೆ, 2 ಲಕ್ಷಕ್ಕೂ ಹೆಚ್ಚು ಭಕ್ತಾಧಿಗಳು ಭಾಗವಹಿಸಲಿದ್ದಾರೆ. ಭಕ್ತಾಧಿಗಳಿಗೆ ಕಾರ್ಯಕ್ರಮ ದ ನಿಖರ ಮಾಹಿತಿ ದೊರಕಬೇಕು ಎಂದರು.
ಭಕ್ತಾಧಿಗಳಿಗೆ ಕುಡಿಯುವ ನೀರು, ಶೌಚಾಲಯ, ವಾಹನ ನಿಲುಗಡೆ, ಬ್ಯಾರಿಕೇಡಿಂಗ್, ವಿದ್ಯುತ್ ದೀಪಗಳು,ಕಲ್ಯಾಣಿಗಳ ಸ್ವಚ್ಛತೆ, ತುರ್ತು ಆರೋಗ್ಯ ಸೇವೆ, ಪೊಲೀಸ್ ಬಂದೋಬಸ್ತ ವ್ಯವಸ್ಥೆಯಾಗಬೇಕು ಎಂದರು.
ಮೇಲುಕೋಟೆಗೆ ಸಂಪರ್ಕ ರಸ್ತೆಗಳ ದುರಸ್ತಿ ಯಾಗಬೇಕು, ಮಂಡ್ಯ ಹಾಗೂ ವಿವಿಧ ಜಿಲ್ಲೆಗಳಿಂದ ಬರುವ ಭಕ್ತಾದಿಗಳಿಗೆ ಅನುಕೂಲವಾಗುವಂತೆ ಹೆಚ್ಚಿನ ಕೆ.ಎಸ್.ಆರ್.ಟಿ.ಸಿ ಬಸ್ ವ್ಯವಸ್ಥೆಯಾಗಬೇಕು. ಬೆಟ್ಟದ ಕೆಳಭಾಗದಿಂದ ದೇವಸ್ಥಾನದ ವರೆಗೆ ಭಕ್ತಾಧಿಗಳಿಗೆ ಉಚಿತ ಬಸ್ ಅಥವಾ ಮಿನಿ ಬಸ್ ವ್ಯವಸ್ಥೆಯಾಗಬೇಕು ಎಂದರು.
ವೈರಮುಡಿಯ ಬ್ರಹ್ಮೋತ್ಸವ ನಡೆಯುವ ದೇವಸ್ಥಾನದ ಸುತ್ತ ವಾಹನ ನಿಲುಗಡೆಯಾಗದಂತೆ ಎಚ್ಚರಿಕೆ ವಹಿಸಿ. ದೇವಸ್ಥಾನದ ಸುತ್ತ ಶಾಶ್ವತ ಕಸದ ತೊಟ್ಟಿಗಳ ವ್ಯವಸ್ಥೆ ಮಾಡಿ ಎಂದರು.
ಅಪರ ಜಿಲ್ಲಾಧಿಕಾರಿ ಡಾ: ಹೆಚ್ ಎಲ್ ನಾಗರಾಜು ಅವರು ಮಾತನಾಡಿ ಪ್ರತಿ ವರ್ಷ ವೈರಮುಡಿ ಉತ್ಸವ ನಡೆಯಲಿದೆ. ಇಲ್ಲಿ ತಾತ್ಕಾಲಿಕ ಶೌಚಾಲಯ, ಸಿ.ಸಿ.ಟಿ.ವಿ ವ್ಯವಸ್ಥೆಯನ್ನು ಶಾಶ್ವತವಾಗಿ ಮಾಡುವುದರಿಂದ ಹಣ ಪ್ರತಿ ಬಾರಿ ವೆಚ್ಚವಾಗುವುದು ತಪ್ಪುತ್ತದೆ ಎಂದರು.
ದಾನಿಗಳು ಕುಡಿಯುವ ನೀರಿನ ವ್ಯವಸ್ಥೆ ಮಾಡಿ
ಮಾಚ್೯ 21 ರಂದು ಶ್ರೀ ಚಲುವರಾಯಸ್ವಾಮಿ ವೈರಮುಡಿ ಆಭರಣಗಳನ್ನು ಬೆಳಿಗ್ಗೆ ಜಿಲ್ಲಾ ಖಜಾನೆಯಿಂದ ದೇವಸ್ಥಾನದವರಿಗೆ ಹಸ್ತಾಂತರ ಮಾಡಲಾಗುವುದು. ವೈರಮುಡಿ ತೆಗೆದುಕೊಂಡು ಹೋಗುವ ಲಕ್ಷ್ಮಿ ಜರ್ನಾಧನ ದೇವಸ್ಥಾನ, ಕಿರಂಗೂರು, ದಸಕುಪ್ಪೆ, ಜಕ್ಕನಹಳ್ಳಿ ಕ್ರಾಸ್ ಮುಂತಾದ ಸ್ಥಳಗಳಲ್ಲಿ ಪೂಜೆ ಸಲ್ಲಿಸಲಾಗುವುದು. ಬೇಸಿಗೆಯ ಬಿಸಿಲಿನ ತಾಪ ಹೆಚ್ಚಿದ್ದು, ದಾನಿಗಳು ಪೂಜೆ ಸಲ್ಲಿಸುವ ಸ್ಥಳಗಳಲ್ಲಿ ಕುಡಿಯುವ ನೀರು, ಮಜ್ಜಿಗೆ ಹಾಗೂ ಪ್ರಸದದ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದರು.
ದಾಸೋಹ ನಿಧಿ ಮೇಲುಕೋಟೆ ದೇವಸ್ಥಾನಕ್ಕೆ ಆಗಮಿಸುವ ಭಕ್ತಾಧಿಗಳಿಗೆ ದಾಸೋಹದ ವ್ಯವಸ್ಥೆ ಮಾಡಲು ದಾನಿಗಳಿಂದ ಹಣ ಸಂಗ್ರಹಿಸಲು ದಸೋಹ ನಿಧಿ ಪ್ರಾರಂಭಿಸಲಾಗಿದೆ. ದಾನಿಗಳು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗಳ ಕಚೇರಿಗೆ ಹಣ ಜಮೆ ಮಾಡಿ ರಶೀದಿ ಪಡೆದುಕೊಳ್ಳಿ ಎಂದರು.
ಮೇಲುಕೋಟೆ ದೇವಸ್ಥಾನದ ಸುತ್ತ 500 ಮೀಟರ್ ವ್ಯಾಪ್ತಿಯಲ್ಲಿ ಬರುವ ಖಾಲಿ ನಿವೇಶನದ ಮಾಲೀಕರು ತಮ್ಮ ನಿವೇಶನವನ್ನು ಸ್ವಚ್ಛವಾಗಿಟ್ಟಿಕೊಳ್ಳಬೇಕು. ಇಲ್ಲಾವದಲ್ಲಿ ನೊಟೀಸ್ ಜಾರಿ ಮಾಡಿ ಗ್ರಾಮ ಪಂಚಾಯಿತಿಯಿಂದ ಸ್ವಚ್ಛತೆ ಮಾಡಿಸಿ ಸ್ವಚ್ಛತೆಯ ಶುಲ್ಕ ವಸೂಲು ಮಾಡಿ ಎಂದರು.ರಾಮೇಶ್ವರಂ ಕೆಫೆಯಲ್ಲಿ ನಿಗೂಢ ಸ್ಫೋಟ : ಮೂವರು ದುಷ್ಕೃತ್ಯವೆಸಗಿರುವ ಶಂಕೆ
ಸಭೆಯಲ್ಲಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ್. ಡಿ ಒ ಎಸ್ ಪಿ ಮುರುಳಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಸೋಮಶೇಖರ್, ಪಾಂಡವಪುರ ತಹಶೀಲ್ದಾರ್ ಶ್ರೇಯಸ್, ಮುಜರಾಯಿ ತಹಶೀಲ್ದಾರ್ ತಮ್ಮೇಗೌಡ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
More Stories
ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ