ವ್ಯಾಕ್ಸಿನೇಷನ್‌ ಪಡೆದವರು ಕೊರೋನಾ ಎದುರಿಸಲು ಸಾಧ್ಯ – ಅಂಕಿ ಅಂಶಗಳೇ ಸಾಕ್ಷಿ

Team Newsnap
1 Min Read

ಭಾರತದಲ್ಲಿ ಕಳೆದ ಎರಡು ತಿಂಗಳಿನಿಂದ ಕೊರೋನಾಗೆ ತಡೆಗಾಗಿ ಕೊವ್ಯಾಕ್ಸಿನ್ ಹಾಗೂ‌ ಕೋವಿಶೀಲ್ಡ್ ವ್ಯಾಕ್ಸಿನೇಷನ್‌ ಪಡೆದುಕೊಂಡ ನಂತರ ಮತ್ತೆ ಕೊರೋನಾ ಪಾಸಿಟಿವ್ ಬಂದಿರುವ ಸಂಖ್ಯೆ ತೀರಾ ಕಡಮೆ ಪ್ರಮಾಣದಲ್ಲಿ ಇದೆ ಅಂಕಿ ಅಂಶಗಳ ಬೆಳಕಿಗೆ ಬಂದಿದೆ.

ಕೊವ್ಯಾಕ್ಸಿನ್ಸ್ ವ್ಯಾಕ್ಸಿನೇಷನ್‌ ಮೊದಲ ಡೋಸ್ ಪಡೆದ 93,56, 436 ಜನರಲ್ಲಿ ಕೇವಲ 4208 (0.04%) ಜನರಿಗೆ ಮತ್ತೆ ಪಾಸಿಟಿವ್ ಬಂದಿದೆ.

ಎರಡನೇ ಡೋಸ್ ಕೊವ್ಯಾಕ್ಸಿನ್ ವ್ಯಾಕ್ಸಿನೇಷನ್‌ ಪಡೆದ 17,37, 178 ಜನರಲ್ಲಿ 695 (0.04%)ಜನರಿಗೆ ಮಾತ್ರ ಪುನಃ ಕೊರೋನಾ ಪಾಸಿಟಿವ್ ಬಂದಿದೆ.

14e9ea58 930e 427d 9571 76b21e8257a3

ಅದೇ ರೀತಿ ಮೊದಲ ಡೋಸ್ ಕೋವಿಶೀಲ್ಡ್ ವ್ಯಾಕ್ಸಿನೇಷನ್‌ ಪಡೆದ 10, 03, 02, 745 ಜನರ ಪೈಕಿ 17, 145 (0.02%) ಜನರಿಗೆ ಮಾತ್ರ ಕೊರೋನಾ ಪಾಸಿಟಿವ್ ಬಂದಿದೆ.

ಎರಡನೇ ಡೋಸ್ ಕೋವಿಶೀಲ್ಡ್ ವ್ಯಾಕ್ಸಿನೇಷನ್‌ ಪಡೆದ 1, 57, 32, 754 ಜನರಲ್ಲಿ 5014 (0.03%)ಜನರಿಗೆ ಮಾತ್ರ ಪುನಃ ಕೊರೋನಾ ಪಾಸಿಟಿವ್ ಬಂದಿದೆ.

ಈ ಅಂಕಿ ಅಂಶಗಳನ್ನು ಗಮನಿಸಿದರೆ ವ್ಯಾಕ್ಸಿನೇಷನ್‌ ಪಡೆದವರಿಗೆ ಯೂಮಿನಿಟಿ ಪವರ್ ಹೆಚ್ಚಾಗಿ ಕೊರೋನಾ ಎದುರಿಸುವ ಸಾಮರ್ಥ್ಯ ಹೆಚ್ಚಾಗುತ್ತದೆ ಎನ್ನುವುದು ಗೊತ್ತಾಗಿದೆ.

Share This Article
Leave a comment