ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಸಂಸದ ತೇಜಸ್ವಿ ಸೂರ್ಯ, “ನನ್ನ ಪ್ರೀತಿಯ ಬೆಂಗಳೂರು, ಯುಎಸ್ ಕಾನ್ಸುಲೇಟ್ ಕೊನೆಗೂ ಅಧಿಕೃತವಾಗಿ ಜನವರಿ 17ರಂದು ಕಾರ್ಯಾರಂಭಗೊಳ್ಳುತ್ತಿದೆ” ಎಂದು ವಿಡಿಯೋ ಮೂಲಕ ತಿಳಿಸಿದ್ದಾರೆ.
ಇಷ್ಟು ದೊಡ್ಡ ಸಾಧನೆಗೆ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹಾಗೂ ವಿದೇಶಾಂಗ ಸಚಿವ ಡಾ. ಎಸ್ ಜೈಶಂಕರ್ ಅವರ ಮಾರ್ಗದರ್ಶನವೇ ಕಾರಣ ಎಂದು ತಿಳಿಸಿದ ತೇಜಸ್ವಿ ಸೂರ್ಯ, ಅವರಿಗೆ ಧನ್ಯವಾದಗಳನ್ನೂ ಅರ್ಪಿಸಿದ್ದಾರೆ.
ಬೆಂಗಳೂರಿನಲ್ಲಿ ಯುಎಸ್ ಕಾನ್ಸುಲೇಟ್ ಆರಂಭವಾದ ಸಂತೋಷವನ್ನು ತಿಳಿಸಲು, ತೇಜಸ್ವಿ ಸೂರ್ಯ ನವದೆಹಲಿಗೆ ತೆರಳಿ ವಿದೇಶಾಂಗ ಸಚಿವ ಡಾ. ಜೈಶಂಕರ್ ಅವರನ್ನು ಭೇಟಿ ಮಾಡಿ ಮೈಸೂರು ಪಾಕವನ್ನು ನೀಡಿ ಕೃತಜ್ಞತೆ ಸಲ್ಲಿಸಿದ್ದಾರೆ.
ಈ ಕುರಿತು ಮಾತನಾಡಿದ ಡಾ. ಜೈಶಂಕರ್ ಅವರು, “ಬೆಂಗಳೂರಿಗೆ ನನ್ನ ವಿಶೇಷ ಪ್ರೀತಿ ಇದೆ, ಅಲ್ಲಿನ ಜನರೊಂದಿಗೆ ನನಗೆ ಅನನ್ಯವಾದ ಸಂಬಂಧ ಇದೆ. ಯುಎಸ್ ಕಾನ್ಸುಲೇಟ್ ಕಚೇರಿ ಉದ್ಘಾಟನೆಗೆ ಭಾಗವಹಿಸುವೆನೆಂಬ ಭರವಸೆ ನೀಡಿದ್ದೇನೆ” ಎಂದು ತಿಳಿಸಿದ್ದಾರೆ.
ಮೂಲತಃ ಖಾಸಗಿ ಹೋಟೆಲ್‌ವೊಂದರಲ್ಲಿ ತಾತ್ಕಾಲಿಕವಾಗಿ ಈ ಕಚೇರಿ ಕಾರ್ಯನಿರ್ವಹಿಸಲಿದೆ. ಇದರಿಂದ ಕರ್ನಾಟಕದ ಜನರು ವೀಸಾ ಸಂದರ್ಶನ ಅಥವಾ ಅನುಮೋದನೆಗಳಿಗಾಗಿ ಬೇರೆ ರಾಜ್ಯಗಳಿಗೆ ತೆರಳಬೇಕಾದ ಅಗತ್ಯವಿಲ್ಲ ಎಂದು ತೇಜಸ್ವಿ ಸೂರ್ಯ ತಿಳಿಸಿದ್ದಾರೆ.ಇದನ್ನು ಓದಿ –ವಿಚಿತ್ರ ಕಾಯಿಲೆಗೆ 15 ಜನರು ಬಲಿಪಡೆದ ಅನುಮಾನಾಸ್ಪದ ಘಟನೆ
ಈ ಕಚೇರಿಯ ಆರಂಭದ ಮೂಲಕ ಕರ್ನಾಟಕದ ಜನರ ಯಾತನೆ ಕಡಿಮೆಯಾಗಲಿದೆ ಮತ್ತು ಇದು ಅಮೆರಿಕಾ-ಭಾರತ ಸಂಬಂಧವನ್ನು ಇನ್ನಷ್ಟು ಬಲಪಡಿಸಲಿದೆ.
More Stories
ಮೈನಿಂಗ್ ಉದ್ಯಮಿಗಳ ಮನೆ ಹಾಗೂ ಕಚೇರಿ ಮೇಲೆ IT ದಾಳಿ
ದೇಶದ ಮೊದಲ ಸೇನಾಮುಖ್ಯಸ್ಥ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ | Field Marshal KM Cariappa Birth Anniversary
ಮೈಸೂರು: ಹೃದಯಾಘಾತದಿಂದ SSLC ವಿದ್ಯಾರ್ಥಿನಿ ಮೃತ್ಯು