January 29, 2026

Newsnap Kannada

The World at your finger tips!

umashree

ನಟಿ ಉಮಾಶ್ರೀ ಕಾರು ಅಪಘಾತ: ಇಬ್ಬರು ಸಾವು

Spread the love

ಗದಗನಿಂದ ಹುಬ್ಬಳ್ಳಿಯತ್ತ ಬರುತ್ತಿದ್ದ ಇನ್ನೋವಾ ಕಾರು ಮತ್ತು ಹುಬ್ಬಳ್ಳಿಯಿಂದ ಗದಗನತ್ತ ಹೊರಟಿದ್ದ ಇನ್ನೊಂದು ಕಾರಿನ ನಡುವೆ ಶುಕ್ರವಾರ ರಾತ್ರಿ ಡಿಕ್ಕಿಯಾಗಿದ್ದು, ಇಬ್ಬರು ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಇನ್ನಿಬ್ಬರಿಗೆ ಗಂಭೀರ ಗಾಯಗಳಾಗಿವೆ.

ಹುಬ್ಬಳ್ಳಿಯಿಂದ ಹೊರಟಿದ್ದ ಕಾರು ಚಿತ್ರನಟಿ ಹಾಗೂ ರಾಜಕಾರಣಿ ಉಮಾಶ್ರೀ ಅವರಿಗೆ ಸೇರಿದ್ದಾಗಿದೆ. ಕಾರಿನಲ್ಲಿ ಉಮಾಶ್ರೀ ಅವರು ಇರಲಿಲ್ಲ. ಅವರನ್ನು ಬಿಟ್ಟು ಕಾರು ಚಾಲಕ ತಮ್ಮೂರಿಗೆ ಹೊರಟಿದ್ದ, ಈ ಕುರಿತು ಇನ್ನಷ್ಟು ಮಾಹಿತಿ ಕಲೆಹಾಕುತ್ತಿದ್ದೇವೆ ಎಂದು ಹುಬ್ಬಳ್ಳಿ ಗ್ರಾಮೀಣ ಪೊಲೀಸರು ತಿಳಿಸಿದ್ದಾರೆ.

ಹುಬ್ಬಳ್ಳಿ ತಾಲ್ಲೂಕಿನ ಬಂಡಿವಾಡ ಸಮೀಪ ಅಪಘಾತ ನಡೆದಿದ್ದು, ಓವರ್‌ ಟೇಕ್‌ ಮಾಡುವ ಭರದಲ್ಲಿ ಎದುರಿಗೆ ಬಂದ ಕಾರುಗಳ ನಡುವೆ ಡಿಕ್ಕಿಯಾಗಿದೆ. ಮೃತಪಟ್ಟವರ ಹೆಸರುಗಳು ಪತ್ತೆಯಾಗಿಲ್ಲ. ಗಾಯಗೊಂಡಿರುವ ನವಲಗುಂದದ ವೈದ್ಯಕೀಯ ಅಧಿಕಾರಿ ಸ್ಮಿತಾ ಕಟ್ಟಿ ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

error: Content is protected !!