December 27, 2024

Newsnap Kannada

The World at your finger tips!

former car

ರೈತರ ಮೇಲೆ ಕೇಂದ್ರ ಸಚಿವರ ಪುತ್ರ ಕಾರು ಹತ್ತಿಸಿದ ಘಟನೆ ‌: 8 ಮಂದಿ ಸಾವು

Spread the love

ಉತ್ತರ ಪ್ರದೇಶದ ಲೆಖಿಂಪುರ್ ಖೆರಿ ಬಳಿ ರೈತರ ಮೇಲೆ ಕಾರ್ ಕೇಂದ್ರ ಸಚಿವ ಅಜಯ್ ಮಿಶ್ರಾ ಪುತ್ರ ಕಾರ್ ಹರಿಸಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಸಾವನ್ನಪ್ಪಿದವರ ಸಂಖ್ಯೆ 8 ಕ್ಕೆ ಏರಿಕೆಯಾಗಿದೆ.

ಉತ್ತರ ಪ್ರದೇಶ ಉಪಮುಖ್ಯ ಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಕಾರ್ಯ ಕ್ರಮ ಒಂದಕ್ಕೆ ಹೋಗಬೇಕಿತ್ತು.‌. ಅವರ ಹೆಲಿಕಾಪ್ಟರ್ ಮಹಾರಾಜ ಅಗ್ರಸೇನ್ ಸ್ಪೋರ್ಟ್ ಗ್ರೌಂಡ್​ನಲ್ಲಿ ಇಳಿಯಬೇಕಿತ್ತು. ಸಾವಿರಾರು ಪ್ರತಿಭಟನಾ ನಿರತ ರೈತರು ಗ್ರೌಂಡ್​ನಲ್ಲಿ ನೆರೆದಿದ್ದರು ಎನ್ನಲಾಗಿದೆ.

ನಂತರ ವಿಷಯ ತಿಳಿದ ಕೇಶವ್ ಪ್ರಸಾದ್ ಮೌರ್ಯ ಪ್ಲಾನ್ ಬದಲಿಸಿ ರಸ್ತೆ ಮಾರ್ಗವಾಗಿ ಮಧ್ಯಾಹ್ನದ ಹೊತ್ತಿಗೆ ಲಖಿಂಪುರ್ ಪ್ರವೇಶಿಸಿದರು ಎನ್ನಲಾಗಿದೆ.

ಕೇಶವ್ ಪ್ರಸಾದ್ ಮೌರ್ಯ ಅವರನ್ನು ಕರೆದೊಯ್ಯಲು ಆಶಿಷ್ ಮಿಶ್ರಾ ಕಾರ್ ಮೂಲಕ ತೆರಳಿದ್ದಾರೆ. ಈ ವೇಳೆ ರಸ್ತೆ ಮಧ್ಯೆ ರೈತರು ಕಾರ್ ಅಡ್ಡಗಟ್ಟಿದ್ದಾರೆ ಎನ್ನಲಾಗಿದೆ.

ಈ ವೇಳೆ ಮಾತಿಗೆ ಮಾತು ಬೆಳೆದು ಆಶಿಷ್ ಮಿಶ್ರಾ ರೈತರ ಮೇಲೆ ಕಾರ್ ಹರಿಸಿದ್ದಾನೆ ಎಂದು ಹೇಳಲಾಗಿದೆ.

ಇದರಿಂದ ಉದ್ರಿಕ್ತರಾದ ರೈತರು ಮೂರು ಕಾರ್​​ಗಳಿಗೆ ಬೆಂಕಿ ಹಚ್ಚಿದ್ದಾರೆ ಎಂಬ ಮಾಹಿತಿ ಇದೆ.

ಅಜಯ್ ಮಿಶ್ರಾ ಅವರ ಪುತ್ರ ಆಶಿಷ್ ಮಿಶ್ರಾ ರೈತರ ಜೊತೆಗಿನ ಗಲಾಟೆಯ ವೇಲೆ ರೈತರ ಮೇಲೆ ಕಾರ್ ಹರಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಘಟನೆಗೆ ಸಂಬಂಧಿಸಿದಂತೆ ವಿಪಕ್ಷಗಳು ಕಿಡಿಕಾರಿವೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈ ಬಲಿದಾನವನ್ನು ಸುಮ್ಮನೆ ಬಿಡುವುದಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

ನಾಳೆ ಪ್ರಿಯಾಂಕಾ ಗಾಂಧಿ ಲೆಖಿಂಪುರ್​ಗೆ ಭೇಟಿ ನೀಡಲಿದ್ದಾರೆ ಎಂಬ ಮಾಹಿತಿ ಇದೆ.

Copyright © All rights reserved Newsnap | Newsever by AF themes.
error: Content is protected !!