ಮಂಡ್ಯದಲ್ಲೂ ಮೇ 4 ರ ತನಕ ಅಘೋಷಿತ ಬಂದ್ : ಅಂಗಡಿ ಮುಂಗಟ್ಟು ಬಂದ್ ಗೆ ಪೋಲಿಸರ ಒತ್ತಡ

Team Newsnap
1 Min Read

ಕೊರೋನಾ ತಡೆಗೆ ಸರ್ಕಾರ ರಾಜ್ಯಾದ್ಯಂತ ಬಿಗಿ‌ ಕ್ರಮಗಳನ್ನು ಕೈಗೊಂಡಿದೆ. ಅಗತ್ಯ ವಸ್ತುಗಳನ್ನು ಹೊರತು ಪಡಿಸಿ ಮಂಡ್ಯದಲ್ಲಿ ಗುರುವಾರ ಅಂಗಡಿ ಮುಂಗಟ್ಟುಗಳನ್ನು ಪೋಲಿಸರು , ಅಧಿಕಾರಿಗಳು ಬಲವಂತವಾಗಿ ಮುಚ್ಚಿಸಿದರು.

ಹೀಗಾಗಿ ಮಂಡ್ಯದಲ್ಲೂ ಬಹುತೇಕ ಅಂಗಡಿ ಮುಂಗಟ್ಟು ಬಂದ್ ಆಗಿವೆ.
ಅಗತ್ಯ ಸೇವೆ ಹೊರತುಪಡಿಸಿ ಉಳಿದ ವಹಿವಾಟು ಸ್ತಬ್ಧವಾಗಿವೆ.

ಪ್ರಮುಖ ವಾಣಿಜ್ಯ ಮಳಿಗೆಗಳ ಬಾಗಿಲು ಹಾಕಿವೆ. ಅಲ್ಲೊಂದು ಇಲ್ಲೊಂದು ಅಂಗಡಿ ತೆರೆದು ವ್ಯಾಪಾರ ಮಾಡುತ್ತಿದ್ದಾರೆ

ತಹಶೀಲ್ದಾರ್, ನಗರಸಭೆ ಅಧಿಕಾರಿಗಳ ಪ್ರತ್ಯೇಕ ಕಾರ್ಯಾಚರಣೆ ನಡೆಸಿ
ಅಗತ್ಯ ಸೇವೆಗಳಿಗೆ ಮಾತ್ರ ಆದ್ಯತೆ.
ಉಳಿದೆಲ್ಲ ಮೊಬೈಲ್ ಶಾಪ್, ಎಲೆಕ್ಟ್ರಾನಿಕ್ಸ್ ಉಪಕರಣಗಳು, ಚಿನ್ನ ಬೆಳ್ಳಿ ಅಂಗಡಿಗಳಿಗೆ ಬೀಗ ಹಾಕುವಂತೆ ಒತ್ತಾಯಿಸಿದರು.

ಇಂದಿನಿಂದ ಮೇ 4ರವರೆಗೆ ಬಾಗಿಲು ತೆರೆಯದಂತೆ ಕಟ್ಟು ನಿಟ್ಟಿನ ಆದೇಶ ಮಾಡಿದರು. ಹೋಟೆಲ್, ಬಾರ್ ಅಂಡ್ ರೆಸ್ಟೋರೆಂಟ್ ಗಳಲ್ಲಿ ಪಾರ್ಸಲ್ ಮಾತ್ರ.
ಆದೇಶ ಉಲ್ಲಂಘಿಸಿದರೆ ಕಾನೂನು ಕ್ರಮದ ಎಚ್ಚರಿಕೆಯನ್ನು ಅಧಿಕಾರಿಗಳು ಮಾಡಿದರು.

ಸರ್ಕಾರದ ಆದೇಶಕ್ಕೆ ತಲೆಬಾಗದ ಕೆಲವು ವ್ಯಾಪಾರಸ್ಥರು.ಅಂಗಡಿ ಮುಂಗಟ್ಟು ತೆರೆದು ವ್ಯಾಪಾರದಲ್ಲಿ ತೊಡಗಿದ್ದಾರೆ.

ಅಗತ್ಯ ಸೇವೆಗಳನ್ನು ಹೊರತು ಪಡಿಸಿಯೂ ಅಂಗಡಿ ಓಪನ್ ಮಾಡಿದ್ದಾರೆ. ಶೇ.30ರಷ್ಟು ಮಾತ್ರ ಅಂಗಡಿ ಮುಂಗಟ್ಟು ಬಂದ್ ಆಗಿವೆ.ಕೆಲವು ಕಡೆ
ಅಂಗಡಿ ಮುಂಗಟ್ಟು ತೆರೆದಿದ್ರೂ ಮುಚ್ಚಿಸಲು ಬಾರದ ಪೊಲೀಸರು.

Share This Article
Leave a comment