December 25, 2024

Newsnap Kannada

The World at your finger tips!

underworld,criminal,trapped

Underworld criminal trapped in lodge with girlfriend - five cops involved

ಪ್ರೇಯಸಿಯೊಂದಿಗೆ ಲಾಡ್ಜ್ ನಲ್ಲಿ ಸಿಕ್ಕಿ ಹಾಕಿಕೊಂಡ ಭೂಗತ ಪಾತಕಿ -ಐವರು ಪೋಲಿಸರೂ ಶಾಮೀಲು

Spread the love

ಅಪಾದಿತ ಭೂಗತ ಪಾತಕಿಯೊಬ್ಬ ಧಾರವಾಡದಲ್ಲಿ ತನ್ನ ಪ್ರೇಯಸಿಯೊಂದಿಗೆ ಲಾಡ್ಜ್ ನಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಈ ಭೂಗತ ಪಾತಕಿಯನ್ನು ಲಾಡ್ಜ್​ ಕರೆತಂದು ಲವರ್​ ಜೊತೆ ಬಿಟ್ಟಿದ್ದೇ ಬಳ್ಳಾರಿ ಪೊಲೀಸರು.ಇದನ್ನು ಓದಿ –ಆ.26 ರಂದು ಮಡಿಕೇರಿಯಲ್ಲಿ ಕಾಂಗ್ರೆಸ್ – ಬಿಜೆಪಿ ಕಾಳಗ : ಬಲ ಪ್ರದರ್ಶನಕ್ಕೆ ವೇದಿಕೆ ಸಜ್ಜು


ಧಾರವಾಡದ ಪ್ರಕೃತಿ ರೆಸಿಡೆನ್ಸಿ ಲಾಡ್ಜ್. ಇದು ಧಾರವಾಡದ ಸತ್ತೂರು ಬಡಾವಣೆಯಲ್ಲಿದೆ ಈ ಪ್ರಕೃತಿ ಲಾಡ್ಜ್​ ನಿನ್ನೆ ಶಾಕಿಂಗ್ ಘಟನೆಯೊಂದಕ್ಕೆ ಸಾಕ್ಷಿಯಾಗಿದೆ.

ನಿನ್ನೆ ಈ ಲಾಡ್ಜ್​ ಮೇಲೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಲಾಭೂರಾಮ್ ನೇತೃತ್ವದಲ್ಲಿ ರೇಡ್​ ಮಾಡಿದಾಗ ಪ್ರಕೃತಿ ಲಾಡ್ಜ್​ನಲ್ಲಿ ಪ್ರೇಯಸಿಯೊಂದಿಗಿದ್ದ ಭೂಗತ ಪಾತಕಿ ಬಚ್ಚಾಖಾನ್ ಸಿಕ್ಕಿಬಿದ್ದಿದ್ದ.

ಬಿಲ್ಡರ್ ಸುಬ್ಬಾರೆಡ್ಡಿ ಕೊಲೆ ಕೇಸಿನಲ್ಲಿ ಎರಡನೇ ಆರೋಪಿ ಬಚ್ಚಾಖಾನ್ ಅಪರಾಧ ಸಾಬೀತಾದ ನಂತರ ಜೀವಾವಧಿಯ ಶಿಕ್ಷೆ ಅನುಭವಿಸುತ್ತಿದ್ದಾನೆ ಬೆಂಗಳೂರಿನ ವೈಯಾಲಿ ಕಾವಲ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಹತ್ಯೆ ನಡೆದಿತ್ತು.

ಮತ್ತೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಬಚ್ಚಾಖಾನ್​ನನ್ನು ಬಳ್ಳಾರಿಯಿಂದ ಕರೆ ತಂದು ಧಾರವಾಡದ ಕೋರ್ಟ್​ಗೆ ಹಾಜರು ಪಡಿಸಿದ್ದು ಆಯ್ತು.

ವಾಪಸ್​ ಕರೆದೊಯ್ಯುವಾಗ ಆಗಿದ್ದು, ಅಕ್ಷರಶಃ ಯಡವಟ್ಟು. ಬಚ್ಚಾಖಾನ್​ನನ್ನು ಬಳ್ಳಾರಿ ಕೇಂದ್ರ ಕಾರಾಗೃಹದಿಂದ ಧಾರವಾಡ ಕೋರ್ಟ್​ಗೆ ಐವರು ಪೊಲೀಸರು ಕರೆ ತಂದಿದ್ದರು. ವಿಚಾರಣೆ ಬಳಿಕ ಮರಳಿ ಬಳ್ಳಾರಿಗೆ ಹೋಗದೇ ಧಾರವಾಡದ ಸತ್ತೂರು ಬಡಾವಣೆಯಲ್ಲಿರುವ ಪ್ರಕೃತಿ ರೆಸಿಡೆನ್ಸಿ ಲಾಡ್ಜ್ ನೊಳಗೆ ಬಿಟ್ಟಿದ್ದಾರೆ ಎನ್ನಲಾಗಿದೆ.

ಆಗಲೇ ಅಲ್ಲಿ ಈತನಿಗೋಸ್ಕರ ಪ್ರೇಯಸಿ ಕಾಯುತ್ತಿದ್ದಳು. ಒಳಗೆ ಹೋಗಿ ಸರಸ ಶುರುವಿಟ್ಟುಕೊಂಡಿದ್ದ ಪಾತಕಿಗೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಲಾಭೂರಾಮ್ ಶಾಕ್ ನೀಡಿದ್ದರು.

ಪೊಲೀಸ್ ಆಯುಕ್ತರಿಗೆ ಬಂದಿದ್ದ ಮಾಹಿತಿ ಆಧರಿಸಿ ಆಯುಕ್ತರು ರೇಡ್ ಮಾಡಿದಾಗ ಬಚ್ಚಾಖಾನ್ ಸರಸದ ವೇಳೆಯಲ್ಲೇ ಸಿಕ್ಕಿಬಿದ್ದಿದ್ದ. ಕೂಡಲೇ ಆತನನ್ನು ವಶಕ್ಕೆ ಪಡೆದ ಪೊಲೀಸರು ವಿದ್ಯಾಗಿರಿ ಠಾಣೆಗೆ ಕರೆ ತಂದಿದ್ದಾರೆ.

ಬಳ್ಳಾರಿ ಜೈಲಿನಿಂದ ಕರೆ ತಂದಿದ್ದ ಐವರು ಪೊಲೀಸ್ ಸಿಬ್ಬಂದಿ ಮೇಲೆಯೂ ಕ್ರಮ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ. ಈ ಮಧ್ಯೆ ಬಚ್ಚಾಖಾನ್ ಬಳಿ ನಗದು ಕೂಡ ಪತ್ತೆಯಾಗಿದೆ ಎನ್ನಲಾಗಿದೆ. ವಿಚಾರಣೆ ಮುಂದುವರೆದಿದೆ.

Copyright © All rights reserved Newsnap | Newsever by AF themes.
error: Content is protected !!