January 4, 2025

Newsnap Kannada

The World at your finger tips!

kid

ಉಜಿರೆ ಬಾಲಕನ ಕಿಡ್ನಾಪ್ ಸುಖಾಂತ್ಯ:ಮಾಸ್ತಿ ಬಳಿ 6 ಮಂದಿ ಅಪಹರಣಕಾರರ ಬಂಧನ

Spread the love

ಉಜಿರೆಯಲ್ಲಿ ಬಾಲಕನ ಕಿಡ್ನಾಪ್ ಪ್ರಕರಣ ಕೋಲಾರದಲ್ಲಿ ಸುಖಾಂತ್ಯ ಕಂಡಿದೆ.

ಕಿಡ್ನಾಪ್ ಆಗಿದ್ದ ಬಾಲಕ ಅನುಭವ್ (8) ಬಾಲಕನನ್ನು ಪೊಲೀಸರು ಸುರಕ್ಷಿತವಾಗಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೋಲಾರದ ಬಳಿ ಮಾಸ್ತಿಯಲ್ಲಿ ಮಗುವನ್ನು ಪತ್ತೆ ಹಚ್ಚಿ 6 ಜನ ಅಪಹರಣಕಾರರನ್ನು ಬಂಧಿಸಲಾಗಿದೆ. ಅಪಹರಣವಾದ 48 ಗಂಟೆಗಳಲ್ಲಿ ಪ್ರಕರಣವನ್ನು ಪೋಲಿಸರು ಭೇದಿಸಿದ್ದಾರೆ.

ಉಜಿರೆ ರಥಬೀದಿಯ ಬಿಜೋಯ್ ಮಗ ಅನುಭವ್ ಮನೆಯಂಗಳದಲ್ಲಿ ಆಡುತ್ತಿದ್ದಾಗಲೇ ಎರಡು ದಿನಗಳ ಹಿಂದೆ ಅಪಹರಣಕಾರರು ಅಪಹರಿಸಿದ್ದರು. ಉಭಯ ಜಿಲ್ಲೆಗಳಲ್ಲಿ ಈ ಪ್ರಕರಣ ಸಾಕಷ್ಟು ಆತಂಕ ಸೃಷ್ಟಿಸಿತ್ತು.

ಕೋಲಾರದ ಮಾಸ್ತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಹರಣಕಾರರನ್ನು ಮಗುವಿನೊಂದಿಗೆ ವಿಶೇಷ ತಂಡ ಪೊಲೀಸರು ಶನಿವಾರ ಬೆಳಗ್ಗೆ 5 ರ ಹೊತ್ತಿಗೆ ಪತ್ತೆ ಹಚ್ಚಿದರು. ಕೂಡಲೇ ಅಪಹರಣಕಾರರನ್ನು ಕೋಲಾರ ಪೊಲೀಸ್ ಠಾಣೆಗೆ ಕರೆತರಲಾಯಿತು.

ಅಪಹರಣಕಾರರು 17 ಕೋಟಿ ರು ಬೇಡಿಕೆ ಇಟ್ಟಿರುವ ಹಿನ್ನೆಲೆಯಲ್ಲಿ ಈ ಪ್ರಕರಣದ ಹಿಂದೆ ಯಾರ ಕೈವಾಡ ಇದೆ ಎಂಬುದನ್ನು ಮಂಗಳೂರು ಪೋಲಿಸರು ಬಯಲಿಗೆ ಎಳೆಯಲಿದ್ದಾರೆ.
ಈ ಕುರಿತಂತೆ ತನಿಖೆ ಮುಂದುವರೆದಿದೆ

Copyright © All rights reserved Newsnap | Newsever by AF themes.
error: Content is protected !!