February 22, 2026

Newsnap Kannada

The World at your finger tips!

ut khadar

ದಾವಣಗೆರೆ ಸಮೀಪ ಯು ಟಿ ಖಾದರ್ ಕಾರು ಅಪಘಾತ – ಚಾಲಕನಿಗೆ ಗಂಭೀರ ಗಾಯ – ಖಾದರ್ ಪಾರು

Spread the love

ಬೆಂಗಳೂರಿಗೆ ತರಳುತ್ತಿದ್ದ ಮಾಜಿ ಸಚಿವ ಯು ಟಿ ಖಾದರ್ ಕಾರ್ ದಾವಣಗೆರೆ ಸಮೀಪದ ಆನಗೋಡು ಬಳಿ ಅಪಘಾತ ವಾಗಿದೆ.

ಈ ಘಟನೆಯಲ್ಲಿ ಕಾರು ಚಾಲಕನಿಗೆ ಗಂಭೀರವಾಗಿ ಗಾಯಗಳಾಗಿವೆ. ಕಾರಿನ ಮುಂದಿನ ಭಾಗ ಸಂಪೂರ್ಣ ಜಖಂ ಆಗಿದೆ.
ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದ ಖಾದರ್ ಗೆ ಯಾವುದೇ ಗಾಯಗಳಾಗಿಲ್ಲ. ಅವರು ಮತ್ತೊಂದು ಕಾರಿನಲ್ಲಿ ಪ್ರಯಾಣ ಮಾಡಿದರು.

ಆನುಗೋಡು ಬಳಿ ಖಾದರ್ ಕಾರಿನ ಚಾಲಕ ಕಂಟೈನರ್ ಒಂದಕ್ಕೆ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಈ ಘಟನೆ ಸಂಭವಿಸಿದೆ. ದಾವಣಗೆರೆ ಜಿಲ್ಲಾ ಎಸ್ಪಿ
ಹನುಮಂತರಾಯ ಸ್ಥಳಕ್ಕೆ ಭೇಟಿ ನೀಡಿದ್ದರು. ದಾವಣಗೆರೆ ಗ್ರಾಮಾಂತರ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

error: Content is protected !!