ಮುಂಬೈ: ಕೇಂದ್ರ ಸಚಿವ ಹಾಗೂ ಬಿಜೆಪಿಯ ಹಿರಿಯ ನಾಯಕ ನಿತಿನ್ ಗಡ್ಕರಿ ಬುಧವಾರ ಮಹಾರಾಷ್ಟ್ರದ ಯವತ್ಮಾಲ್‌ನಲ್ಲಿ ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಅಸ್ವಸ್ಥರಾಗಿ, ವೇದಿಕೆಯಲ್ಲಿ ಮಾತನಾಡುವಾಗ ಪ್ರಜ್ಞೆ ತಪ್ಪಿದ್ದು, ಕೆಳಕ್ಕೆ ಬಿದ್ದ ಘಟನೆ ಜರುಗಿದೆ.
ಗಡ್ಕರಿ ಅವರನ್ನು ಕೂಡಲೆ ಭದ್ರತಾ ಸಿಬ್ಬಂದಿ ಹಾಗೂ ಮುಖಂಡರು ಹಿಡಿದುಕೊಂಡರು.ಬಳಿಕ ವೈದ್ಯರು ತುರ್ತು ಚಿಕಿತ್ಸೆ ನೀಡಿದರು.
ಲೋಕಸಭೆ ಚುನಾವಣೆಯ ಮೊದಲ ಹಂತದಲ್ಲಿ ನಾಗ್ಪುರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಿತಿನ್ ಗಡ್ಕರಿ ಸ್ಪರ್ಧಿಸಿದ್ದರು. ಎರಡನೇ ಹಂತದಲ್ಲಿ ಯವತ್ಮಾಲ್ ಕ್ಷೇತ್ರದಿಂದ ಏಕನಾಥ್ ಶಿಂಧೆ ಅವರ ಶಿವಸೇನೆಯಿಂದ ಸ್ಪರ್ಧಿಸಿರುವ ರಾಜಶ್ರೀ ಪಾಟೀಲ್ ಪರವಾಗಿ ನಿತಿನ್ ಗಡ್ಕರಿ ಬುಧವಾರ ಪ್ರಚಾರ ನಡೆಸಿದರು.ರಾಹುಲ್ ಗಾಂಧಿ ‘ಪ್ರಧಾನಿಯಾಗಲು’ ಮೋದಿಗಿಂತ ಸಮರ್ಥರು : CM ಸಿದ್ದರಾಮಯ್ಯ
ಈ ವೇಳೆ ಗಡ್ಕರಿ ಸಭಿಕರನ್ನುದ್ದೇಶಿಸಿ ಭಾಷಣ ಮಾಡಿದರು. ವಿಪರೀತ ಬಿಸಲಿನಿಂದಾಗಿ ಗಡ್ಕರಿ ಮೂರ್ಚೆಹೋದಂತಾಗಿ ಕುಸಿಯುತ್ತಿದ್ದಂತೆ ಭದ್ರತಾ ಸಿಬ್ಬಂದಿ ಮತ್ತು ಪಕ್ಷದ ಮುಖಂಡರು ಅವರನ್ನು ಹಿಡಿದುಕೊಂಡರು. ಚಿಕಿತ್ಸೆ ನಂತರ ಗಡ್ಕರಿ ಚೇತರಿಸಿಕೊಂಡಿದ್ದಾರೆ.
More Stories
ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
IDBI ಬ್ಯಾಂಕಿನಲ್ಲಿ 600 ಹುದ್ದೆಗಳ ನೇಮಕಾತಿ – 2024
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ