February 19, 2026

Newsnap Kannada

The World at your finger tips!

flight , crime , delhi

Ukraine war : ಮತ್ತೊಮ್ಮೆ ವಿಶ್ವಸಂಸ್ಥೆಯಲ್ಲಿ ರಷ್ಯಾ ವಿರುದ್ದ ಮತದಾನದಿಂದ ದೂರ ಸರಿದ ಭಾರತ

Spread the love

ಉಕ್ರೇನ್ ಮೇಲೆ ಯುದ್ಧ ಘೋಷಿಸಿರುವ ರಷ್ಯಾ ವಿರುದ್ಧ ವಿಶ್ವಸಂಸ್ಥೆಯ ಮತ್ತೊಂದು ಮತದಾನದಿಂದ ಭಾರತ ದೂರ ಸರಿದಿದೆ

ರಷ್ಯಾದ ಕ್ರಮಗಳ ಕುರಿತು ತನಿಖೆ ನಡೆಸಲು ಅಂತಾರಾಷ್ಟ್ರೀಯ ಸ್ವತಂತ್ರ ಆಯೋಗ ಸ್ಥಾಪಿಸುವ ತುರ್ತು ಅಗತ್ಯದ ಕುರಿತು ಮಾನವ ಹಕ್ಕುಗಳ ಮಂಡಳಿಯಲ್ಲಿನ ನಿರ್ಣಯದ ಮತದಾನಕ್ಕೆ ಭಾರತ ಗೈರಾಗಿದೆ.

47 ಸದಸ್ಯರ ಕೌನ್ಸಿಲ್‌ನಲ್ಲಿ 32 ದೇಶಗಳು ಸ್ವತಂತ್ರ ಆಯೋಗವನ್ನು ಸ್ಥಾಪಿಸುವ ತುರ್ತು ಅಗತ್ಯದ ಪರವಾಗಿ ಮತ ಚಲಾಯಿಸಿದರೆ, ರಷ್ಯಾ ಮತ್ತು ಎರಿಟ್ರಿಯಾ ವಿರುದ್ಧವಾಗಿ ಮತ ಚಲಾಯಿಸಿದವು.

ಭಾರತ, ಚೀನಾ ಮತ್ತು ಪಾಕಿಸ್ತಾನ ಸೇರಿದಂತೆ 13 ರಾಷ್ಟ್ರಗಳು ಮತದಾನದಿಂದ ದೂರ ಉಳಿದಿವೆ.

error: Content is protected !!