ಅರಬ್ಬೀ ಸಮುದ್ರದಲ್ಲಿ ಭಾರತ, ಅಮೇರಿಕಾ, ಜಪಾನ್ ಹಾಗೂ ಆಸ್ಟ್ರೇಲಿಯಾ ದೇಶಗಳ ಸೇನೆಯ ನಡುವೆ ಮಲಬಾರ್‌ನಲ್ಲಿ ಸಮರಾಭ್ಯಾಸಕ್ಕೆ ಮೊದಲು ಅಮೇರಿಕಾ-ಜಪಾನ್‌ನ ಭೂ, ವಾಯು ಹಾಗೂ ಜಲ ಸೇನೆಗಳು ಜಂಟಿಯಾಗಿ ಮಿಲಿಟರಿ ಕವಾಯತು ಆರಂಭಿಸಿರುವುದು ಚೀನಾಗೆ ಮತ್ತೊಂದು ತಲೆನೋವು ಎದುರಾದಂತಾಗಿದೆ.
ಭಾರತ, ಅಮೇರಿಕಾ, ಜಪಾನ್ ಹಾಗೂ ಆಸ್ಟ್ರೇಲಿಯಾ ಸೇನೆಗಳ ಸಮಾರಾಭ್ಯಾಸದ ವಿಷಯ ಕೇಳಿಯೇ ನಡುಗಿದ್ದ ಚೀನಾ ಇದೀಗ ತನ್ನ ಪಕ್ಕದಲ್ಲೇ ತನಗೆ ದಿಟ್ಟ ಎಚ್ಚರಿಕೆ ನೀಡುತ್ತಿರುವ ಜಪಾನ್ ನಡೆ ಚೀನಾವನ್ನು ದಿಗಿಲುಗೊಳಿಸಿದೆ.
ಯೋಶಿಹಿದೆ ಸುಗಾ ಅವರು ಜಪಾನ್ ಪ್ರಧಾನಿಯಾದ ನಂತರ ಹಮ್ಮಿಕೊಂಡಿರುವ ಮೊದಲ ಮಿಲಿಟರಿ ಕವಾಯತಾಗಿದ್ದು, ದಕ್ಷಿಣ ಚೀನಾ ಸಮುದ್ರದಲ್ಲಿ ಹೆಚ್ಚುತ್ತಿರುವ ಚೀನಾದ ಸೇನೆಯ ಚಟುವಟಿಕೆಗಳಿಗೆ ಜಪಾನ್ ನೀಡುತ್ತಿರುವ ಉತ್ತರ ಇದು ಎಂದು ಹೇಳಲಾಗುತ್ತಿದೆ.
ನವೆಂಬರ್‌ನಲ್ಲಿ ಮಲಬಾರ್ ಸಮರಾಭ್ಯಾಸ ನಡೆಯಲಿದೆ. ಅಮೇರಿಕಾ-ಜಪಾನ್ ನೌಕಾ ಸೇನೆಯ ಪರಮಾಣು ಚಾಲಿತ ಯುದ್ಧ ಹಡಗುಗಳು, ಆಧುನಿಕ ಯುದ್ಧ ಹಡಗುಗಳು ಸಮಾರಾಭ್ಯಾಸದಲ್ಲಿ ಭಾಗವಹಿಸಲಿವೆ.
More Stories
ಚನ್ನಪಟ್ಟಣದಲ್ಲಿ ಸಿ ಪಿ ಯೋಗೇಶ್ವರ್ ಗೆ ಭರ್ಜರಿ ಗೆಲುವು
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ
ನಕ್ಸಲ್ ನಾಯಕ ವಿಕ್ರಂ ಗೌಡ ಎನ್ಕೌಂಟರ್: ಗೃಹಸಚಿವ ಪರಮೇಶ್ವರ್ ದೃಢೀಕರಣ