ಮೇಲ್ನೋಟಕ್ಕೆ ಟ್ರಂಪ್ ಚೀನಾದ ವಿರುದ್ಧ ಇದ್ದಾರೆ. ಆದರೆ ವಾಸ್ತವವಾಗಿ ಟ್ರಂಪ್ ಚೀನಾ ಪರ ಇದ್ದಾರೆ. ಚೀನಾದಲ್ಲಿ ಅವರಿಗೆ ಬ್ಯಾಂಕ್ ಖಾತೆಯಿದೆ. ಕಳ್ಳತನದಿಂದ ಅಲ್ಲಿ ಖಾತೆ ತೆರೆದಿದ್ದು ಏಕೆ? ಎಂದು ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಆರೋಪಿಸಿದ್ದಾರೆ.
ಅಮೇರಿಕ ಅಧ್ಯಕ್ಷೀಯ ಚುಣಾವಣೆಯ ಅಭ್ಯರ್ಥಿ ಜೋ ಬಿಡೆನ್ ಪರ ಪ್ರಚಾರ ಮಾಡುತ್ತಿರುವ ಒಬಾಮಾ ಅಮೆರಿಕದ ಫಿಲಿಡೆಲ್ಫಿಯಾದಲ್ಲಿ ಬಿಡೆನ್ ಪರವಾಗಿ ನಡೆದ ಕ್ಯಾಂಪೇನ್ ವೇಳೆ ಒಬಾಮಾ ಟ್ರಂಪ್ ವಿರುದ್ಧ ಈ ಅರೋಪ ಹೊರಿಸಿದ್ದಾರೆ.
‘ಅಮೇರಿಕಾದ ಅಧ್ಯಕ್ಷರಾಗಲು ಕೆಲವೊಂದು ಯೋಗ್ಯತೆಗಳು ಅವಶ್ಯಕ. ಆದರೆ ಟ್ರಂಪ್‌ಗೆ ಆ ಯೋಗ್ಯತೆಗಳಿಲ್ಲ. ಅಮೇರಿಕಾದ ಘನತೆಯನ್ನು ಹಾಳು ಮಾಡುತ್ತಿದ್ದಾರೆ. ಟ್ರಂಪ್ ಸಾರ್ವಜನಿಕ ಜೀವನದಲ್ಲಿ ವರ್ತಿಸುವ ರೀತಿ ನಾಚಿಕೆಗೇಡಿನ ಸಂಗತಿ’ ಎಂದು ಟ್ರಂಪ್ ವಿರುದ್ಧ ಕೆಂಡ ಕಾರಿದರು.
ಟ್ರಂಪ್ ಅವರ ಅನೇಕ ನಡೆಗಳು ವಿರೋಧ ಪಕ್ಷಗಳ ಕಣ್ಣು ಕೆಕ್ಕರಿಸುವಂತೆ ಮಾಡುತ್ತಿವೆ. ಈ ಮೊದಲು ಒಬಾಮಾ ಅಧ್ಯಕ್ಷರಾಗಿದ್ದಾಗ ‘ಒಬಾಮಾ ಕೇರ್’ ಎಂಬ ಆರೋಗ್ಯ ಸಂಸ್ಥೆಯನ್ನು ತೆರೆದಿದ್ದರು. ಅಮೆರಿಕದ ಬಡವರಿಗೆ ಕೈಗೆಟುಕುವ ದರದಲ್ಲಿ ಈ ಯೋಜನೆ ಮಾಡಲಾಗಿತ್ತು. ಆದರೆ ಟ್ರಂಪ್ ಇದನ್ನು ನಿಲ್ಲಿಸಿಬಿಟ್ಟಿದ್ದರು. ಕೊರೊನಾ’ ಸೋಂಕಿನಿಂದ ಅಮೆರಿಕದಲ್ಲಿ ಲಕ್ಷಾಂತರ ಜನರು ಮೃತಪಟ್ಟಿರುವುದು ಟ್ರಂಪ್ ಕೈಗೊಂಡ ಈ ನಿರ್ಧಾರದಿಂದ ಎಂಬ ಆರೋಪವಿದೆ. ‘ಒಬಾಮಾ ಕೇರ್’ಗೆ ಬ್ರೇಕ್ ಹಾಕಿದ್ದರಿಂದ ಬಡವರಿಗೆ ಚಿಕಿತ್ಸೆ ಸಿಗಲಿಲ್ಲ, ಹೀಗಾಗಿಯೇ ಅಮೆರಿಕದಲ್ಲಿ ಅತಿಹೆಚ್ಚು ಜನ ಕೊರೊನಾಗೆ ಬಲಿಯಾದರು ಎಂಬುದು ವಿಪಕ್ಷ ನಾಯಕರ ಆರೋಪಿಸುತ್ತಿದ್ದಾರೆ.
ಕೆಲ ದಿನಗಳ ಹಿಂದೆ ನಡೆದ ಖಾಸಗಿ ಸಂವಾದ ಕಾರ್ಯಕ್ರಮದಲ್ಲಿಯೂ ಒಬಾಮಾ ಟ್ರಂಪ್ ವಿರುದ್ಧ ಒಂದು ಗಂಭೀರ ಆರೋಪ ಮಾಡಿದ್ದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಮೆರಿಕ ಹೆಸರು ಕೆಡಲು ಟ್ರಂಪ್ ಕಾರಣ ಎಂದಿದ್ದರು. ಈಗ ಚುಣಾವಣಾ ಪ್ರಚಾರದಲ್ಲಿ ಅದೇ ರೀತಿಯ ಹೇಳಿಕೆಗಳನ್ನು ಒಬಾಮಾ ನೀಡುತ್ತಿದ್ದಾರೆ.
More Stories
ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಆಯೋಧ್ಯೆ ರಾಮಮಂದಿರಕ್ಕೆ ಸ್ಫೋಟದ ಬೆದರಿಕೆ: ಆರ್ಡಿಎಕ್ಸ್ ಬಳಸಿ ಧ್ವಂಸಗೊಳಿಸುವ ಎಚ್ಚರಿಕೆ
ವಿಧಾನಸಭೆ ಉಪಚುನಾವಣೆ: ನ. 13 ರಂದು ರಾಜ್ಯ ಸರ್ಕಾರದಿಂದ ವೇತನ ಸಹಿತ ರಜೆ ಘೋಷಣೆ