December 23, 2024

Newsnap Kannada

The World at your finger tips!

udal basya

ಉ . ಕ ನಾಯಕನೊಬ್ಬ ಸಿಎಂ ಖುಚಿ೯ ಕನಸು ಕಾಣುತ್ತಿದ್ದಾರೆ – ನಿರಾಣಿಗೆ ಕುಟುಕಿದ ಯತ್ನಾಳ್

Spread the love

ಜನವರಿ ಎರಡನೇ ವಾರ ಅಥವಾ ಮೂರನೇ ವಾರದಲ್ಲಿ ಸಿಎಂ ಆಗ್ತೀನಿ ಅಂತ ಯಾರ್ಯಾರೋ ಮುಖ್ಯಮಂತ್ರಿಗಳಾಗಳು ಹಗಲು ಕನಸು ಕಾಣುತ್ತಿದ್ದಾರೆ ಶಾಸಕ ಬಸವ ರಾಜ್ ಪಾಟೀಲ್ ಯತ್ನಾಳ್ ಕುಟುಕಿದರು

ಬೆಳಗಾವಿಯ ಸುವರ್ಣಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಯತ್ನಾಳ್​​
ಉತ್ತರ ಕರ್ನಾಟಕದ ನಾಯಕರೇ ಹೆಚ್ಚು ಕನಸು ಕಾಣುತ್ತಿದ್ದಾರೆ. ಹಣ ಕೊಟ್ಟಿದ್ದೇನೆ ಬೊಮ್ಮಯಿ ಕೇಂದ್ರ ಮಂತ್ರಿ ಮಾಡುತ್ತೇನೆ ಅಂತಾ ಹೇಳಿಕೆ ಕೊಡುತ್ತಾರೆ. ಇದ್ಯಾವುದು ನಡೆಯೋದಿಲ್ಲ ಬಿಡಿ. ಅಯೋಗ್ಯನನ್ನು, ಹಣ ಕೊಡೋರನ್ನು ಬಿಜೆಪಿ ಹೈಕಮಾಂಡ್ ಒಪ್ಪುವುದಿಲ್ಲ ಎಂದರು.

ಈಶ್ವರಪ್ಪ ಜೊತೆಗೆ ಸಂಧಾನ ವಿಚಾರವಾಗಿ ಮಾತನಾಡಿದ ಅವರು, ಸಂಧಾನ ಪ್ರಯತ್ನ ನಡೆದಿದೆ. ಹಲವರು ಸಂಧಾನ ಮಾಡುವ ಪ್ರಯತ್ನವನ್ನು ಮಾಡುತ್ತಲೇ ಇರುತ್ತಾರೆ. ಆದರೆ ಯಾವುದಕ್ಕೂ ನಾನು ಒಪ್ಪೋದಿಲ್ಲ. ಅಯೋಗ್ಯನ ಜೊತೆಗೆ ರಾಜೀ ಅಗುವುದಿಲ್ಲ. ನನಗೆ ಯಾವುದೇ ಡಿಸಿಎಂ, ಸಚಿವ ಸ್ಥಾನ ಯಾವುದೇ ಬೇಡ. ಹೈಕಮಾಂಡ್ ಹೇಳಿದ ಹಾಗೆ ಕೇಳುತ್ತೇನೆ. ನಾನೇ ಮುಖ್ಯಮಂತ್ರಿಯಾಗ್ತೇನೆ ಎಂದು ಉತ್ತರ ಕರ್ನಾಟಕದ ನಾಯಕ ಹಗಲು ಗನಸು ಕಾಣ್ತಿದ್ದಾರೆ ಎಂದು ಪರೋಕ್ಷವಾಗಿ ಮುರುಗೇಶ್ ನಿರಾಣಿ ಹೆಸರು ಪ್ರಸ್ತಾಪಿಸದೆ ವಾಗ್ದಾಳಿ ನಡೆಸಿದರು.

Copyright © All rights reserved Newsnap | Newsever by AF themes.
error: Content is protected !!